Advertisment

ಟಿ-20 ಕ್ಯಾಪ್ಟನ್​ಗೆ ಬಿಗ್ ಶಾಕ್ ಕೊಟ್ಟ BCCI, ಸೂರ್ಯಗೆ ಇಲ್ಲ ಭದ್ರತೆ..!

ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆ ಆಗ್ತಿದೆ. ಸರಣಿ ಸರಣಿಗೂ ಕೆಲ ಆಟಗಾರರ ಭವಿಷ್ಯಕ್ಕೆ ಎಂಡ್ ಕಾರ್ಡ್​ ಬೀಳ್ತಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಏಕದಿನ ಹಾಗೂ ಟಿ20 ತಂಡದ ಪ್ರಕಟಿಸಿದ ಅಜಿತ್ ಅಗರ್ಕರ್​, ಸೀನಿಯರ್ ಆಟಗಾರರ ಕರಿಯರ್​ಗೆ ಕೊನೆ ಮೊಳೆ ಹೊಡೆಯೋ ಮುನ್ಸೂಚನೆ ಕೊಟ್ಟಿದ್ದಾರೆ.

author-image
Ganesh Kerekuli
Surya kumar yadav (2)
Advertisment

04, ಅಕ್ಟೋಬರ್​. ಆಸ್ಟ್ರೇಲಿಯಾ ಪ್ರವಾಸಕ್ಕೆ ಅಜಿತ್ ಅಗರ್ಕರ್ ಟೀಮ್ ಸೆಲೆಕ್ಷನ್. ​3 ಪಂದ್ಯಗಳ ಏಕದಿನ ಸರಣಿ. 5 ಪಂದ್ಯಗಳ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಿದ ಅಜಿತ್ ಅಗರ್ಕರ್, ಕೇವಲ ತಂಡವನ್ನಷ್ಟೇ ಪ್ರಕಟಿಸಲಿಲ್ಲ. ಟೀಮ್ ಇಂಡಿಯಾದ ದಿಕ್ಸೂಚಿ, ಟೀಮ್ ಇಂಡಿಯಾದ ಭವಿಷ್ಯದ ಪ್ಲಾನ್​​​ಗಳನ್ನೇ ಪ್ರಟಕಟಿಸಿದ್ದಾಗಿತ್ತು. ನಯಾ ಇಂಡಿಯಾದ ದಿಕ್ಸೂಚಿಯಾಗಿತ್ತು. ಕೆಲ ಆಟಗಾರರ ಭವಿಷ್ಯಕ್ಕೆ ಅಂತ್ಯವಾಡುವ ಮುನ್ಸೂಚನೆಯೂ ಆಗಿತ್ತು. ಅದು ಕೇವಲ ರೋಹಿತ್ ಶರ್ಮಾ ಅಂಡ್ ವಿರಾಟ್ ಕೊಹ್ಲಿಯ ವಿಷ್ಯದಲ್ಲಿ ಮಾತ್ರವಲ್ಲ. ಕೆಲ ಆಟಗಾರರ ಅಂತ್ಯದ ಸಂದೇಶವೂ ಆಗಿತ್ತು. ಈ ಪೈಕಿ ಒಬ್ಬರು ಸೂರ್ಯಕುಮಾರ್.

Advertisment

ಏಷ್ಯಾಕಪ್ ಗೆದ್ದರೂ ಸೂರ್ಯನ ನಾಯಕತ್ವಕ್ಕಿಲ್ಲ ಭದ್ರತೆ

ಸೂರ್ಯಕುಮಾರ್ ಯಾದವ್, ಟೀಮ್ ಇಂಡಿಯಾದ ಬೆಸ್ಟ್​ ಟಿ20 ಕ್ಯಾಪ್ಟನ್. ಸೋಲಿಲ್ಲದ ಸರದಾರ. ಆನ್​ಫೀಲ್ಡ್​ನಲ್ಲಿ ಬ್ಯಾಟ್​ ಹೆಚ್ಚಾಗಿ ಝಳಪಿಸದಿದ್ರೂ, ಸೂರ್ಯ ನಾಯಕತ್ವದಲ್ಲಿ ಟೀಮ್ ಇಂಡಿಯಾದ ನಾಗಲೋಟಕ್ಕೆ ಮಾತ್ರ ಬ್ರೇಕ್ ಇಲ್ಲ. ಆನ್​ಫೀಲ್ಡ್​ನಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗಿದರೂ ಸೂರ್ಯಕುಮಾರ್​ ನಾಯಕತ್ವಕ್ಕೆ ಕುತ್ತು ಬಂದಿದೆ. ಇದಕ್ಕೆ ಕಾರಣ ಓನ್​ ಕ್ಯಾಪ್ಟನ್ ಸೂತ್ರ.

ಇದನ್ನೂ ಓದಿ:ಅಗ್ನಿ ಪರೀಕ್ಷೆಯಲ್ಲಿ ಶುಭ್​ಮನ್​ ಗಿಲ್.. ‘ಯುವರಾಜ’ನ ಮುಂದಿವೆ 5 ಬಿಗ್ ಚಾಲೆಂಜ್..!

Surya kumar yadav (7)

ಟೀಮ್ ಇಂಡಿಯಾದ ನಾಯಕತ್ವದ ಸೂತ್ರವೇ 3 ಫಾರ್ಮೆಟ್​, 1 ಕ್ಯಾಪ್ಟನ್. ಕಳೆದ ಒಂದು ವರ್ಷದಿಂದ ಇದಕ್ಕೆ ಬ್ರೇಕ್​ ಬಿದ್ದಿತ್ತು. ಟಿ20, ಏಕದಿನ ವಿಶ್ವಕಪ್ ದೃಷ್ಟಿಯಿಂದಾಗಿ ಸೂರ್ಯನೇ ಟಿ20 ನಾಯಕತ್ವ ವಹಿಸಿಕೊಂಡಿದ್ದರು. ಈ ಸಿಕ್ಕ ಅವಕಾಶ ಬಳಸಿಕೊಂಡಿದ್ದ ಸೂರ್ಯ, ಟಿ20 ಕ್ರಿಕೆಟ್​​​ನಲ್ಲಿ ನಾಯಕನಾಗಿ ಅದ್ಭುತವನ್ನೇ ಸೃಷ್ಟಿಸ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಟಿ20 ಸರಣಿಗಳನ್ನು ಗೆದ್ದಿರುವ ಸೂರ್ಯ, ಏಷ್ಯಾಕಪ್​ ಗೆಲ್ಲೋದ್ರಲ್ಲೂ ಯಶಸ್ವಿಯಾಗಿದ್ದಾರೆ. ಆದ್ರೀಗ ಇದೇ ಸೂರ್ಯ ನಾಯಕತ್ವದ ಅಂತ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. 

Advertisment

ಸೂರ್ಯನಿಗೆ ನಾಯಕತ್ವದಿಂದ ಕೊಕ್

ಟಿ20 ನಾಯಕನಾಗಿ ಸೂರ್ಯ ಇದ್ದಾರೆ. ಇದೇ ಸೂರ್ಯಕುಮಾರ್​​ಗೆ ಟಿ20 ವಿಶ್ವಕಪ್ ನಂತರ ಕೊಕ್ ನೀಡಲಾಗಿದೆ. ಈ ಬಳಿಕ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿರುವ ಶುಭ್​ಮನ್, ಟಿ20 ತಂಡದ ನಾಯಕನಾಗುವುದು ಬಹುತೇಕ ಕನ್ಫರ್ಮ್​.. ಮಾರ್ಚ್​ ಬಳಿಕ ಶುಭ್​ಮನ್ ಆಲ್​ ಫಾರ್ಮೆಟ್ ಕ್ಯಾಪ್ಟನ್ ಆಗ್ತಾರೆ. ಇದೇ ನಡೆ ಸೂರ್ಯ ಯುಗಾಂತ್ಯಕ್ಕೂ ನಾಂದಿಯಾಡಿದರು ಅಚ್ಚರಿ ಇಲ್ಲ.

ಇದನ್ನೂ ಓದಿ:ನನಸಾಗಲ್ಲ ವಿರಾಟ್, ರೋಹಿತ್ ಆ ಕನಸು.. ಅಭಿಮಾನಿಗಳಲ್ಲಿ ಆಘಾತ ತಂದ ಅಗರ್ಕರ್ ಹೇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20I team Suryakumar Yadav profile Surya kumar Yadav
Advertisment
Advertisment
Advertisment