Advertisment

ಜಡ್ಡು, ಶಮಿ ODI ಕರಿಯರ್​​ಗೆ ಕೊನೆ ಮೊಳೆ ಹೊಡೆದ ಬಿಸಿಸಿಐ..! ಯಾಕೆ ಹೀಗೆ..?

ಆಸ್ಟ್ರೇಲಿಯಾ ಪ್ರವಾಸಕ್ಕೆ ಏಕದಿನ ಹಾಗೂ ಟಿ20 ತಂಡದ ಪ್ರಕಟಿಸಿದ ಅಜಿತ್ ಅಗರ್ಕರ್​, ಸೀನಿಯರ್ ಆಟಗಾರರ ಕರಿಯರ್​ಗೆ ಕೊನೆ ಮೊಳೆ ಹೊಡೆಯೋ ಮುನ್ಸೂಚನೆ ಬಿಸಿಸಿಐ ಕೊಟ್ಟಿದ್ದಾರೆ.

author-image
Ganesh Kerekuli
Shami and jadeja
Advertisment

ಆಸ್ಟ್ರೇಲಿಯಾ ಪ್ರವಾಸಕ್ಕೆ ಏಕದಿನ ಹಾಗೂ ಟಿ20 ತಂಡದ ಪ್ರಕಟಿಸಿದ ಅಜಿತ್ ಅಗರ್ಕರ್​, ಸೀನಿಯರ್ ಆಟಗಾರರ ಕರಿಯರ್​ಗೆ ಕೊನೆ ಮೊಳೆ ಹೊಡೆಯೋ ಮುನ್ಸೂಚನೆ ಕೊಟ್ಟಿದ್ದಾರೆ.

Advertisment

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಪ್ರಕಟಿಸಿದ ಅಜಿತ್ ಅಗರ್ಕರ್, ಕೇವಲ ತಂಡವನ್ನಷ್ಟೇ ಪ್ರಕಟಿಸಲಿಲ್ಲ. ಟೀಮ್ ಇಂಡಿಯಾದ ದಿಕ್ಸೂಚಿ, ಟೀಮ್ ಇಂಡಿಯಾದ ಭವಿಷ್ಯದ ಪ್ಲಾನ್​​​ಗಳನ್ನೇ ಪ್ರಟಕಟಿಸಿದ್ದಾಗಿದೆ. ಕೆಲ ಆಟಗಾರರ ಭವಿಷ್ಯಕ್ಕೆ ಅಂತ್ಯವಾಡುವ ಮುನ್ಸೂಚನೆಯೂ ಆಗಿದೆ. ಅದು ಕೇವಲ ರೋಹಿತ್ ಶರ್ಮಾ ಅಂಡ್ ವಿರಾಟ್ ಕೊಹ್ಲಿಯ ವಿಷ್ಯದಲ್ಲಿ ಮಾತ್ರವಲ್ಲ. ಕೆಲ ಆಟಗಾರರ ಅಂತ್ಯದ ಸಂದೇಶವೂ ಆಗಿದೆ. 

ಜಡೇಜಾ ಏಕದಿನ ಕರಿಯರ್​ಗೂ ಎಂಡ್​ ಕಾರ್ಡ್​

ಸೂರ್ಯಕುಮಾರ್​ಗೆ ಮಾತ್ರವಲ್ಲ. ರವೀಂದ್ರ ಜಡೇಜಾ ಏಕದಿನ ಕ್ರಿಕೆಟ್ ಕರಿಯರ್​ಗೂ ಬಿಸಿಸಿಐ ಅಂತ್ಯವಾಡುವ ಮುನ್ಸೂಚನೆ ನೀಡಿದೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯಿಂದ ಕೈಬಿಟ್ಟಿರುವ ಸೆಲೆಕ್ಷನ್ ಕಮಿಟಿ ವಾಷಿಗ್ಟಂನ್​ಗೆ ಮಣೆಹಾಕಿದೆ. ಇದು ಸಹಜವಾಗೇ ಜಡೇಜಾರ ಏಕದಿನ ಕರಿಯರ್ ಮುಂದೇನು ಎಂಬ ಪಶ್ನೆಗೆ ನಾಂದಿಯಾಡಿದೆ.

ಶಮಿಯ ವೃತ್ತಿ ಜೀವನಕ್ಕೆ ಕೊನೆ ಮೊಳೆ

ಇಷ್ಟು ದಿನ ಮೊಹಮ್ಮದ್ ಶಮಿ, ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡೋ ನಿರೀಕ್ಷೆ ಇತ್ತು. ಇನ್ಮೇಲೆ ಈ ನಿರೀಕ್ಷೆ, ಭರವಸೆಗಳೆಲ್ಲ ಮಣ್ಣಾಗಲಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಜಸ್​ಪ್ರಿತ್ ಬೂಮ್ರಾ ಅಲಭ್ಯತೆಯಲ್ಲೂ ಶಮಿಗೆ ಕೊಕ್ ನೀಡಿರೋದು ಇದು ಕೇವಲ ಕೊಕ್ ಅಲ್ಲ. ಶಮಿಯ ಕ್ರಿಕೆಟ್​ ಕರಿಯರ್​ಗೆ ಅಂತ್ಯವಾಡಿದ ಸಂದೇಶ ಆಗಿದೆ. 

Advertisment

ಇದನ್ನೂ ಓದಿ: ನನಸಾಗಲ್ಲ ವಿರಾಟ್, ರೋಹಿತ್ ಆ ಕನಸು.. ಅಭಿಮಾನಿಗಳಲ್ಲಿ ಆಘಾತ ತಂದ ಅಗರ್ಕರ್ ಹೇಳಿಕೆ

ಆಸ್ಟ್ರೇಲಿಯಾದಂತ ಸ್ವಿಂಗ್ ಅಂಡ್ ಪೆಸ್​ ಕಂಡೀಷನ್ಸ್​ನಲ್ಲಿ ಶಮಿ ಸಕ್ಸಸ್​ ಕಂಡಿದ್ದಾರೆ. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗಿದ್ದಾರೆ. ಶಮಿ ಬದಲಿಗೆ ಹರ್ಷಿತ್ ರಾಣಾಗೆ ಮಣೆ ಹಾಕಿದ್ದಾರೆ. ಹೀಗಾಗಿ ಇದು ಮೊಹಮ್ಮದ್ ಶಮಿ ಕರಿಯರ್​ಗೆ ಹೊಡೆದ ಕೊನೆ ಮೊಳೆಯೇ ಆಗಿರುವುದು ಸುಳ್ಳಲ್ಲ.

ಇದನ್ನೂ ಓದಿ:ಟಿ-20 ಕ್ಯಾಪ್ಟನ್​ಗೆ ಬಿಗ್ ಶಾಕ್ ಕೊಟ್ಟ BCCI, ಸೂರ್ಯಗೆ ಇಲ್ಲ ಭದ್ರತೆ..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Mohammed Shami Ravindra Jadeja
Advertisment
Advertisment
Advertisment