ಚಿತ್ರೀಕರಣದ ವೇಳೆ ನಟಿಗೆ ಲೈಂ*ಕ ಕಿರುಕುಳ ಆರೋಪ.. ನಿರ್ಮಾಪಕ ಹೇಮಂತ್ ಅರೆಸ್ಟ್..!

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಲೈಂ*ಕ‌ ಕಿರುಕುಳ ನೀಡಿದ ಆರೋಪದ ಮೇಲೆ ನಟ, ನಿರ್ದೇಶಕ, ನಿರ್ಮಾಪಕ ಹೇಮಂತ್​ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ನಟಿ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

author-image
Ganesh Kerekuli
Director Hemant
Advertisment

ಬೆಂಗಳೂರು: ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಲೈಂ*ಕ‌ ಕಿರುಕುಳ ನೀಡಿದ ಆರೋಪದ ಮೇಲೆ ನಟ, ನಿರ್ದೇಶಕ, ನಿರ್ಮಾಪಕ ಹೇಮಂತ್​ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. 

ನಟಿ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. 2022 ರಲ್ಲಿ ನಟಿಗೆ ನಿರ್ಮಾಪಕ ಹೇಮಂತ್​ನ ಪರಿಚಯವಾಗಿತ್ತು. ರಿಚ್ಚಿ ಎನ್ನುವ ಚಿತ್ರಕ್ಕೆ ನಟಿಯಾಗಿ ಆಯ್ಕೆಯಾಗಿದ್ದರು. ಈ ವೇಳೆ ಇಬ್ಬರ ಮಧ್ಯೆ 2 ಲಕ್ಷ ರೂಪಾಯಿ ಸಂಭಾವನೆ ನೀಡೋದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು ಎನ್ನಲಾಗಿದೆ.
  
ಅಂತೆಯೇ ಮುಂಗಡವಾಗಿ 60 ಸಾವಿರ ರೂಪಾಯಿ ಹಣವನ್ನು ಹೇಮಂತ್ ನೀಡಿದ್ದರು. ಹಣ ನೀಡಿದ ಬಳಿಕ ಸಿನಿಮಾ ಚಿತ್ರೀಕರಣ ತುಂಬಾ ವಿಳಂಬ ಆಗಿತ್ತು, ಅದಕ್ಕೆ ನಟಿ ಬೇಸರಗೊಂಡಿದ್ದರು. ಇನ್ನು ಶೂಟಿಂಗ್ ವೇಳೆ ಅಶ್ಲೀಲ ಬಟ್ಟೆ ತೊಡಬೇಕು, ಅಶ್ಲೀಲವಾಗಿ ನಟಿಸಬೇಕು ಎಂದು ಒತ್ತಾಯ ಮಾಡಿದ್ದರು. ಅಸಭ್ಯ ರೀತಿಯಲ್ಲಿ ನನ್ನ ಮುಟ್ಟಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. 

ಇದನ್ನೂ ಓದಿ: ಬೇಸರ ಹೊರ ಹಾಕಿದ ನಮೃತಾ ಗೌಡ.. ಸೀರಿಯಲ್ ಆಚೆ ಆಗಿದ್ದೇನು?

ಅಲ್ಲದೇ ಶೂಟಿಂಗ್ ಹಿನ್ನೆಲೆಯಲ್ಲಿ ಮುಂಬೈಗೆ ಹೋಗಲಾಗಿತ್ತು. ಈ ವೇಳೆ ಅವರಿಂದ ನಾನು ಕಿರುಕುಳ ಅನುಭವಿಸಿದ್ದೇನೆ. ಅವರು ಕೇಳಿದ್ದಕ್ಕೆ ನಾನು ನಿರಾಕರಿಸಿದೆ. ಈ ವೇಳೆ ನನ್ನ ಮೇಲೆ ರೌಡಿಗಳನ್ನು ಬಿಟ್ಟು ಬೆದರಿಸಿದ್ದಾರೆ. ಚಿತ್ರೀಕರಣ ಮುಗಿದ ಬಳಿಕ ಚೆಕ್‌ ನೀಡಿದ್ದು, ಅದು ಬೌನ್ಸ್ ಆಗಿದೆ. ಅಲ್ಲದೇ ಸೆನ್ಸಾರ್ ಆಗದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಆರೋಪಿಯನನ್ನ ಪೊಲೀಸರು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. 

ಇದನ್ನೂ ಓದಿ: ಜಡ್ಡು, ಶಮಿ ODI ಕರಿಯರ್​​ಗೆ ಕೊನೆ ಮೊಳೆ ಹೊಡೆದ ಬಿಸಿಸಿಐ..! ಯಾಕೆ ಹೀಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Producer Hemant Kumar
Advertisment