Advertisment

ಹೋಳಿ ಹಬ್ಬದಂದೇ ‘ಚಂದ್ರಗ್ರಹಣ’ ನೆರಳು; ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ..!

ಬಣ್ಣಗಳ ಹಬ್ಬ ಹೋಳಿ (Holi 2026) ಸಮೀಪಿಸುತ್ತಿದೆ. ಆದರೆ ಈ ಬಾರಿ ಹಬ್ಬದ ಸಂಭ್ರಮದ ಜೊತೆಗೆ ಗ್ರಹಣದ ಆತಂಕವೂ ಎದುರಾಗಿದೆ. ಏಕೆಂದರೆ, 2026ರ ಹೋಳಿ ಹಬ್ಬದ ದಿನದಂದೇ ವರ್ಷದ ಮೊದಲ ‘ಚಂದ್ರಗ್ರಹಣ’ (Lunar Eclipse) ಸಂಭವಿಸಲಿದೆ.

author-image
Ganesh Kerekuli
chandra grahan (1)
Advertisment
  • ಚಂದ್ರಗ್ರಹಣ ದಿನಾಂಕ: ಮಾರ್ಚ್ 3, 2026
  • ಹೋಲಿಕಾ ದಹನ: ಮಾರ್ಚ್ 2, 2026 (ರಾತ್ರಿ)
  • ಬಣ್ಣಗಳ ಹೋಳಿ: ಮಾರ್ಚ್ 3, 2026
  • ಗ್ರಹಣವಿದ್ದರೂ ಮಾರ್ಚ್ 2 ರಂದು ಪೂಜೆ ಸಲ್ಲಿಸಲು ಅಡ್ಡಿಯಿಲ್ಲ

ನವದೆಹಲಿ: ಬಣ್ಣಗಳ ಹಬ್ಬ ಹೋಳಿ (Holi 2026) ಸಮೀಪಿಸುತ್ತಿದೆ. ಆದರೆ ಈ ಬಾರಿ ಹಬ್ಬದ ಸಂಭ್ರಮದ ಜೊತೆಗೆ ಗ್ರಹಣದ ಆತಂಕವೂ ಎದುರಾಗಿದೆ. ಏಕೆಂದರೆ, 2026ರ ಹೋಳಿ ಹಬ್ಬದ ದಿನದಂದೇ ವರ್ಷದ ಮೊದಲ ‘ಚಂದ್ರಗ್ರಹಣ’ (Lunar Eclipse) ಸಂಭವಿಸಲಿದೆ. ಹೀಗಾಗಿ ಹಬ್ಬದ ಆಚರಣೆ ಮತ್ತು ‘ಹೋಲಿಕಾ ದಹನ’ವನ್ನು (Holika Dahan) ಯಾವಾಗ ಮಾಡಬೇಕು ಎಂಬ ಗೊಂದಲ ಭಕ್ತರಲ್ಲಿ ಮೂಡಿದೆ.

Advertisment

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಹೋಳಿ ಮತ್ತು ಗ್ರಹಣದ ಲೆಕ್ಕಾಚಾರ ಇಲ್ಲಿದೆ.

ಗ್ರಹಣ ಯಾವಾಗ?

ವರದಿಗಳ ಪ್ರಕಾರ, 2026ರ ಮಾರ್ಚ್ 3 ರಂದು ‘ಸಂಪೂರ್ಣ ಚಂದ್ರಗ್ರಹಣ’ (Total Lunar Eclipse) ಸಂಭವಿಸಲಿದೆ. ಅಂದು ಫಾಲ್ಗುಣ ಹುಣ್ಣಿಮೆ ಅಥವಾ ಹೋಳಿ ಹುಣ್ಣಿಮೆಯಾಗಿದೆ. ಚಂದ್ರಗ್ರಹಣ ಮಾರ್ಚ್ 3 ರಂದು ನಡೆಯಲಿದ್ದರೂ, ಹೋಲಿಕಾ ದಹನವನ್ನು ಅದಕ್ಕೂ ಮುನ್ನಾದಿನ, ಅಂದರೆ ಮಾರ್ಚ್ 2 ರಂದು ನೆರವೇರಿಸುವುದು ಸೂಕ್ತ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಫೀಸ್ ಕಟ್ಟದಿದ್ಕೆ ಹಾಲ್ ಟಿಕೆಟ್ ನಿರಾಕರಣೆ, ಕಣ್ಣೀರಿಟ್ಟ ವಿದ್ಯಾರ್ಥಿನಿ! ‘ಪುಕ್ಸಟ್ಟೆ ಕಲಿಸ್ತಾರಾ’ ಅಂತಾ ಸಿಬ್ಬಂದಿ ಧಿಮಾಕು

chandra grahan

ಹಿಂದೂ ಪಂಚಾಂಗದ ಪ್ರಕಾರ, ಫಾಲ್ಗುಣ ಪೂರ್ಣಿಮಾ ತಿಥಿಯು ಮಾರ್ಚ್ 2 ರಂದು ಸಂಜೆ ಪ್ರಾರಂಭವಾಗಿ, ಮಾರ್ಚ್ 3 ರಂದು ಸಂಜೆ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಮಾರ್ಚ್ 2 ರ ರಾತ್ರಿಯೇ ಹೋಲಿಕಾ ದಹನ ಮಾಡುವುದು ಶ್ರೇಷ್ಟ. ಮರುದಿನ, ಅಂದರೆ ಮಾರ್ಚ್ 3 ರಂದು ಬಣ್ಣಗಳ ಹಬ್ಬವನ್ನು (ಧುಲೇಟಿ) ಆಚರಿಸಬಹುದು.

Advertisment

ಭಾರತದಲ್ಲಿ ಸೂತಕ ಇದೆಯೇ?

ಸಾಮಾನ್ಯವಾಗಿ ಗ್ರಹಣವಿದ್ದಾಗ ದೇವಾಲಯಗಳನ್ನು ಮುಚ್ಚಲಾಗುತ್ತದೆ ಮತ್ತು ಸೂತಕದ ನಿಯಮಗಳನ್ನು (Sutak) ಪಾಲಿಸಲಾಗುತ್ತದೆ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವ ಸಾಧ್ಯತೆ ಕಡಿಮೆ ಅಥವಾ ಭಾಗಶಃ ಇರುವುದರಿಂದ, ಸೂತಕದ ನಿಯಮಗಳು ಅನ್ವಯಿಸುವುದಿಲ್ಲ ಎಂದು ಕೆಲವು ಪಂಚಾಂಗಗಳು ತಿಳಿಸಿವೆ. ಆದರೂ, ಧಾರ್ಮಿಕ ವಿಧಿವಿಧಾನಗಳನ್ನು ಪಾಲಿಸುವವರು ಸ್ಥಳೀಯ ಪಂಚಾಂಗ ಅಥವಾ ಪುರೋಹಿತರನ್ನು ಸಂಪರ್ಕಿಸುವುದು ಉತ್ತಮ.

ಗ್ರಹಣದ ಸಮಯ

ಮಾರ್ಚ್ 3 ರಂದು ಸಂಭವಿಸಲಿರುವ ಈ ಗ್ರಹಣವು ಏಷ್ಯಾ, ಆಸ್ಟ್ರೇಲಿಯಾ, ಅಮೆರಿಕ ಮತ್ತು ಯುರೋಪ್‌ನ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಗ್ರಹಣದ ಪ್ರಭಾವ ಹೋಳಿ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನಿತ್ಯ ಕುಡಿದು ಗಲಾಟೆ ಮಾಡ್ತಿದ್ದ ಅಪ್ಪನ ಮುಗಿಸಿ ಠಾಣೆಗೆ ಬಂದ ಮಗ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Holika Dahan Time Lunar Eclipse on Holi Lunar eclipse Chandra Grahan 2026
Advertisment
Advertisment
Advertisment