/newsfirstlive-kannada/media/media_files/2026/02/28/gadah-son-and-father-2026-02-28-11-09-25.jpg)
ಗದಗ/ಲಕ್ಷ್ಮೇಶ್ವರ: ಕುಡಿದು ಬಂದು ದಿನನಿತ್ಯ ಗಲಾಟೆ ಮಾಡುತ್ತಿದ್ದ ತಂದೆಯ ವರ್ತನೆಗೆ ಬೇಸತ್ತು, ಹೆತ್ತ ಮಗನೇ ಅಪ್ಪನನ್ನು ಮುಗಿಸಿರುವ ಘೋರ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ
ಶಂಕರಗೌಡ ದ್ಯಾಮನಗೌಡ್ರ (60) ಮೃತ ದುರ್ದೈವಿ. ಈತನ ಮಗ ಪ್ರಭು ದ್ಯಾಮನಗೌಡ್ರ (23) ಆರೋಪಿ. ಶಂಕರಗೌಡ ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಮನೆಯಲ್ಲಿ ಜಗಳ ತೆಗೆದು ಗಲಾಟೆ ಮಾಡಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಮಗ ಪ್ರಭು, ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಕೈಯಿಂದಲೇ ತಂದೆಯ ತಲೆ ಹಾಗೂ ಮರ್ಮಾಂಗಕ್ಕೆ ಬಲವಾಗಿ ಹೊಡೆದ ಪರಿಣಾಮ ಶಂಕರಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಠಾಣೆಗೆ ಬಂದು ಶರಣಾದ ಮಗ
ತಂದೆಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಪ್ರಭು, ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರ ಮುಂದೆ, "ನನ್ನ ತಂದೆ ನಿತ್ಯ ಕುಡಿದು ಬಂದು ಕಾಟ ಕೊಡುತ್ತಿದ್ದ, ಸಹಿಸಲಾರದೆ ಹೊಡೆದು ಸಾಯಿಸಿದೆ" ಎಂದು ಹೇಳಿಕೆ ನೀಡಿದ್ದಾನೆ.
ಆಸ್ತಿಗಾಗಿ ನಡೀತಾ..?
ಮೇಲ್ನೋಟಕ್ಕೆ ಕುಡಿದು ಗಲಾಟೆ ಮಾಡಿದ್ದೇ ಕೃತ್ಯಕ್ಕೆ ಕಾರಣ ಎಂದು ಆರೋಪಿ ಹೇಳಿದ್ದರೂ, ಇದರ ಹಿಂದೆ ಆಸ್ತಿ ವಿವಾದದ ಶಂಕೆಯೂ ವ್ಯಕ್ತವಾಗಿದೆ. 2 ಎಕರೆ ಜಮೀನು ಹಂಚಿಕೆ ವಿಷಯವಾಗಿ ತಂದೆ ಮತ್ತು ಮಗನ ನಡುವೆ ವೈಮನಸ್ಸು ಇತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಜಗಳ ತಾರಕಕ್ಕೇರಿಅಂತ್ಯವಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಲಕ್ಷ್ಮೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us