/newsfirstlive-kannada/media/media_files/2025/10/07/vijay-devarakonda-2025-10-07-07-46-46.jpg)
ವಿಜಯ್ ದೇವರಕೊಂಡ.. ಮೊನ್ನೆಯಷ್ಟೇ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥದ ವಿಚಾರಕ್ಕೆ ಸುದ್ದಿಯಾಗಿದ್ರು.. ಟಾವಿವುಡ್‌ನ ರೌಡಿ- ಕೊಡಗಿನ ಕುವರಿಯನ್ನ ವರಿಸ್ತಾರೆ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಅಬ್ಬಿತ್ತು. ಆದ್ರೀಗ ಇತ್ತೀಚಿಗಷ್ಟೇ ಎಂಗೇಜ್ ಆಗಿರೋ ವಿಜಯ್ ಕಾರು ಅಪಘಾತವಾಗಿದೆ. ಅತಿದೊಡ್ಡ ಆಪತ್ತಿನಿಂದ ಸ್ಟಾರ್ ನಟ ಪಾರಾಗಿದ್ದಾರೆ.
ಬೊಲೆರೋ ವಾಹನ ಡಿಕ್ಕಿ.. ಅಪಾಯದಿಂದ ವಿಜಯ್ ಪಾರು
ಕೆಲ ದಿನಗಳ ಹಿಂದಷ್ಟೇ ವಿಜಯ್ ದೇವರಕೊಂಡ, ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಂದಿತ್ತು. ಇದು ಬಹುತೇಕ ನಿಜ ಎಂಬ ಚರ್ಚೆಯೂ ಕೇಳಿಬಂದಿತ್ತು. ಹೀಗೆ ಎಂಗೇಜ್‌ಮೆಂಟ್ ಖುಷಿಯಲ್ಲಿ ತೇಲ್ತಿದ್ದ ರಶ್ಮಿಕಾ ಮತ್ತು ವಿಜಯ್ ಫ್ಯಾನ್ಸ್ ಆಘಾತಕ್ಕೆ ಒಳಗಾಗುವಂಕ ಸುದ್ದಿ ನಿನ್ನೆ ಸಂಜೆ ವೇಳೆ ಹಬ್ಬಿತ್ತು.
ನಟ ವಿಜಯ್ ದೇವರಕೊಂಡ ನಿನ್ನೆ ಪುಟ್ಟಪರ್ತಿಯ ಸತ್ಯ ಸಾಯಿ ಬಾಬಾ ಅವರ ಸಮಾಧಿಯ ದರ್ಶನ ಮುಗಿಸಿ ತಮ್ಮ ಐಷಾರಾಮಿ ಲೆಕ್ಸಸ್ ಕಾರಿನಲ್ಲಿ ಹೈದ್ರಾಬಾದ್‌ಗೆ ತೆರಳುತ್ತಿದ್ರು. ಹೀಗೆ ಗದ್ವಾಲ್ ಜಿಲ್ಲೆಯ ಉಂಡವೆಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬರ್ತಿದ್ದಾಗ ಬೊಲೆರೋ ವಾಹನ ವಿಜಯ್ ದೇವರಕೊಂಡ ಕಾರಿಗೆ ಡಿಕ್ಕಿ ಹೊಡೆದಿದೆ.
ವಿಜಯ್ ಕಾರಿನ ಮುಂದೆ ಎಡಗಡೆ ಚಲಿಸುತ್ತಿದ್ದ ಬೊಲೆರೋ ವಾಹನ ಇದ್ದಕ್ಕಿದ್ದಂತೆ ಬಲಕ್ಕೆ ತಿರುಗಿದೆ.. ಪರಿಣಾಮ ವಿಜಯ್ ಕಾರಿಗೆ ಜೋರಾಗಿ ಗುದ್ದಿದೆ. ಅಪಘಾತದಲ್ಲಿ ಕಾರಿನ ಬಾನೆಟ್ ನಜ್ಜು-ಗುಜ್ಜಾಗಿದೆ. ಅದೃಷ್ಟವಶಾತ್ ವಿಜಯ್ ದೇವರಕೊಂಡ ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ. ಬಳಿತ ತಮ್ಮ ಸ್ನೇಹಿತರ ಕಾರಿನಲ್ಲಿ ಹೈದ್ರಾಬಾದ್‌ಗೆ ಪಯಣಿಸಿದ್ದಾರೆ. ಅಲ್ಲದೇ ಕಾರು ಅಪಘಾತದ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಆಲ್ ಈಸ್ ವೆಲ್..
ಆಲ್ ಈಸ್ ವೆಲ್.. ಕಾರು ಅಪಘಾತವಾಗಿದೆ. ಆದ್ರೆ, ನಾವೆಲ್ಲರೂ ಚೆನ್ನಾಗಿದ್ದೇವೆ. ನಾನು ಅಪಘಾತ ಸ್ಥಳದಿಂದ ತೆರಳಿ ಸ್ಟ್ರೆಂತ್ ವರ್ಕೌಟ್ ಮಾಡಿ ಬಳಿಕ ಮನೆಗೆ ಹೋಗಿದ್ದೇನೆ. ನನ್ನ ತಲೆಗೆ ನೋವಾಗಿದೆ. ಆದ್ರೆ, ಪರವಾಗಿಲ್ಲ.. ಒಂದು ಬಿರಿಯಾನಿ ತಿಂದುನಿದ್ರೆ ಮಾಡಿದ್ರೆ ಎಲ್ಲಾ ಸರಿಯಾಗುತ್ತೆ. ನಿಮಗೆಲ್ಲಾ ನನ್ನ ಕಡೆಯಿಂದ ಪ್ರೀತಿಯಿಂದ ಒಂದು ಬಿಗಿಯಾದ ಅಪ್ಪುಗೆ.
ವಿಜಯ್ ದೇವರಕೊಂಡ, ನಟ
ವಿಜಯ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಖುಷಿಯಲ್ಲಿದ್ದ ರಶ್ಮಿಕಾಗೆ ಇದು ಕೊಂಚ ನೋವು ತಂದಿರಬಹುದು. ದೊಡ್ಡ ಗಂಡಾಂತರದಿಂದ ತೆಲುಗಿನ ರೌಡಿಬಾಯ್​​ ಬಚಾವ್ ಆಗಿದ್ದು ಈ ಜೋಡಿ ಹೀಗೆ ಸದಾ ನಗುತಿರಲಿ ಅಂತ ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಎಂಗೇಜ್ಮೆಂಟ್.. ಮದುವೆ ಯಾವಾಗ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ