/newsfirstlive-kannada/media/media_files/2025/08/07/virat-kohli-rohit-sharma-1-2025-08-07-18-25-55.jpg)
ರೋಹಿತ್, ಕೊಹ್ಲಿ Photograph: (ಬಿಸಿಸಿಐ)
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ. ಟೀಮ್ ಇಂಡಿಯಾದ ಜೋಡೆತ್ತುಗಳು. ಜೊತೆಯಾಗಿ ಕ್ರಿಕೆಟ್ ಕರಿಯರ್ ಆರಂಭಿಸದಿದ್ರೂ, ಟಿ20, ಟೆಸ್ಟ್​ ಕ್ರಿಕೆಟ್​​​ ಕರಿಯರ್​​ಗೆ ಅಂತ್ಯವಾಡಿದ್ದು ಜೊತೆಯಾಗಿಯೇ. ಇದೀಗ ಏಕದಿನ ಕ್ರಿಕೆಟ್​ನಿಂದಲೂ ಜೊತೆಯಾಗಿಯೇ ಸೈಡ್ ಲೈನ್ ಆಗ್ತಿದ್ದಾರಾ ಎಂಬ ಅನುಮಾನ ಮೂಡಿಸಿದೆ. ಆಸ್ಟ್ರೇಲಿಯಾ ಸರಣಿಯ ತಂಡಕ್ಕೆ ಆಯ್ಕೆಯಾದ ಇವರಿಬ್ಬರು ಸೈಡ್ ಲೈನ್ ಪ್ರಶ್ನೆ ಯಾಕೆ ಅಂತೀರಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ಉತ್ತರ.
ಪ್ರೆಸ್​ ಮೀಟ್​​ನಲ್ಲೇ ಹಿಂಟ್ ಕೊಟ್ರಾ ಅಗರ್ಕರ್?
ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಇದ್ರಿಂದ ಅಭಿಮಾನಿಗಳಿಗೆ ಸಿಹಿಗಿಂತ ಕಹಿಯ ಅನುಭವವೇ ಹೆಚ್ಚಾಗಿದೆ. ರೋಹಿತ್ ಶರ್ಮಾಗೆ ನಾಯಕತ್ವದಿಂದ ಕೊಕ್ ನೀಡಿದ್ದೇ ಇದಕ್ಕೆ ಮುಖ್ಯ ಕಾರಣ. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಸೆಲೆಕ್ಷನ್ ಕಮಿಟಿ ರೋಹಿತ್​ಗೆ ಕೊಕ್​ ಕೊಟ್ಟಿದೆ. ಇದ್ರಿಂದ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿನ ಸೈಡ್​ ಲೈನ್ ಮಾಡಲು ಮುಂದಾಗಿದ್ಯಾ ಎಂಬ ಅನುಮಾನ ಹುಟ್ಟಿದೆ. ಜೊತೆಗೆ ಅಜಿತ್ ಅಗರ್ಕರ್ ನುಡಿದ ಆ ಒಂದು ವಾಖ್ಯ ಕೊಹ್ಲಿ, ರೋಹಿತ್ ಭವಿಷ್ಯ ಅತಂತ್ರದಲ್ಲಿದೆ ಅನ್ನೋದ್ರ ಸೂಚಕವಾಗಿದೆ.
ರೋಹಿತ್, ವಿರಾಟ್​ 2027ರ ಏಕದಿನ ವಿಶ್ವಕಪ್​​ ಕನಸಿನಲ್ಲಿದ್ದಾರೆ ನಿಜ. ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಆಸೆಗೆ ಬಿಸಿಸಿಐ ತಣ್ಣೀರು ಎರಚಲು ಮುಂದಾಗಿದೆ. ಆಸ್ಟ್ರೇಲಿಯಾ ಸರಣಿ ನಂತರ ಸೈಡ್​ಲೈನ್​ ಮಾಡುವ ಉದ್ದೇಶ ಹೊಂದಿರುವ ಬಿಸಿಸಿಐ, ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕೆಂದು ಸೂಚಿಸಿದೆ. ಪರೋಕ್ಷವಾಗಿ ರನ್​ ಗಳಿಸಿದರಷ್ಟೇ ಟೀಮ್ ಇಂಡಿಯಾದಲ್ಲಿ ಸ್ಥಾನ ಎಂಬ ಎಚ್ಚರಿಕೆ ಸಂದೇಶ ನೀಡಿದೆ. ಹೀಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್​ ಕೊಹ್ಲಿ ವಿಶ್ವಕಪ್ ಹಾದಿಯೇ ಅಲ್ಲ. ಏಕದಿನ ಭವಿಷ್ಯವೂ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಈ ಮಾತುಗಳೇ ಸಾಕ್ಷಿ ನುಡಿಯುತ್ತಿವೆ.
ವಿರಾಟ್, ರೋಹಿತ್ ಕೆಲ ವರ್ಷಗಳಿಂದ ತಂಡಕ್ಕಾಗಿ ರನ್ ಗಳಿಸ್ತಿದ್ದಾರೆ. ಅದು ಈಗ ಬದಲಾಗುವುದಿಲ್ಲ ಎಂದು ಭಾವಿಸುತ್ತೇನೆ. ಈಗಲೂ ಡ್ರೆಸ್ಸಿಂಗ್ ರೂಮ್ನ ಲೀಡರ್ಸ್ ಆಗಿರುತ್ತಾರೆ. ಟನ್ಗಟ್ಟಲೇ ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈಗಲೂ ಅದನ್ನೇ ಮಾಡ್ತಾರೆ ಎಂದು ಭಾವಿಸುತ್ತೇವೆ. ಈ ಹಂತದಲ್ಲಿ ಹೆಚ್ಚು ಯೋಚಿಸಬೇಕಾಗಿಲ್ಲ. ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ರನ್ ಗಳಿಸುವುದು ಅಗತ್ಯ ಎಂದು ನಿಮಗೂ ತಿಳಿದಿದೆ
ಅಜಿತ್ ಅಗರ್ಕರ್, ಚೀಫ್ ಸೆಲೆಕ್ಟರ್
2027ರ ವಿಶ್ವಕಪ್​​ ಆಡುವ ಆಡುವುದೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಗುರಿ. ಆದ್ರೆ ಇದು ಅಂದುಕೊಂಡಷ್ಟು ಸುಲಭವಿಲ್ಲ. ಹಿಂದಿನ ಪರ್ಫಾಮೆನ್ಸ್​ ಅನುಗುಣವಾಗಿಯೇ ಟೀಮ್ ಇಂಡಿಯಾದಲ್ಲಿ ರೋಹಿತ್ ಹಾಗೂ ವಿರಾಟ್​ಗೆ ಸ್ಥಾನ ನೀಡಲಾಗ್ತಿತ್ತು. ಆದ್ರೀಗ ಅಜಿತ್ ಅಗರ್ಕರ್​, ಡೊಮೆಸ್ಟಿಕ್ ಕ್ರಿಕೆಟ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರಷ್ಟೇ ಟೀಮ್ ಇಂಡಿಯಾದಲ್ಲಿ ಉಳಿಯಲು ಸಾಧ್ಯ ಅನ್ನೋ ಕ್ಲಿಯರ್ ಕಟ್ ಅನ್ಸರ್ ಕೊಟ್ಟಿದ್ದಾರೆ. ಇದು ಸಹಜವಾಗೇ ಕೊಹ್ಲಿ, ರೋಹಿತ್ ಮುಂದಿನ ಭವಿಷ್ಯ ಏನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ನಾವು ಒಂದೆರಡು ವರ್ಷಗಳ ಹಿಂದೆಯೇ ಸ್ಪಷ್ಟ ಸಂದೇಶ ನೀಡಿದ್ದೇವೆ. ಆಟಗಾರರ ಯಾವಾಗ ಲಭ್ಯ ಇರುತ್ತಾರೋ, ಆಗ ಡೊಮೆಸ್ಟಿಕ್ ಕ್ರಿಕೆಟ್ ಆಡಲು ಸೂಚಿಸಿದ್ದೇವೆ. ಆಟಗಾರರ ಚುರುಕಿನಿಂದ ಇರಲು, ಡೊಮೆಸ್ಟಿಕ್ ಕ್ರಿಕೆಟ್ ಆಡುವುದು ಮಾರ್ಗವಾಗಿದೆ. ನೀವು ಆಡುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳೇ, ನೀವು ಡೊಮೆಸ್ಟಿಕ್ ಕ್ರಿಕೆಟ್ ಆಡಲು ಸಾಧ್ಯವೇ ಅನ್ನೋದು ನಿರ್ಧರಿಸುತ್ತದೆ. ಆಟಗಾರರು ವಿಶ್ರಾಂತಿಯಲ್ಲಿದ್ದಾಗ ಅವರು ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕಿದೆ.
ಅಜಿತ್ ಅಗರ್ಕರ್, ಚೀಫ್ ಸೆಲೆಕ್ಟರ್
ಆಸಿಸ್​ ಸರಣಿ ಆಗುತ್ತಾ ಕೊನೆ..?
ಟಿ20, ಟೆಸ್ಟ್​ನಿಂದ ದೂರ ಉಳಿದಿರುವ ವಿರಾಟ್, ರೋಹಿತ್, ಏಕದಿನ ತಂಡದಿಂದ ದೂರ ಉಳಿಯುವ ಸಮಯ ದೂರವೇನಿಲ್ಲ. 36 ವರ್ಷದ ವಿರಾಟ್​ ಕೊಹ್ಲಿ, 38 ವರ್ಷದ ರೋಹಿತ್​ ಸಂಧ್ಯಾಕಾಲದ ಹೊಸ್ತಿಲ್ಲಿಲ್ಲಿದ್ದಾರೆ. 2027ರ ಏಕದಿನ ವಿಶ್ವಕಪ್​ ವೇಳೆಗೆ 40 ವರ್ಷ ವಯಸ್ಸಾಗಿರುತ್ತೆ. ಈ ಕಾರಣಕ್ಕೆ ಬಿಸಿಸಿಐ, ಭವಿಷ್ಯ ಹೊಸ ಟೀಮ್ ಕಟ್ಟುವ ಲೆಕ್ಕಾಚಾರದಲ್ಲಿದೆ. ಅಕ್ಟೋಬರ್​ 19 ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಇಂಪ್ಯಾಕ್ಟ್​ ಫುಲ್ ಪರ್ಫಾಮೆನ್ಸ್ ನೀಡಬೇಕಿದೆ. ಅಜಿತ್ ಅಗರ್ಕರ್ ಹೇಳಿದಂತೆ ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕು. ರನ್ ಗಳಿಸಬೇಕು. ಇಲ್ಲ ಆಸಿಸ್ ಪ್ರವಾಸದ ಏಕದಿನ ಸರಣಿಯೇ ವಿರಾಟ್ ಹಾಗೂ ರೋಹಿತ್ ಶರ್ಮಾ ಪಾಲಿಗೆ ಕೊನೆಯಾದರು ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ