/newsfirstlive-kannada/media/media_files/2025/10/07/keethana-5-2025-10-07-09-25-56.jpg)
ಜೀವನ ನೀರಿನ ಮೇಲಿನ ಗುಳ್ಳೆ ಇದ್ದಂಗೆ. ಯಾವ ಕ್ಷಣದಲ್ಲಿ ಏನಾಗುತ್ತೆ ಅಂತ ಹೇಳೋದಿಕ್ಕೆ ಆಗಲ್ಲ. ಯಾಕಂದ್ರೆ ವಿಧಿ ಅನ್ನೋದು ಬದುಕಿನಲ್ಲಿ ಹೇಗೆಲ್ಲ ಬಿರುಗಾಳಿ ಎಬ್ಬಿಸುತ್ತೆ ಅಂತ ಊಹೆ ಮಾಡೋಕು ಆಗಲ್ಲ. ಜಸ್ಟ್ 24 ವರ್ಷದ ಯುವತಿ. ಲೈಫ್​ನಲ್ಲಿ ಏನಾದ್ರೂ ಸಾಧಿಸ್ಬೇಕು ಅನ್ನೋ ಛಲ ಇದ್ದಂತ ಹುಡುಗಿ. ಆದ್ರೆ ಅದ್ಯಾರ ಕೆಟ್ಟ ಕಣ್ಣು ಬಿದ್ದಿತ್ತೋ ಗೊತ್ತಿಲ್ಲ. ಬಾಳಿ ಬದುಕಬೇಕಾಗಿದ್ದವಳ ಮೇಲೆ ದೈತ್ಯ ಮರವೊಂದು ಜವರಾಯನಂತೆ ಎರಗಿ ಆಕೆ ಜೀವಕ್ಕೆ ಕೊಳ್ಳಿ ಇಟ್ಟು ಬಿಟ್ಟಿದೆ. ವಿಧಿಯಾಟಕ್ಕೆ ವಿದೇಶಕ್ಕೆ ಹೋಗ್ಬೇಕು ಅಂತ ಕನಸು ಕಂಡವಳು ಬದುಕು ದಾರುಣವಾಗಿ ಅಂತ್ಯ ಕಂಡಿದ್ದಾಳೆ.
ಹೆಸರು ಕೀರ್ತನಾ.. ಈ ಮುದ್ದು ಹುಡುಗಿಯ ವಯಸ್ಸು ಜಸ್ಟ್ 24. ಡಿಗ್ರಿ ಕೂಡ ಕಂಪ್ಲೀಟ್ ಆಗಿಲ್ಲ. ಆಕೆ ಕಣ್ಣುಗಳು ನೋಡ್ತಿದ್ರೆ ಕಂಡ ಕನಸುಗಳು ಅದೆಷ್ಟಿದ್ವು ಅನ್ನೋದು ಅರ್ಥ ಆಗುತ್ತೆ.. ಈಕೆ ಚೆಂದದ ನಗು ನೋಡ್ತಿದ್ರೆ ಮನಸ್ಸು ಮಮ್ಮಲ ಮರಗುತ್ತೆ.. ಕಾರಣ ಏನ್​ ಗೊತ್ತಾ ಇವತ್ತು ಈ ಆಸೆ ಗಣ್ಣಿನ ಹುಡುಗಿ ಬದುಕಿಲ್ಲ ಅನ್ನೋ ಘೋರ ಸತ್ಯ. ಯಾರೋ ಮಾಡಿದ ತಪ್ಪಿಗೆ ಇವತ್ತು ಕೀರ್ತನಾ ಅನ್ನೋ ಯುವತಿಯ ಬದುಕಿನ ಪುಸ್ತಕ ಸುಟ್ಟು ಹೋಗಿ. ಕಂಡ ಕನಸುಗಳೆಲ್ಲ ಕಮರಿ ಹೋಗಿವೆ.
ಇದನ್ನೂ ಓದಿ:ಕಮರಿದ ಕನಸುಗಳು.. ಕೀರ್ತನಾ ದುರಂತ ಅಂತ್ಯಕ್ಕೆ ಹೊಣೆ ಯಾರು?
24 ವರ್ಷಕ್ಕೆ ದಾರುಣ ಅಂತ್ಯ!
ಬೆಂಗಳೂರಿನಲ್ಲಿ ರಾತ್ರಿಯಾದ್ರೆ ಸಾಕು ಜೋರು ಮಳೆ ಶುರುವಾಗುತ್ತೆ. ಇನ್ನೇನು ಜನ ಆಫೀಸ್ ಕೆಲಸ ಮುಗಿಸ್ಕೊಂಡು ಮನೆ ಕಡೆ ಹೊರಡ್ಬೇಕು ಅನ್ನುವಾಗಲೇ ವರುಣ ಅಬ್ಬರಿಸಿ ಬೊಬ್ಬಿರಿಯೋದಕ್ಕೆ ಶುರು ಮಾಡ್ತಾನೆ. ಹೀಗಿರುವಾಗ ಬುಡ ಸರಿಯಿಲ್ಲದ, ಕೊಂಬೆ ಬೆಳೆದು ನಿಂತಿರೋ ಮರಗಳು ಧರಶಾಹಿಯಾಗೋದು ಬೆಂಗಳೂರಲ್ಲಿ ಹೊಸದೇನಲ್ಲ. ಇಂಥ ಹೊತ್ತಲ್ಲಿ ಎಚ್ಚೆತ್ತುಗೊಂಡು ಬಿಬಿಎಂಪಿ ನೆಟ್ಟಗೆ ಕೆಲಸ ಮಾಡ್ದಿದ್ರೆ, ಇವತ್ತು ಕೀರ್ತನಾ ಅನ್ನೋ ಮುದ್ದುಮುಖದ ಚೆಲುವೆಯ ಜೀವ ಉಳಿತಿತ್ತೋ ಏನೋ. ಏನ್ ಮಾಡೋದು ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ್ರು ಅನ್ನೋಹಾಗೆ ಎಲ್ಲ ಮುಗಿದ್ಮೆಲೆ ಅಲ್ವಾ ನಮ್ಮ ಅಧಿಕಾರಿಗಳು ಎಚ್ಚೆತ್ತಕೊಳ್ತಾರೆ. ಆಮೇಲೆ ಒಂದಿಷ್ಟು ಕಣ್ಣಿಗೆ ಮಣ್ಣೆರೆಚುವ ಕಾಮಗಾರಿಗಳು ಮಾಡಿ ಕಣ್ಮರೆಯಾಗಿಬಿಡ್ತಾರೆ. ಆದ್ರೆ ಇವತ್ತು ಇದೇ ಅಧಿಕಾರಿಗಳ ಬೇಜವಾಬ್ದಾರಿಗೆ 24 ವರ್ಷದ ಕೀರ್ತಾನ ಜೀವ ಬಲಿಯಾಗಿದೆ ಅಂದ್ರೆ ನೀವು ನಂಬಲೇಬೇಕು.
ಇದನ್ನೂ ಓದಿ:ತಾಕತ್ತಿದ್ರೆ ಟಚ್ ಮಾಡು ಎಂದ ಅಶ್ವಿನಿ ಗೌಡ.. ನಡೆದೇ ಹೋಯ್ತು ಡಿಶುಂ ಡಿಶುಂ..? VIDEO
ಕೀರ್ತನಾ. ಹೆಸರಿನಷ್ಟೆ ಚೆಂದವಿರೋ ಹುಡುಗಿ ಈಕೆ. ಓದಿನಲ್ಲೂ ಸೈ ಡ್ಯಾನ್ಸ್ ಮಾಡೋದ್ರಲ್ಲೂ ಸೈ. ಯಾಕಂದ್ರೆ ಕೀರ್ತನಾ ಒಬ್ಬ ಭರತನಾಟ್ಯ ಪ್ರವಿಣೆ. ಸಕಲ ಕಲಾವಲ್ಲಭೆ ಅಂದ್ರೂ ತಪ್ಪಾಗಲ್ಲ. ಹೆಬ್ಬಾಳದಲ್ಲಿರೋ ಕೀರ್ತನಾ ಭಾನುವಾರ ರಾತ್ರಿ ಸ್ಯಾಂಡಲ್​ವುಡ್ ಪ್ರಿಮಿಯರ್ ಲೀಗ್ ನೋಡ್ಬೇಕು ಅಂತ ಹೋಗಿದ್ದಳು. ಈ ಲೀಗ್​ಗೆ​ ದೊಡ್ಡ ದೊಡ್ಡ ಸೆಲೆಬ್ರಿಟಿಸ್ ಬರ್ತಾರೆ ಅವರನ್ನ ನೋಡಿ ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಅನ್ನೋ ಆಸೆ ಇಟ್ಕೊಂಡು ಮ್ಯಾಚ್​ಗೆ ತೆರಳಿದ್ಳು. ಪಂದ್ಯ ಮುಗಿದು ಮನೆಗೆ ಹೊರಡುವ ಹೊತ್ತಿಗೆ ರಾತ್ರಿಯಾಗಿದೆ. ಸ್ಕೂಟರ್​ ಹತ್ತಿ ಕೀರ್ತನಾ ಮನೆ ಕಡೆ ಹೊರಟ್ಟಿದ್ದಾಳೆ. ಆದ್ರೆ ಮನೆಗೆ ಹೊರಟವಳಿಗೆ ಕೆಲವೇ ಕ್ಷಣದಲ್ಲಿ ತಾನು ಮಸಣದ ಸೇರ್ತಿನಿ ಅನ್ನೋ ಸಣ್ಣ ಸುಳಿವು ಕೂಡ ಇರಲ್ಲಿಲ್ಲ ಕಣ್ರಿ.. ಯಾಕಂದ್ರೆ ಅಮ್ಮ ಮ್ಯಾಚ್ ಮುಗಿಸ್ಕೊಂಡು ಬರ್ತಿನಿ ಹೋದ ಕೀರ್ತನಾ ವಾಪಸ್ ಹೆಣವಾಗಿ ಮನೆ ಸೇರಿಬಿಟ್ಟಿದ್ಳು.
ಇದನ್ನೂ ಓದಿ: ರಾಯಚೂರಲ್ಲಿ ಕೆಲಸ ಮಾಡಲು ಬಯಸುವರಿಗೆ ಗುಡ್​ನ್ಯೂಸ್.. RIMSನಲ್ಲಿ ಉದ್ಯೋಗಾವಕಾಶಗಳು
ಬೆಂಗಳೂರಲ್ಲಿ ಮಳೆ ಗಾಳಿ ಶುರುವಾದ್ರೆ ರಸ್ತೆಯಲ್ಲಿ ಕಾರು ಬೈಕ್ ಓಡಿಸೋರು, ಜೀವ ಕೈಯಲ್ಲಿ ಹಿಡ್ಕೊಂಡೇ ಓಡಾಡ್ಬೇಕು. ಯಾವ ಮರ ತಲೆ ಮೇಲೆ ಬಿದ್ದು ಜೀವ ಹೋಗುತ್ತೆ ಅಂತ ಹೇಳೋದಿಕ್ಕೆ ಆಗಲ್ಲ. ಇವತ್ತು ಕೀರ್ತನಾ ಉಸಿರು ಚೆಲ್ಲೋಕೂ ಕೂಡ ಇಂಥ ದೈತ್ಯ ಮರವೇ ಕಾರಣ. ಸ್ಯಾಂಡಲ್​ವುಡ್ ಪ್ರಿಮಿಯರ್ ಲೀಗ್ ಮ್ಯಾಚ್​ ಮುಗಿಸಿಕೊಂಡು ಕೀರ್ತನಾ ಮನೆ ಕಡೆ ಹೊರಟ್ಟಿದ್ಳು. ಸೋಲದೇವನಹಳ್ಳಿ ಬಳಿ ಬರ್ತಿದ್ದಂತೆ ರಸ್ತೆಬದಿಯಲ್ಲಿದ್ದ ಬೃಹತ್ ಮರದ ಕೊಂಬೆಯೊಂದು ಕೀರ್ತಾನ ಸ್ಕೂಟರ್ ಮೇಲೆ ಬಿದ್ದಿದೆ. ಈ ಟೈಮ್​ನಲ್ಲಿ ಈ ರಸ್ತೆಯಲ್ಲಿ ಎರಡು ಬೈಕ್​ಗಳು ಬರ್ತಿದ್ವು. ಈ ಎರಡು ಬೈಕ್​ಗಳ ಮೇಲೆ ದೈತ್ಯ ಮರದ ಕೊಂಬೆ ಉರುಳಿ ಬಿದ್ದಿದೆ. ತಕ್ಷಣವೇ ಸ್ಥಳೀಯರು ಮರದ ಕೊಂಬೆಗಳು ತೆರವು ಮಾಡಿ ಕೀರ್ತನಾ ಸೇರಿ ಇನ್ನೊಬ್ಬ ಬೈಕ್​ ಸವಾರರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಧಿಯ ಘೋರದೃಷ್ಟಿಗೆ ಆಸ್ಪತ್ರೆಗೆ ತರುವ ಮುಂಚೆಯೇ ಕೀರ್ತನಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಇದನ್ನೂ ಓದಿ:ಕಾಂತಾರ ಭರ್ಜರಿ ಕಲೆಕ್ಷನ್.. 4 ದಿನದಲ್ಲಿ ಎಷ್ಟು ಕೋಟಿ ಬಾಚಿದೆ ಗೊತ್ತಾ..?
ಮಗಳ ಕಳ್ಕೊಂಡ ಹೆತ್ತವರ ಗೋಳಾಟ!
ವಿಧಿಯಾಟಕ್ಕೆ 24 ವರ್ಷಕ್ಕೆ ಕೀರ್ತಾನಳ ಬದುಕು ದಾರುಣ ಅಂತ್ಯ ಕಂಡಿತ್ತು. ರಾತ್ರಿ ಎಂಟು ಗಂಟೆ ಸುಮಾರಿಗೆ ಕೀರ್ತನಾ ಮನೆಯವರಿಗೆ ಈ ವಿಷ್ಯ ಗೊತ್ತಾಗಿದೆ. ಆಸ್ಪತ್ರೆಗೆ ಬಂದು ನೋಡಿದ್ರೆ ಕೀರ್ತನಾ ಚಿರ ನಿದ್ರೆಗೆ ಜಾರಿದ್ಳು. ಅಯ್ಯೋ ಮಗಳೇ ಮನೆಗೆ ವಾಪಸ್ ಬರ್ತಿನಿ ಅಂತ ಹೋದವಳು ಬರಲೇ ಇಲ್ವಲ್ಲ ಅಂತ ಹೆತ್ತ ಜೀವಗಳು ಆಸ್ಪತ್ರೆ ಮುಂದೆ ಆಕ್ರಂದಿಸ್ತಿವೆ. ನಿಜಕ್ಕೂ ಈ ದೃಶ್ಯ ನೋಡ್ತಿದ್ರೆ ದೇವರು ಅದೆಷ್ಟು ಕ್ರೂರಿ ಅಂತ ಅನಿಸಿಬಿಡುತ್ತೆ.
ಕೀರ್ತನಾ ತಂದೆ ತಾಯಿಗೆ ಇಬ್ಬರು ಮಕ್ಕಳು. ಒಬ್ಬ ಅಣ್ಣ, ಇವಳು ಕೊನೆ ಮಗಳು. ಅಣ್ಣ ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿದ್ರೆ, ಕೀರ್ತನಾ ಫೈನಲ್​ ಇಯರ್ ಎಂಜಿನಿಯರಿಂಗ್ ಓದ್ತಿದ್ಳು. ಇನ್ನೊಂದೆರಡು ತಿಂಗಳು ಕಳೆದಿದ್ರೆ ಕೀರ್ತನಾ ಇಂಜಿನಿಯರ್ ಕೀರ್ತನಾ ಆಗ್ತಿದ್ಳು. ಆ ಕನಸು ಈಡೇರುವ ಮುನ್ನವೇ ರಾಕ್ಷಸ ಮರ ಆಕೆ ಜೀವ ಬಲಿ ಪಡೆದು ಬಿಟ್ಟಿದೆ. ಬಾಳಿ ಬದುಕುಬೇಕಾಗಿದ್ದವಳು ಯಾರದ್ದೋ ನಿರ್ಲಕ್ಷ್ಯಕ್ಕೆ ಜೀವ ಕಳ್ಕೊಂಡು ಮಸಣದ ಮನೆ ಸೇರಿದ್ದಾಳೆ.
ಇದನ್ನೂ ಓದಿ:ದೊಡ್ಡ ಅಪಾಯದಿಂದ ದೇವರಕೊಂಡ ಜಸ್ಟ್ ಮಿಸ್​.. ಅಪಘಾತದ ಬಗ್ಗೆ ನಟ ಹೇಳಿದ್ದೇನು?
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಅವಘಡ ಸಂಭವಿಸಿದೆ. ಇಬ್ಬರ ಮೇಲೆ ಮರದ ಕೊಂಬೆ ಮುರಿದು ಬಿದ್ದಿತ್ತು. ಈ ಪೈಕಿ ಕೀರ್ತನಾ ಜೀವ ಕಳ್ಕೊಂಡ್ರೆ, ಇನ್ನೊಬ್ಬ ಬೈಕ ಸವಾರ ಭಾಸ್ಕರ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ದುರಂತ ಏನಂದ್ರೆ ಇಲ್ಲಿ ಕೇವಲ ಕೀರ್ತನಾಳ ಜೀವ ಮಾತ್ರ ಬಲಿಯಾಗಿಲ್ಲ. ಆಕೆ ಕಂಡ ಕನಸುಗಳು ಕೂಡ ಕಮರಿ ಹೋಗಿವೆ. ಬದುಕಿನ ಬಗ್ಗೆ ಹತ್ತಾರು ಆಸೆ ಇಟ್ಕೊಂಡಿದ್ದ ಕೀರ್ತನಾಳ ಆ ಕನಸುಗಳ ಬಗ್ಗೆ ಕೇಳ್ಬಿಟ್ರಿ ನೀವು ಮಮ್ಮಲ ಮರುಗಿಬಿಡ್ತಿರಾ.. ದೇವರು ಇಂಥಾ ಅನ್ಯಾಯ ಮಾಡ್ಬಾರದಿತ್ತು ಅಂತ ಶಾಪವೇ ಹಾಕಿಬಿಡ್ತಿರಾ!
ಇದನ್ನೂ ಓದಿ:ಕಮರಿದ ಕನಸುಗಳು.. ಕೀರ್ತನಾ ದುರಂತ ಅಂತ್ಯಕ್ಕೆ ಹೊಣೆ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ