Advertisment

ಫೀಸ್ ಕಟ್ಟದಿದ್ಕೆ ಹಾಲ್ ಟಿಕೆಟ್ ನಿರಾಕರಣೆ, ಕಣ್ಣೀರಿಟ್ಟ ವಿದ್ಯಾರ್ಥಿನಿ! ‘ಪುಕ್ಸಟ್ಟೆ ಕಲಿಸ್ತಾರಾ’ ಅಂತಾ ಸಿಬ್ಬಂದಿ ಧಿಮಾಕು

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿವೆ. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದರೆ, ಇತ್ತ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬರಿಗೆ ಹಾಲ್ ಟಿಕೆಟ್ ನೀಡದೆ ಸತಾಯಿಸಿದ ಅಮಾನವೀಯ ಘಟನೆ ನಡೆದಿದೆ.

author-image
Ganesh Kerekuli
haveri puc
Advertisment

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿವೆ. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದರೆ, ಇತ್ತ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬರಿಗೆ ಹಾಲ್ ಟಿಕೆಟ್ ನೀಡದೆ ಸತಾಯಿಸಿದ ಅಮಾನವೀಯ ಘಟನೆ ನಡೆದಿದೆ.

Advertisment

ಘಟನೆಯ ವಿವರ

ರಾಣೆಬೆನ್ನೂರಿನ BAGSS ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಾರಾ ಜೆಸ್ಸಿಕಾ ಸಂಕಷ್ಟಕ್ಕೆ ಸಿಲುಕಿದವರು. ಕಾಲೇಜಿಗೆ 30,000 ರೂ. ಶುಲ್ಕ ಬಾಕಿ ಉಳಿಸಿಕೊಂಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಇಂದು (ಶನಿವಾರ) ಕನ್ನಡ ಭಾಷಾ ವಿಷಯದ ಪರೀಕ್ಷೆ ಬರೆಯಲು ಸಾರಾ ಕಾಲೇಜಿಗೆ ಬಂದಿದ್ದರು. ಆದರೆ, ಶುಲ್ಕ ಬಾಕಿ ಇರುವುದರಿಂದ ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ಹೇಳಿದೆ. ಪರಿಣಾಮ ವಿದ್ಯಾರ್ಥಿನಿ ಪರೀಕ್ಷಾ ಕೊಠಡಿಯ ಒಳಗೆ ಹೋಗಲಾಗದೆ, ಹೊರಗೇ ನಿಂತು ಪರದಾಡುವಂತಾಯಿತು.

ಇದನ್ನೂ ಓದಿ:PPF ಖಾತೆದಾರರೇ ಗಮನಿಸಿ.. ಒಂದಕ್ಕಿಂತ ಹೆಚ್ಚು ಖಾತೆ ಇದ್ದರೆ ಏನಾಗುತ್ತದೆ? ಇಲ್ಲಿದೆ ಮಾಹಿತಿ..

ವಾಗ್ವಾದ, ಆಕ್ರೋಶ

ಕಾಲೇಜಿನ ಸಿಬ್ಬಂದಿ ಸುನೀತಾ ಬಿ. ಎಂಬುವರು ವಿದ್ಯಾರ್ಥಿನಿ ಸಾರಾಳನ್ನು ತಡೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಾಮಾಜಿಕ ಹೋರಾಟಗಾರ ಹನುಮಂತಪ್ಪ, ವಿದ್ಯಾರ್ಥಿನಿಯ ಭವಿಷ್ಯದ ದೃಷ್ಟಿಯಿಂದ ಹಾಲ್ ಟಿಕೆಟ್ ನೀಡುವಂತೆ ಆಗ್ರಹಿಸಿದರು.

Advertisment

ಈ ವೇಳೆ ಸುನೀತಾ ಬಿ. ಮತ್ತು ಹೋರಾಟಗಾರರ ನಡುವೆ ವಾಗ್ವಾದ ನಡೆಯಿತು. ಎಲ್ಲಾ ಕಾಲೇಜಿನವರು ಪುಕ್ಕಟೆ (Free) ಕಲಿಸ್ತಾರಾ? ಎಂದು ಸುನೀತಾ ಪ್ರಶ್ನಿಸಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು. ಇದಕ್ಕೆ ಕೆಂಡಾಮಂಡಲವಾದ ಹನುಮಂತಪ್ಪ, ಕೇವಲ ಹಣಕ್ಕಾಗಿ ವಿದ್ಯಾರ್ಥಿನಿಯ ಭವಿಷ್ಯ ಹಾಳು ಮಾಡುತ್ತಿದ್ದೀರಿ ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವರ್ಷವಿಡೀ ಓದಿದ ವಿದ್ಯಾರ್ಥಿನಿ, ಕೊನೆ ಕ್ಷಣದಲ್ಲಿ ಪರೀಕ್ಷೆ ಬರೆಯಲಾಗದೆ ಕೇಂದ್ರದ ಮುಂದೆ ನಿಂತು ಕಣ್ಣೀರು ಹಾಕುವಂತಾಗಿರುವುದು ನೋಡುಗರ ಮನಕಲಕುವಂತಿತ್ತು.

ಇದನ್ನೂ ಓದಿ: ದಾಖಲೆಯ ಬಜೆಟ್ ಮಂಡನೆಗೆ CM ತಯಾರಿ.. ಸಿದ್ದರಾಮಯ್ಯ ಮುಂದಿದೆ ಸಾಲು ಸಾಲು ಸವಾಲು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Hall Ticket Denied Haveri news
Advertisment
Advertisment
Advertisment