/newsfirstlive-kannada/media/media_files/2025/10/07/ajit-agarkar-kohli-rohit-2025-10-07-10-05-35.jpg)
ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ.. ಸದ್ಯ ವಿಶ್ವ ಕ್ರಿಕೆಟ್ ಲೋಕದ ಟ್ರೆಡಿಂಗ್ ಟಾಪಿಕ್. ಇವರಿಬ್ಬರು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಆಸ್ಟ್ರೇಲಿಯಾ ಪ್ರವಾಸವೇ ಕೊನೆಯಾಗಿ ಬಿಡುತ್ತಾ ಎಂಬ ಅನುಮಾನ ಮೂಡಿಸಿದೆ. ಇಂಥದ್ದೊಂದು ಅನುಮಾನಕ್ಕೆ ಕಾರಣ ಅಜಿತ್ ಅಗರ್ಕರ್.
ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. 7 ತಿಂಗಳ ಬಳಿಕ ಹಿಟ್​ಮ್ಯಾನ್ ರೋಹಿತ್, ವಿರಾಟ್ ಕೊಹ್ಲಿ, ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡಿದ್ದಾರೆ. ದಿಗ್ಗಜರಿಬ್ಬರು ಪ್ಯಾಡ್​ ಕಟ್ಟಿ, ಬ್ಯಾಟ್ ಬೀಸೋದನ್ನ ನೋಡೋಕೆ ತುದಿಗಾಲಿನಲ್ಲೇ ನಿಂತಿದ್ದಾರೆ. ಈ ದಿಗ್ಗಜರಿಬ್ಬರು 2027ರ ವಿಶ್ವಕಪ್ ಆಡ್ತಾರಾ ಇಲ್ವಾ ಎಂಬ ಪ್ರಶ್ನೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಇದಕ್ಕೆ ಕಾರಣ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್​ ಸೆಲೆಕ್ಷನ್ ಪ್ರೆಸ್​ಮೀಟ್​ನಲ್ಲಿ ಹೇಳಿದ ಆ ಒಂದು ಮಾತು..
ಸದ್ಯ ಕೊಹ್ಲಿ, ರೋಹಿತ್ ಏಕದಿನ ಫಾರ್ಮೆಟ್ ಆಡ್ತಿದ್ದಾರೆ. ಆದ್ರೆ, ವಿಶ್ವಕಪ್‌ನಲ್ಲಿ ಇಬ್ಬರು ಆಡುವ ಬಗ್ಗೆ ಇವತ್ತು ಮಾತನಾಡುವುದು ಸರಿಯಲ್ಲ
ಅಜಿತ್ ಅಗರ್ಕರ್, ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ
ಅಜಿತ್ ಅಗರ್ಕರ್ ಹೇಳಿದ ಈ ಮಾತೇ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಕೇವಲ ಆತಂಕವಲ್ಲ. ವಿರಾಟ್​ ಕೊಹ್ಲಿ ಹಾಗೂ ರೋಹಿತ್ ಶರ್ಮಾರ ಭವಿಷ್ಯ ಏನಾಗುತ್ತೆ ಎಂಬ ಪ್ರಶ್ನೆಯನ್ನ ಹುಟ್ಟುಹಾಕಿದೆ. ಬಹುದಿನಗಳ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಣಕ್ಕಿಳಿಯಲಿರುವ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ. ಏಕದಿನ ವಿಶ್ವಕಪ್​ಗೂ ಮುನ್ನವೇ ನಿವೃತ್ತಿ ಘೋಷಿಸ್ತಾರಾ ಎಂಬ ಅನುಮಾನಕ್ಕೂ ನಾಂದಿಯಾಡಿದೆ.
ದಿನದಿಂದ ದಿನಕ್ಕೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಭವಿಷ್ಯದ ಚರ್ಚೆಗಳೂ ಜೋರಾಗ್ತಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾದ ಬಳಿಕವಂತೂ ಮತ್ತಷ್ಟು ಹೆಚ್ಚಿಸಿದೆ. 2027 ಏಕದಿನ ವಿಶ್ವಕಪ್ ತನಕ ಆಡ್ತಾರಾ? ಇಲ್ವಾ ಎಂಬ ಟೆನ್ಶನ್​​ನಲ್ಲಿದ್ದ ಫ್ಯಾನ್ಸ್​ಗೆ ಕರಿಯರ್​​ ಯುಗಾಂತ್ಯ ಪ್ರಶ್ನೆ ಉದ್ಬವಿಸಿದೆ. ಆಸ್ಟ್ರೇಲಿಯಾ ಸರಣಿ ಬೆನ್ನಲ್ಲೇ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಭವಿಷ್ಯ ಅಂತ್ಯವಾಗುತ್ತಾ ಎಂಬ ಪ್ರಶ್ನೆಯ ಜೊತೆಗೆ ಮುನ್ಸೂಚನೆಯನ್ನು ನೀಡ್ತಿದೆ.
ವಿರಾಟ್, ರೋಹಿತ್​ ಪಾಲಿಗೆ ಆಸಿಸ್​​ ರಿಟೈಟ್ಮೆಂಟ್​ ಟೂರ್
ಟಿ20, ಟೆಸ್ಟ್​ನಿಂದ ದೂರ ಉಳಿದಿರುವ ವಿರಾಟ್, ರೋಹಿತ್, ಏಕದಿನ ತಂಡದಿಂದ ದೂರ ಉಳಿಯುವ ಸಮಯ ದೂರವೇನಿಲ್ಲ. 36 ವರ್ಷದ ವಿರಾಟ್​ ಕೊಹ್ಲಿ, 38 ವರ್ಷದ ರೋಹಿತ್​ ಸಂಧ್ಯಾಕಾಲದ ಹೊಸ್ತಿಲ್ಲಿಲ್ಲಿದ್ದಾರೆ. 2027ರ ಏಕದಿನ ವಿಶ್ವಕಪ್​ ವೇಳೆಗೆ 40 ವರ್ಷ ವಯಸ್ಸಾಗಿರುತ್ತೆ. ಈ ಕಾರಣಕ್ಕೆ ಬಿಸಿಸಿಐ, ಭವಿಷ್ಯ ಹೊಸ ಟೀಮ್ ಕಟ್ಟುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಅಕ್ಟೋಬರ್​ 19ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಇಂಪ್ಯಾಕ್ಟ್​ ಫುಲ್ ಪರ್ಫಾಮೆನ್ಸ್ ನೀಡಬೇಕಿದೆ. ಇಲ್ಲ ಆಸಿಸ್ ಪ್ರವಾಸವೇ ವಿರಾಟ್, ರೋಹಿತ್ಪಾಲಿಗೆ ಕೊನೆಯಾದರು ಅಚ್ಚರಿ ಇಲ್ಲ.
ಬಿಸಿಸಿಐ ಬಾಸ್​​ಗಳ ಷರತ್ತು
ರೋಹಿತ್, ವಿರಾಟ್​ 2027ರ ಏಕದಿನ ವಿಶ್ವಕಪ್​​ ಕನಸಿನಲ್ಲಿದ್ದಾರೆ ನಿಜ. ಆದ್ರೆ, ಈ ಆಸೆಗೆ ಬಿಸಿಸಿಐ ತಣ್ಣೀರು ಎರಚಲು ಮುಂದಾಗಿದೆ. ಆಸ್ಟ್ರೇಲಿಯಾ ಸರಣಿ ನಂತರ ಸೈಡ್​ಲೈನ್​ ಮಾಡುವ ಉದ್ದೇಶ ಹೊಂದಿರುವ ಬಿಸಿಸಿಐ, ಡೊಮೆಸ್ಟಿಕ್ ಕ್ರಿಕೆಟ್​​ನಲ್ಲಿ ರನ್​ ಗಳಿಸುವ ಷರತ್ತು ಹಾಕಿದೆ. ಇದು ಸಹಜವಾಗೇ ಕೊಹ್ಲಿ, ರೋಹಿತ್ ಮುಂದಿನ ಭವಿಷ್ಯ ಏನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಡ್ಯಾನ್ಸರ್, ಇಂಜಿನಿಯರ್​ 24 ವರ್ಷಕ್ಕೆ ದಾರುಣ ಅಂತ್ಯ.. ಮನೆ ದೀಪವೇ ಆರಿ ಹೋಯಿತು..
ನಾವು ಒಂದೆರಡು ವರ್ಷಗಳ ಹಿಂದೆಯೇ ಸ್ಪಷ್ಟ ಸಂದೇಶ ನೀಡಿದ್ದೇವೆ. ಆಟಗಾರರ ಯಾವಾಗ ಲಭ್ಯ ಇರುತ್ತಾರೋ, ಆಗ ಡೊಮೆಸ್ಟಿಕ್ ಕ್ರಿಕೆಟ್ ಆಡಲು ಸೂಚಿಸಿದ್ದೇವೆ. ಆಟಗಾರರ ಚುರುಕಿನಿಂದ ಇರಲು, ಡೊಮೆಸ್ಟಿಕ್ ಕ್ರಿಕೆಟ್ ಆಡುವುದು ಮಾರ್ಗವಾಗಿದೆ. ನೀವು ಆಡುತ್ತಿರುವ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳೇ, ನೀವು ಡೊಮೆಸ್ಟಿಕ್ ಕ್ರಿಕೆಟ್ ಆಡಲು ಸಾಧ್ಯವೇ ಅನ್ನೋದು ನಿರ್ಧರಿಸುತ್ತದೆ. ಆಟಗಾರರು ವಿಶ್ರಾಂತಿಯಲ್ಲಿದ್ದಾಗ ಅವರು ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕಿದೆ.
ಅಜಿತ್ ಅಗರ್ಕರ್, ಚೀಫ್ ಸೆಲೆಕ್ಟರ್
ಏಕದಿನಕ್ಕೆ ಕೊಹ್ಲಿ,ರೋಹಿತ್​ ನಿವೃತ್ತಿ ಹೇಳ್ತಾರಾ? ಇಲ್ವಾ? ಅನ್ನೋದು ಗೊತ್ತಿಲ್ಲ. ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಗ್ರ್ಯಾಂಡ್​​ ಗುಡ್​ ಬೈ ಹೇಳೋಕೆ ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧತೆ ನಡೆಸ್ತಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಪಾಲಿಗೂ ಇದೇ ಕೊನೆಯ ಆಸ್ಟ್ರೇಲಿಯಾ ಟೂರ್​ ಆಗಲಿದೆ. ಹೀಗಾಗಿ ಈ ಪ್ರವಾಸದ ಅಂತ್ಯದಲ್ಲಿಇಬ್ಬರಿಗೂ ಅದ್ಧೂರಿ ಫೇರ್​ವೆಲ್​ ನೀಡಲು ಕ್ರಿಕೆಟ್​ ಆಸ್ಟ್ರೇಲಿಯಾ ಪ್ಲಾನ್​ ಮಾಡಿಕೊಂಡಿದೆ. ಇದು ರೋಹಿತ್, ವಿರಾಟ್​ ಕೊಹ್ಲಿಗೆ ಕೊನೆ ಏಕದಿನ ಸರಣಿಯಾಗುತ್ತಾ ಎಂಬ ಅನುಮಾನಕ್ಕೆ ಪುಷ್ಠಿ ನೀಡಿರುವುದು ಸುಳ್ಳಲ್ಲ.
ಇದನ್ನೂ ಓದಿ: ಅಗ್ನಿ ಪರೀಕ್ಷೆಯಲ್ಲಿ ಶುಭ್​ಮನ್​ ಗಿಲ್.. ‘ಯುವರಾಜ’ನ ಮುಂದಿವೆ 5 ಬಿಗ್ ಚಾಲೆಂಜ್..!
​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ