/newsfirstlive-kannada/media/post_attachments/wp-content/uploads/2025/05/ramachari1.jpg)
ಕಲರ್ಸ್​ ಕನ್ನಡ ವಾಹಿನಿಯಲ್ಲಿ ಗೌರಿ ಕಲ್ಯಾಣ ಎಂಬ ಹೊಸ ಧಾರಾವಾಹಿ ಬರೋದಕ್ಕೆ ಸಜ್ಜಾಗಿದೆ. ಇದೊಂದು ಪಕ್ಕಾ ಮಿಡ್ಲ್​ ಕ್ಲಾಸ್​ ಕುಟುಂಬದ ಕಥೆ. ಬಡತನಕ್ಕೆ ಸೆಡ್ಡು ಹೊಡೆದು ಮೂವರು ಹೆಣ್ಮಕ್ಕಳನ್ನ ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಿಕೊಡ್ಬೇಕು ಎಂಬುದೇ ಆ ತಾಯಿಯ ಆಸೆ, ಕನಸು. ದೂರದ ಆಲೋಚನೆ.
ಇನ್ನಷ್ಟು ಸೀರಿಯಲ್ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ಗೌರಿ ಕಲ್ಯಾಣಕ್ಕೆ ಖ್ಯಾತ ನಿರ್ಮಾಪಕ, ನಿರ್ದೇಶಕ ಕೆ.ಎಸ್​ ರಾಮ್​ಜಿ ಬಂಡವಾಳ ಹೂಡಿದ್ದಾರೆ. ಇದುವರೆಗೂ ಇವ್ರ ಪ್ರೊಡೋಕ್ಷನ್​​ನಿಂದ ಪುಟ್ಟಗೌರಿ ಮದುವೆ, ಮಂಗಳಗೌರಿ ಮದುವೆ, ಬೃಂದಾವನ, ರಾಮಾಚಾರಿ, ನಾಗಿಣಿ, ಯಜಮಾನ ಸೇರಿದಂತೆ ಸಾಕಷ್ಟು ಗೌರಿ ಹೆಸರಿನ ಜೊತೆ ಸೂಪರ್​ ಹಿಟ್​​ ಸೀರಿಯಲ್​ಗಳು ಕಿರುತೆರೆಯಲ್ಲಿ ರಾರಾಜಿಸಿವೆ. ಈ ಲಿಸ್ಟ್​ಗೆ ಗೌರಿ ಕಲ್ಯಾಣ ಸೆರೋಕೆ ರೆಡಿಯಾಗಿದೆ.
ಇನ್ನೂ ಗೌರಿ ಕಲ್ಯಾಣ ಬರುವಿಕೆಗೆ ಯಾವ ಧಾರಾವಾಹಿ ದಾರಿ ಬಿಟ್ಟುಕೊಟ್ಟು ಮುಕ್ತಾಯವಾಗುತ್ತೆ ಎಂಬ ಪ್ರಶ್ನೆಗೆ ಉತ್ತರ ರಾಮಾಚಾರಿ ಹಾಗೂ ಯಜಮಾನ ಎನ್ನಲಾಗ್ತಿದೆ. ಈಗಾಗ್ಲೇ ಎರಡು ಧಾರಾವಾಹಿಗಳು ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಮುಕ್ತಾಯದ ಸೂಚನೆ ನೀಡಿವೆ. ಒಟ್ನಲ್ಲಿ ಮತ್ತೊಂದು ಗೌರಿ ಪರ್ವ ಶುರುವಾಗೋದು ಗ್ಯಾರಂಟಿ.
ಇದನ್ನೂ ಓದಿ: ಗಿಚ್ಚಿ-ಗಿಲಿಗಿಲಿ ಶಿವು-ಮಾನಸ ಮಧ್ಯೆ ಪ್ರೀತಿ, ಪ್ರೇಮ.. ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us