/newsfirstlive-kannada/media/media_files/2026/02/28/gouri-kalyana-2026-02-28-14-00-14.jpg)
ತನ್ನದು ಶ್ರೀಮಂತ ಕುಟುಂಬ ಅಂತಾ ಸುಳ್ಳಿನ ಕಥೆ ಕಟ್ಟಿ ಕಾಂತಲಕ್ಷ್ಮೀ, ಮೋನಿಕಾ ಮತ್ತು ವಿವೇಕ್​ ಚಕ್ರವರ್ತಿ ನಿಶ್ಚಿತಾರ್ಥ ಮಾಡಿಸಿದ್ದಾಳೆ. ಇನ್ನೆನ್ನು ಮದುವೆ ಮಾತ್ರ ಬಾಕಿ ಇದೆ. ಆದ್ರೆ ಗೌರಿಯೇ ಮದುವೆ ಮನೆ, ಮಂಟಪ ರೆಡಿ ಮಾಡ್ಬೇಕು ಅನ್ನೊದು ದೀನಬಂಧು ಕುಟುಂಬದ ಆಸೆ.. ಮುಂದೆ ಗೌರಿ ದೀನಬಂಧು ಬೇಡಿಕೆಯನ್ನ ಒಪ್ಪಿಕೊಳ್ತಾಳ?
ಕಾಂತಲಕ್ಷ್ಮೀಗೆ ಗೌರಿ, ಚಿನ್ಮಯಿ ಹಾಗೂ ಮೋನಿಕಾ ಎಂಬ ಮೂವರು ಮುದ್ದಾದ ಹೆಣ್ಣುಮಕ್ಕಳು. ತನ್ನ ಮೂವರು ಹೆಣ್ಣು ಮಕ್ಕಳನ್ನ ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಿ ಕೊಡಬೇಕು ಎಂಬುದೇ ಕಾಂತಲಕ್ಷ್ಮೀ ಮಹಾದಾಸೆ.. ದೀನಬಂಧು ಕುಟುಂಬದ ಶ್ರೀಮಂತಕ್ಕೆ ಮರುಳಾಗಿ ತನ್ನ ದೊಡ್ಡ ಮಗಳು ಮೋನಿಕಾಳನ್ನ ಆ ಮನೆಗೆ ಸೊಸೆಯಾಗಿ ಕಳಿಸಬೇಕಂತ ನೂರಾರು ಪ್ರಯತ್ನ ಮಾಡ್ತಾಳೆ.
ಇದನ್ನೂ ಓದಿ: ಹೋಳಿ ಹಬ್ಬದಂದೇ ‘ಚಂದ್ರಗ್ರಹಣ’ ನೆರಳು; ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ..!
ನಂತರ ಗಂಡ ಶಾಂತವೀರಣ್ಣ, ಮತ್ತು ಗೌರಿ ಹಾಗೂ ಚನ್ಮಯಿ ವಿರೋದದ ನಡೆವೆಯೇ ಕಾಂತಲಕ್ಷ್ಮೀ, ನಮ್ಮದು ಶ್ರೀಮಂತ ಕುಟುಂಬ ಅಂತಾ ಸುಳ್ಳಿನ ಕಥೆ ಕಟ್ಟಿ, ಮೋನಿಕಾ ಮತ್ತು ವಿವೇಕ್​ ಚಕ್ರವರ್ತಿ ನಿಶ್ಚಿತಾರ್ಥ ಮಾಡಿಸ್ತಾಳೆ.
ಆದ್ರೆ ಮೋನಿಕಾ ತಂಗಿ ಗೌರಿ ಹಾಗೂ ವಿವೇಕ್ ಹಾವು ಮುಂಗುಸಿ ಅಂದ್ರೆ ತಪ್ಪಾಗಲ್ಲ. ಒಬ್ಬರನ್ನ ಕಂಡ್ರೆ ಒಬ್ಬರು ಉರಿದು ಬಿಳ್ತಾರೆ.. ಇನ್ನು ಗೌರಿ ಕಾಂತಲಕ್ಷ್ಮೀ ಮಗಳು ಎಂಬುದು ವಿವೇಕ್​ಗೆ ಆಗ್ಲಿ ದೀನಬಂಧು ಕುಟುಂಬಕ್ಕೆ ಆಗ್ಲಿ ಗೊತ್ತಿಲ್ಲಾ.. ಆದ್ರೆ ಮೋನಿಕಾ ಮತ್ತು ವಿವೇಕ್​ ಎಂಗೆಜ್​ಮೆಂಟ್​ ಟೈಮ್​ನಲ್ಲಿ ಗೌರಿಯೇ ಸುಂದರವಾದ ಮಂಟಪ, ಹಾಗೂ ಅಲಂಕಾರ ಮಾಡಿ ಎಲ್ಲರ ಗಮನ ಸೆಳೆದಿದ್ಲು.
ಮೋನಿಕಾ ಮತ್ತೆ ವಿವೇಕ್​ ಮದುವೆಗೆ ಭರದಿಂದ ಸಿದ್ದತೆ ನಡೆಯುತ್ತಿದೆ.. ಗೌರಿಯೇ ಆ ಮದುವೆ ಮನೆ , ಮಟಂಪದ ಅಲಂಕಾರ ಮಾಡ್ಬೇಕು ಅನ್ನೊಂದು ದೀನಬಂಧು ಕುಟುಂಬದ ಆಸೆ.. ಹೀಗಾಗಿ ಗೌರಿಯೊಂದಿಗೆ ಮಾತನಾಡುವಂತೆ ವಿವೇಕ್​ ತಮ್ಮ ಶ್ಯಾಮ್​ಗೆ ಹೇಳಲಾಗಿದೆ. ಶ್ಯಾಮ್​ ಕೂಡ ಗೌರಿಗೆ ಫೋನ್​ ಮಾಡಿ, ಮದುವೆ ಮನೆ, ಮಂಟಪ ಅಲಂಕಾರ ಮಾಡಿಕೊಡುವಂತೆ ಕೇಳ್ತಾನೆ..
ಇದನ್ನೂ ಓದಿ: ಇಸ್ರೇಲ್, ಅಮೆರಿಕಾದಿಂದ ಆಯತುಲ್ಲಾ ಅಲಿ ಖಮೇನಿ ಕಚೇರಿ, ಮನೆ ಮೇಲೆ ದಾಳಿ: ಇರಾನ್ ಪರಮಾಣು ಅಸ್ತ್ರ ಹೊಂದಲು ಬಿಡಲ್ಲ ಎಂದ ಟ್ರಂಪ್
ಈ ಪ್ರಾಜೆಕ್ಸ್​ ಒಪ್ಪಿಕೊಳ್ಳೊದಕ್ಕೆ ಆಗಲ್ಲ ಅಂತಾ ಗೌರಿ ಹೇಳಿದ್ದಾಳೆ.. ಬಳಿಕ ದೀನಬಂಧು ಕುಟುಂಬದವರೇ ಗೌರಿಯನ್ನ ಮನೆಗೆ ಕರೆಸಿ, ಕಲೆ ಎಂಬುದು ವ್ಯಾಪಾರ ವಸ್ತುವಲ್ಲ.. ಕಲೆಯೇ ದೇವರೆಂದು ನಂಬಿ ಬದುಕುತ್ತಿರುವ ನಿನ್ನ ಮೇಲೆ ಅಪಾರ ಗೌರವವಿದೆ.. ಮೋನಿಕಾ ವಿವೇಕ್​ ಮದುವೆಯನ್ನ ನಿನ್ನ ಮನೆ ಮದುವೆ ಅಂತಾ ಭಾವಿಸಿ ಮನೆವೆ ಮಂಟಪ , ಅಲಂಕಾರ ಮಾಡಿಕೊಡು ಆಂತಾ ಮನವಿ ಮಾಡ್ತಾರೆ..
ವಿವೇಕ್​ ಜೊತೆ ಮದುವೆ ಆಗ್ತಿರೋದು ತನ್ನ ಅಕ್ಕ ಅಂತ ನಿಜ ಹೇಳಲಾಗದೇ ಗೌರಿ ಧರ್ಮಸಂಕಟದಲ್ಲಿ ಸಿಲುಕಿದ್ದಾಳೆ.. ಮುಂದೆ ಗೌರಿ, ಅಕ್ಕನ ಮದುವೆಗೆ ಮಂಟಪ ರೆಡಿ ಮಾಡಲು ಒಪ್ಪಿಕೊಳ್ತಾಳಾ? ಗೌರಿ, ಮೋನಿಕಳ ತಂಗಿ ಅಂತಾ ಗೊತ್ತಾದ್ರೆ ಏನ್ ಆಗುತ್ತೆ? ಅನ್ನೊದು ಸದ್ಯಕಿರೋ ಸಸ್ಪೆನ್ಸ್​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us