/newsfirstlive-kannada/media/media_files/2025/10/07/keethana-1-2025-10-07-09-25-56.jpg)
ಜಸ್ಟ್ 24 ವರ್ಷದ ಯುವತಿ. ಹೆಸರು ಕೀರ್ತನಾ. ಲೈಫ್​ನಲ್ಲಿ ಏನಾದ್ರೂ ಸಾಧಿಸ್ಬೇಕು ಅನ್ನೋ ಛಲ ಇದ್ದಂತ ಹುಡುಗಿ. ಆದ್ರೆ ಅದ್ಯಾರ ಕೆಟ್ಟ ಕಣ್ಣು ಬಿದ್ದಿತ್ತೋ ಗೊತ್ತಿಲ್ಲ. ಬಾಳಿ ಬದುಕಬೇಕಾಗಿದ್ದವಳ ಮೇಲೆ ದೈತ್ಯ ಮರವೊಂದು ಜವರಾಯನಂತೆ ಎರಗಿ ಆಕೆ ಜೀವಕ್ಕೆ ಕೊಳ್ಳಿ ಇಟ್ಟು ಬಿಟ್ಟಿದೆ. ಬೆಂಗಳೂರಲ್ಲಿ ನಡೆದ ಈ ಘಟನೆ ತುಂಬಾನೇ ಹೃದಯ ವಿದ್ರಾವಕವಾಗಿದೆ.
ಇದನ್ನೂ ಓದಿ: ಡ್ಯಾನ್ಸರ್, ಇಂಜಿನಿಯರ್​ 24 ವರ್ಷಕ್ಕೆ ದಾರುಣ ಅಂತ್ಯ.. ಮನೆ ದೀಪವೇ ಆರಿ ಹೋಯಿತು..
ಹೌದು, ಕೀರ್ತನಾ 22 ವರ್ಷಕ್ಕೆ ಪ್ರಾಣ ಕಳ್ಕೊಂಡಿದ್ದಾಳೆ. ಇಲ್ಲಿ ಕೇವಲ ಕೀರ್ತನಾಳ ಜೀವ ಮಾತ್ರ ಹೋಗಿಲ್ಲ.. ಬದುಕಿನ ಬಗ್ಗೆ ಕಟ್ಕೊಂಡಿದ್ದ ಹತ್ತಾರು ಕನಸುಗಳು ಕೂಡ ಸುಟ್ಟು ಬೂದಿಯಾಗಿ ಹೋಗಿವೆ. ಇಂಜಿನಿಯರ್ ಆಗ್ಬೇಕು.. ವಿದೇಶಕ್ಕೆ ಹೋಗ್ಬೇಕು.. ಒಂದಾ ಎರಡಾ ಕನಸಿನ ಬುತ್ತಿಯನ್ನೆ ಹೊತ್ತಿದ್ದವಳು ಈಗ ಮಸಣ ಸೇರಿರೋದು ಇಡೀ ಕುಟುಂಬವನ್ನೆ ದುಃಖದ ಕಡಲಲ್ಲಿ ತೇಲಿಸಿದೆ. ಕೀರ್ತನಾಳ ಕಮರಿ ಹೋದ ಕನಸುಗಳ ಬಗ್ಗೆ ಕೇಳ್ತಿದ್ರೆ ಮನಸ್ಸು ಮಮ್ಮಲ ಮರಗಿ ಬಿಡುತ್ತೆ..
ಇದನ್ನೂ ಓದಿ:ಕಾಂತಾರ ಭರ್ಜರಿ ಕಲೆಕ್ಷನ್.. 4 ದಿನದಲ್ಲಿ ಎಷ್ಟು ಕೋಟಿ ಬಾಚಿದೆ ಗೊತ್ತಾ..?
ಕೀರ್ತನಾಳ ಮೃತದೇಹವನ್ನ ಸಪ್ತಗಿರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಟೈಮ್​ನಲ್ಲಿ ಶವಗಾರದ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆ ಮಗಳನ್ನ ಕಳ್ಕೊಂಡ ದುಃಖ ಅವರನ್ನ ಪಾತಾಳಕ್ಕೆ ಕುಸಿಯುವಂತೆ ಮಾಡಿತ್ತು.. 24 ವರ್ಷಕ್ಕೆ ಒಬ್ಬ ಹುಡುಗಿ ಸಾಯ್ತಾಳೆ ಅಂದ್ರೆ ಯಾರವ ಅಪ್ಪ ಅಮ್ಮನಿಗಾದ್ರೂ ಸಹಿಸಿಕೊಳ್ಳೋಕೆ ಸಾಧ್ಯ ಹೇಳಿ. ಈ ಜೀವಗಳು ಮಗಳ ಬದುಕಿನ ಬಗ್ಗೆ ಅದೆಷ್ಟು ಕನಸು ಕಟ್ಕೊಂಡಿದ್ರು.. ಆಕೆ ಮದ್ವೆ ಬಗ್ಗೆ ಅದೆಷ್ಟು ಆಸೆ ಇಟ್ಕೊಂಡಿದ್ರೊ ಗೊತ್ತಿಲ್ಲ.. ಆದ್ರೀಗ ಜವರಾಯನ ಅಟ್ಟಹಾಸಕ್ಕೆ ಮಗಳ ಬದುಕು ಮುಗಿದಿದೆ. ಹೆತ್ತವರ ಕನಸಿಗು ಕೊಳ್ಳಿ ಬಿದ್ದಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಘೋರ ದುರಂತ.. ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದವ್ರ ಮೇಲೆ ಹರಿದ ಬಸ್..
ಅಧಿಕಾರಿಗಳ ನಿರ್ಲಕ್ಷ್ಯನೋ ಅಥವಾ ಸಿಬ್ಬಂದಿ ಬೇಜವಾಬ್ದಾರಿತನವೋ ಗೊತ್ತಿಲ್ಲ. ಇವರು ಮಾಡೋ ಎಡವಟ್ಟಿಗೆ ಪಾಪ ಈ ಹುಡುಗಿ ಉಸಿರು ಹೋಗಿರೋದು ದುರಂತವೇ. ಮುಂಚೆಯೇ ಅಧಿಕಾರಿಗಳು ಅಲರ್ಟ್​ ಈ ಮರದ ಕೊಂಬೆಯನ್ನ ಕತ್ತರಿಸಿದಿದ್ರೆ ಇಂಥಾ ಅನಾಹುತ ಆಗ್ತಾ ಇರಲ್ಲಿಲ್ಲ. ಎಲ್ಲ ಮುಗಿದ್ಮೆಲೆ ಸ್ಥಳಕ್ಕೆ ಬಂದು ಮರ ತೆರವು ಕೆಲಸ ಮಾಡಿದ್ರೆ ಪ್ರಯೋಜನ ಏನು? ಹೋದ ಜೀವ ವಾಪಸ್ ಬರುತ್ತಾ? ಮಗಳನ್ನ ಕಳ್ಕೊಂಡ ಈ ಜೀವಗಳಿಗೆ ಸಮಧಾನ ಮಾಡೋಕೆ ಆಗುತ್ತಾ ?
ಇದನ್ನೂ ಓದಿ: ದೊಡ್ಡ ಅಪಾಯದಿಂದ ದೇವರಕೊಂಡ ಜಸ್ಟ್ ಮಿಸ್​.. ಅಪಘಾತದ ಬಗ್ಗೆ ನಟ ಹೇಳಿದ್ದೇನು?
ಕೀರ್ತನಾ ಒಬ್ಬ ಡ್ಯಾನ್ಸರ್ ಆಗಿದ್ಳು. ಅದ್ರಲ್ಲೂ ಸಾಮಾನ್ಯ ಕಲಾವಿದೆಯಲ್ಲ ಈಕೆ. ಸರಸ್ವತಿ ಪುತ್ರಿಯೇ ಆಗಿದ್ಳು.. ಯಾಕಂದ್ರೆ ಕೀರ್ತನಾಳಿಗೆ ಭರತನಾಟ್ಯ ಅಂದ್ರೆ ಬಲು ಇಷ್ಟ.. ಹೀಗಾಗಿ ಭರತನಾಟ್ಯವನ್ನ ಕಲಿತು ಅದ್ರಲ್ಲಿ ಪ್ರಾವಿಣ್ಯೆಯಾಗಿದ್ಳು.. ಕಾಲೇಜಗಳಲ್ಲಿ ಈಕ ನಾಟ್ಯವನ್ನು ಪ್ರೇಕ್ಷಕರು ಬಿಟ್ಟ ಕಣ್ಣು ಬಿಟ್ಟಂತೆ ನೋಡ್ತಿದ್ರು. ಅದಕ್ಕೆ ಕೀರ್ತನಾ ಭರತನಾಟ್ಯದ ಈ ಫೋಟೋಗಳೇ ಸಾಕ್ಷಿ.. ಹಾಗಂತ ಕೀರ್ತನಾ ಭರತನಾಟ್ಯ ಪ್ರವೀಣೆ ಮಾತ್ರವಲ್ಲ. ಮಲ್ಟಿ ಲ್ಯಾಲೆಟೆಂಡ್ ಹುಡುಗಿಯಾಗಿದ್ಳು. ಜೀವನದಲ್ಲಿ ಏನಾದ್ರೂ ಸಾಧಿಸ್ಬೇಕು. ಒಂದು ನೆಲೆ ಕಂಡುಕೊಳ್ಬೇಕು ಅನ್ನೋ ಆಸೆ ಇಟ್ಕೊಂಡಿದ್ಳು. ಆದ್ರೀಗ ಎಲ್ಲ ಆಸೆಗಳು ಈಡೇರು ಮುನ್ನವೆ ಸಾವಿನ ಮನೆ ಸೇರಿರೋದು ನಿಜಕ್ಕೂ ಘೋರ ದುರಂತ.
ಕೀರ್ತನಾ ಫೈನಲ್ ಇಯರ್ ಇಂಜಿನಿಯರಿಂಗ್ ಓದ್ತಿದ್ಳು. ಇನ್ನು ಮೂರು ನಾಲ್ಕು ತಿಂಗಳು ಕಳೆದಿದ್ರೆ ಈಕೆ ಪದವಿ ಕಂಪ್ಲೀಂಟ್ ಆಗ್ತಿತ್ತು.. ಇದಾದ ಮೇಲೆ ಕೀರ್ತನಾ ವಿದೇಶಕ್ಕೆ ಹೋಗಿ ಹೆಚ್ಚಿನ ವಿದ್ಯಭ್ಯಾಸ್ ಮಾಡ್ಬೇಕು ಅಂತ ಅಂದಕೊಂಡಿದ್ಳು.. ಆದ್ರೆ ದೇವರು ನಾವು ಅಂದುಕೊಂಡಿದ್ದನ್ನ ಈಡೇರಿಸ್ತಾನ ಹೇಳಿ ಸಾಧ್ಯವೇ ಇಲ್ಲ. ಕೀರ್ತನಾ ಬಾಳಲ್ಲೂ ಕೂಡ ಇದೇ ದಾರುಣ ನಡೆದಿದೆ. ದೈತ್ಯ ಮರವೊಂದು ಆಕೆ ವಿದೇಶಕ್ಕೆ ಹೋಗ್ಬೇಕು ಅನ್ನೋ ಕನಸಿಗೂ ಕೂಡ ಕೊಳ್ಳಿ ಇಟ್ಟುಬಿಟ್ಟಿದೆ.
ಇದನ್ನೂ ಓದಿ:ದೊಡ್ಡ ಅಪಾಯದಿಂದ ದೇವರಕೊಂಡ ಜಸ್ಟ್ ಮಿಸ್​.. ಅಪಘಾತದ ಬಗ್ಗೆ ನಟ ಹೇಳಿದ್ದೇನು?
ಕೀರ್ತನಾ ಅಗಲಿಕೆಯಿಂದ ಇಡೀ ಮನೆಮಂದಿಗೆಲ್ಲ ಸಿಡಿಲು ಬಡಿದಂತಾಗಿದೆ. ಅಯ್ಯೋ ರಾತ್ರಿಯಿದ್ದ ಮಗಳು ಬೆಳಗ್ಗೆ ಹೊತ್ತಿಗೆ ಹೆಣವಾದಳಲ್ಲ ಅಂತ ಅಕ್ಷರಶಹ ಶಾಕ್​ಗೆ ಒಳಗಾಗಿದ್ದಾರೆ. ಹೀಗಾಗಿ ಮಗಳ ಅನ್ಯಾಯದ ಸಾವಿನ ವಿರುದ್ಧ ಕಿಡಿ ಕಾರಿರೋ ಕೀರ್ತನಾ ಮನೆಯವರು ಅಧಿಕಾರಿಗಳ ನಿರ್ಲಕ್ಷದಿಂದಲೇ ಈಕೆ ಜೀವ ಹೋಗಿದೆ. ಆ ದಿನಾಚರಣೆ ಈ ದಿನಾಚರಣೆ ಅಂತೆಲ್ಲ ಮಾಡ್ತಾರೆ. ಆದ್ರೆ ಗಿಡದ ಬಗ್ಗೆ ಪರಿಶೀಲನೆ ಮಾಡಲ್ಲ, ಮರ ಟೊಳ್ಳಾಗುತ್ತಾ ಅಂತ ಚೆಕ್ ಮಾಡಲ್ಲ. ಈತರ ಆಗೋಕೆ ಮುಂಚೆ ಅಧಿಕಾರಿಗಳು ಕ್ರಮ ತಗೋಬೇಕು ಅಂತ ಆಕ್ರೋಶ ಹೊರ ಹಾಕಿದ್ದಾರೆ. ಇವತ್ತು ನಮ್ಮ ಮನೆಯಲ್ಲಿ ಒಂದು ಜೀವ ಹೋಗಿದೆ. ಬೇರೆಯವರ ಮನೆಯಲ್ಲಿ ಮತ್ತೆ ಈ ತರ ಇನ್ನೊಬ್ಬರ ಜೀವ ಹೋಗ್ಬಾರದು ಅಂತ ಅಳಲು ತೋಡಿಕೊಂಡ್ರು.
ಇದನ್ನೂ ಓದಿ:ಕಾಂತಾರ ಭರ್ಜರಿ ಕಲೆಕ್ಷನ್.. 4 ದಿನದಲ್ಲಿ ಎಷ್ಟು ಕೋಟಿ ಬಾಚಿದೆ ಗೊತ್ತಾ..?
ಪಾಲಿಕೆ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು?
ಕೀರ್ತನಾ ಪ್ರಾಣ ಹೋಗಿರೋದು ಒಂದ್ಕಡೆಯಾದ್ರೆ ಪಾಲಿಕೆ ನಿರ್ಲಕ್ಷ್ಯಕ್ಕೆ ಬೆಂಗಳೂರಿನ ನವರಂಗ್ ಸರ್ಕಲ್ ಬಳಿ ಬೃಹತ್​ ಮರವೊಂದು ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಧರಾಶಾಹಿಯಾಗಿದ್ದು, ಪರಿಣಾಮ ಓಮಿನಿ, ವ್ಯಾಗ್ನರ್, ಎರಡು ಬೈಕ್​ಗಳು ಜಖಂಗೊಂಡಿವೆ. ಕೆಲ ಕಾಲ ಈ ದುರಂತದಿಂದಾಗಿ ತುಮಕೂರಿಂದ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ಇನ್ನು ಉಲ್ಲಾಳದ ವಿ6 ಅಪಾರ್ಟ್ ಮೆಂಟ್​ನಲ್ಲಿ ಕಾಂಪೌಂಡ್ ಕುಸಿದಿದ್ದು, ಪರಿಣಾಮ ಕಾರು ಜಖಂ ಆಗಿದೆ. ಸದ್ಯ ಅಪಾರ್ಟ್ ಮೆಂಟ್ ಸಿಬ್ಬಂದಿ ಕುಸಿದು ಬಿದ್ದ ಕಾಂಪೌಂಡ್ ತೆರವು ಮಾಡಿದ್ದಾರೆ.. ಹಾಗಂತ ಪಾಲಿಕೆ ನಿರ್ಲಕ್ಷ್ಯಕ್ಕೆ ಇದೇ ಮೊದಲೇನು ಅವಘಡಗಳು ಸಂಭವಿಸ್ತಿಲ್ಲ.. ಈ ಹಿಂದೆಯೂ ಅದೆಷ್ಟು ಜನರ ಪ್ರಾಣಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕುತ್ತು ತಂದ ಉದಾಹರಣೆಗಳು ಕಮ್ಮಿ ಇಲ್ಲ.. ಬಿಬಿಎಂಪಿಯನ್ನ ಜಿಬಿಎ ಮಾಡಿದ್ದಷ್ಟೆ ಬಂತು ಹೊರತಾಗಿ ಮರದ ಸಮಸ್ಯೆಗೆ ಪರಿಹಾರ ಇಲ್ವಾ ಅಂತ ಜನ ಆಕ್ರೋಶ ಹೊರ ಹಾಕ್ತಿದ್ದಾರೆ.
ಇನ್ನಾದ್ರೂ ಪಾಲಿಕೆಯವರು ಬಾಗಿರೋ ಮರಗಳ ಕೊಂಬೆಗಳನ್ನ ಕತ್ತರಿಸಿದ್ರೆ ಜನ ನೆಮ್ಮದಿಯಾಗಿ ಓಡಾಡಬಹುದು.. ಇಲ್ಲ ಮತ್ತದೇ ಹಳೆ ಹಾಡು ಹಳೆ ರಾಗ ಮುಂದುವರಿಸಿದ್ರೆ ಜನರ ಪ್ರಾಣಕ್ಕೆ ಕಂಟಕ ಮಾತ್ರ ತಪ್ಪಿದ್ದಲ್ಲ. ಇನ್ನು ಬಾಳಿ ಬದುಕಬೇಕಾಗಿದ್ದ ಹುಡುಗಿ ಕೀರ್ತನಾಳ ಜೀವ ಬಲಿಯಾಗಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.
ಇದನ್ನೂ ಓದಿ: ಡ್ಯಾನ್ಸರ್, ಇಂಜಿನಿಯರ್​ 24 ವರ್ಷಕ್ಕೆ ದಾರುಣ ಅಂತ್ಯ.. ಮನೆ ದೀಪವೇ ಆರಿ ಹೋಯಿತು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ