‘ತಪ್ಪು ತಪ್ಪು ಮಾತನ್ನಾಡಿ ಫೇಮಸ್..’ ಎಂದಿದ್ದ ಜಾಹ್ನವಿಗೆ ರಕ್ಷಿತಾ ಶೆಟ್ಟಿ ಕ್ಲಾಸ್​..! VIDEO

ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ಕಿಚ್ಚು ಜೋರಾಗಿದೆ. ಎರಡನೇ ವಾರ ಮನೆಯಿಂದ ಆಚೆ ಹೋಗಲು ನೇರ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಈ ವೇಳೆ ಜಾಹ್ನವಿ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಟಾಕ್ ವಾರ್​ ನಡೆದಿದೆ.

author-image
Ganesh Kerekuli
Rakhshita Shetty
Advertisment

ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ (Nomination) ಕಿಚ್ಚು ಜೋರಾಗಿದೆ. ಎರಡನೇ ವಾರ ಮನೆಯಿಂದ ಆಚೆ ಹೋಗಲು ನೇರ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಈ ವೇಳೆ ಜಾಹ್ನವಿ ಹಾಗೂ ರಕ್ಷಿತಾ ಶೆಟ್ಟಿ (Jahnavi and Rakshita Shetty) ಮಧ್ಯೆ ಟಾಕ್ ವಾರ್​ ನಡೆದಿದೆ. 

ಕಲರ್ಸ್ ಕನ್ನಡ ಹಂಚಿಕೊಂಡಿರುವ ಪ್ರೊಮೋದಲ್ಲಿ ಬಹುತೇಕ ಸ್ಪರ್ಧಿಗಳು ಜಾಹ್ನವಿ ಹೆಸರು ತೆಗೆದುಕೊಂಡಿದ್ದಾರೆ. ಅಂತೆಯೇ ರಕ್ಷಿತಾ ಶೆಟ್ಟಿ ಕೂಡ ಜಾಹ್ನವಿಯನ್ನು ನಾಮಿನೇಟ್ ಮಾಡಿದ್ದಾರೆ. ಈ ವೇಳೆ ರಕ್ಷಿತಾ ಶೆಟ್ಟಿ ನಾಮಿನೇಟ್​ ಮಾಡಲು ಕಾರಣವನ್ನೂ ನೀಡಿದ್ದಾರೆ. 

ಇದನ್ನೂ ಓದಿ:ಚಿತ್ರೀಕರಣದ ವೇಳೆ ನಟಿಗೆ ಲೈಂ*ಕ ಕಿರುಕುಳ ಆರೋಪ.. ನಿರ್ಮಾಪಕ ಹೇಮಂತ್ ಅರೆಸ್ಟ್..!

RAKSHITHA_SUDEEP

ಪ್ರೊಮೋದಲ್ಲಿ ತೋರಿಸಿರುವ ವಿಡಿಯೋ ಪ್ರಕಾರ.. ‘ಅಂದು ನೀವು ಎಂಥ ಹೇಳಿದ್ದು.. ಒಟ್ಟು ಒಟ್ಟು.. ಮಾತನ್ನಾಡಿ ಬಂದಿದ್ದು ಅಂತಾ ಹೇಳಿದ್ರಿ.. ಹೇಳೋದು ಈಜಿ. ಆದರೆ ನಿಮ್ಗೆ ನನ್ನ ಹಿನ್ನೆಲೆ ಗೊತ್ತಿಲ್ಲ. ನೀವೂ ಕೂಡ ಒಂದು ದಿನ ವೈರಲ್ ಆಗಬಹುದು. ಅದಕ್ಕೂ ಕೂಡ ಟ್ಯಾಲೆಂಟ್ ಇರಬೇಕು. ಎಲ್ಲಾ ಪ್ರೊಫೆಷನಲ್​​ಗೂ ನೀವು ರೆಸ್ಪೆಕ್ಟ್ ಕೊಡಬೇಕು ಎಂದು ಗುಡುಗಿದ್ದಾರೆ. 

ರಕ್ಷಿತಾ ಶೆಟ್ಟಿ ಮಾತಿಗೆ ಅದು ನನ್ನ ಅಭಿಪ್ರಾಯವಷ್ಟೇ, ನಿಮ್ಮಷ್ಟು ಸ್ಮಾರ್ಟ್ ನಾನಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇಬ್ಬರ ನಡುವೆ ಏನೆಲ್ಲ ಟಾಕ್ ವಾರ್ ಆಗಿದೆ ಅನ್ನೋದು ಇಂದು ರಾತ್ರಿ ಗೊತ್ತಾಗಲಿದೆ. ಬಿಗ್​ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನವೇ ರಕ್ಷಿತಾಗೆ ಶಾಕ್ ಆಗಿತ್ತು. ಈ ಕೂಡಲೇ ಮನೆಯಿಂದ ಒಬ್ಬರನ್ನು ಆಚೆ ಕಳುಹಿಸಬೇಕು ಎಂದು ಬಿಗ್​ಬಾಸ್ ಆದೇಶ ನೀಡಿದ್ದರು. ಆಗ ರಕ್ಷಿತಾ ಶೆಟ್ಟಿ ಹೆಸರನ್ನ ಬಹುತೇಕ ಸ್ಪರ್ಧಿಗಳು ಸೂಚಿಸಿದ್ದರು. ಅಂತೆಯೇ ಜಾಹ್ನವಿ ಕೂಡ ರಕ್ಷಿತಾ ಹೆಸರನ್ನೇ ಸೂಚಿಸಿದ್ದರು. ಅದಕ್ಕೆ ಜಾಹ್ನವಿ ಕಾರಣ ಕೂಡ ನೀಡಿದ್ದರು. ‘ತಪ್ಪು ತಪ್ಪು ಮಾತನ್ನಾಡಿ ಫೇಮಸ್ ಆಗೋದು ಇರುತ್ತದೆ. ನನ್ನ ಪ್ರಕಾರ ರಕ್ಷಿತಾರನ್ನು ಮನೆಯಿಂದ ಆಚೆ ಕಳುಹಿಸಬೇಕು ಎಂದಿದ್ದರು.

ನಂತರ ಎಲ್ಲರ ಅಭಿಪ್ರಾಯದ ಮೇರೆಗೆ ಮನೆಯಿಂದ ರಕ್ಷಿತಾರನ್ನು ಆಚೆ ಹಾಕಲಾಗಿತ್ತು. ಒಂದು ವಾರಗಳ ಕಾಲ ಸಿಕ್ರೇಟ್ ರೂಮ್​ನಲ್ಲಿದ್ದ ರಕ್ಷಿತಾ, ಶನಿವಾರದ ಕಿಚ್ಚನ ಪಂಚಾಯ್ತಿಯಲ್ಲಿ ಬಿಗ್​ಬಾದ್ ಮನೆಗೆ ಎಂಟ್ರಿ ನೀಡಿದ್ದಾರೆ. 

ಇದನ್ನೂ ಓದಿ: ಕಾಂತಾರ ನೋಡಿ ಅನುಚಿತ ವರ್ತನೆ, ದೈವ ಅವಾಹನೆ ಮಾಡಿದ್ರೆ ಕಾನೂನು ಕ್ರಮ​ -ರಿಷಬ್ ಶೆಟ್ಟಿ ಎಚ್ಚರಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 bigg boss jahnavi Rakshita Shetty
Advertisment