/newsfirstlive-kannada/media/media_files/2025/08/24/kiran-raj-2025-08-24-18-09-11.jpg)
ಕರ್ಣ ಸೀರಿಯಲ್​ನಲ್ಲಿ ಕಿರಣ್​ ರಾಜ್​ ತಾಳ್ಮೆ, ಸಹನೆಯಿಂದ ನಡೆದುಕೊಳ್ಳೋದು ಫ್ಯಾನ್ಸ್​ಗೆ ಇಷ್ಟ ಆಗುತ್ತಿಲ್ಲ. ಇಷ್ಟೊಂದು ಸಹನೆ ಒಳ್ಳೆದಲ್ಲ. ನಮ್ಮ ಹೀರೋ ಹೀಗ್​ ಇರೋದನ್ನ ನೋಡೋಕೆ ಆಗಲ್ಲ ಅಂತ ಬೇಸರ ಹೊರ ಹಾಕುತ್ತಿದ್ದರು.
/filters:format(webp)/newsfirstlive-kannada/media/post_attachments/wp-content/uploads/2025/03/kiran-raj4.jpg)
ಇದನ್ನೂ ಓದಿ: ಅದ್ಧೂರಿಯಾಗಿ ಮಗಳ ಹುಟ್ಟುಹಬ್ಬ ಆಚರಿಸಿದ ಬಿಗ್​ಬಾಸ್​ ಖ್ಯಾತಿಯ ಧನರಾಜ್ ಆಚಾರ್ ದಂಪತಿ
ಕೊನೆಗೂ ಹೀರೋ ಖಡಕ್​ ಡೈಲಾಗ್​ ಹೊಡೆದು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಹೌದು, ತಾತನಿಗೆ ಕೊಟ್ಟ ಮಾತಿಗೆ ಕಟ್ಟು ಬಿದ್ದು, ಮನೆಯವ್ರು ಎಷ್ಟೇ ಕಷ್ಟ ಕೊಟ್ಟರು ಸಹಿಸಿಕೊಂಡು ನಗ್ತಾ ಇರೋ ಪಾತ್ರ ಕರ್ಣ. ಆದರೆ, ಹೀರೋ ಯಾವಾಗಲೂ ಗತ್ತಲ್ಲಿ ಇರ್ಬೇಕು ಅನ್ನೋದು ವೀಕ್ಷಕರ ಆಸೆ. ಈ ಆಸೆಗೆ ನಿರಾಸೆ ಮಾಡದೇ ಅಪ್ಪನ ವಿರುದ್ಧ ಕರ್ಣ ಧ್ವನಿಯತ್ತಿದ್ದು, ವೀಕ್ಷಕರ ಮನ ಗೆದ್ದಿದೆ. ಆ ಎಪಿಸೋಡ್​ಗೆ ಸಖತ್​ ರೆಸ್ಪಾನ್ಸ್​ ಸಿಕ್ಕಿದೆ.
/filters:format(webp)/newsfirstlive-kannada/media/post_attachments/wp-content/uploads/2025/03/kiran-raj1.jpg)
ಕ್ಲಾಸ್​ ಮಾಸ್​ ಎರಡೂ ಶೇಡ್​ನಲ್ಲೂ ಕಿರಣ್​ ರಾಜ್​ ಕಮಾಲ್​ ಮಾಡ್ತಿದ್ದಾರೆ. ಸದ್ಯ ಲವರ್​ ಬಾಯ್​ ಲುಕ್​ನಲ್ಲೂ ಹ್ಯಾಂಡ್ಸಮ್​ ಆಗಿ ಕಾಣ್ತಿದ್ದಾರೆ ಡಾಕ್ಟ್ರು. ಕರ್ಣನಿಗೆ ಎಲ್ಲಿ ನೋಡಿದ್ರು ನಿಧಿನೇ ಕಾಣಸ್ತಿದ್ದು, ಡಾಕ್ಟರ್‌ಗೆ ನಿಧಿ ಕೊಟ್ಟಿರೋ ಲವ್​ ಟಾನಿಕ್ ಚನ್ನಾಗಿಯೇ ವರ್ಕೌಟ್​ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us