/newsfirstlive-kannada/media/media_files/2025/10/07/koppal-accident-1-2025-10-07-07-31-49.jpg)
ಕೊಪ್ಪಳದ ಕೂಕನಪಳ್ಳಿ (Koppal Kookanapally) ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಘೋರ ದುರಂತ ಸಂಭವಿಸಿದೆ. ದೇವರ ದರ್ಶನಕ್ಕಾಗಿ ಪಾದಯಾತ್ರೆಗೆ ಹೊರಟಿದ್ದರ ಮೇಲೆ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅನ್ನಪೂರ್ಣ(40), ಪ್ರಕಾಶ್(25), ಶರಣಪ್ಪ(19) ಮೃತ ದುರ್ದೈವಿಗಳು. ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೇಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ಹೊರಟಿದ್ದರು. ಕಳೆದ ಎರಡು ದಿನಗಳ ಹಿಂದೆ ಹುಲಗಿಯ ಹುಲಿಗೇಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದರು. ಮೃತರೆಲ್ಲ ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದವರು. ಖಾಸಗಿ ಬಸ್ ಸಿಂಧೋಗಿಯಿಂದ ಬೆಂಗಳೂರಿಗೆ ತೆರಳುತ್ತಿತ್ತು.
ಚಾಲಕ ಅರೆಸ್ಟ್..
ಕೇವಲ 3 ಗಂಟೆ ನಡೆದರೆ ದೇವರ ಸನ್ನಿಧಿ ತಲುಪುತ್ತಿದ್ದರು. ಅದಕ್ಕೂ ಮುನ್ನವೇ ಘೋರ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಡಾ.ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕ ಸಂತೋಷ್​​ನನ್ನು ಮುನಿರಾಬಾದ್​ ಪೊಲೀಸರು ಬಂಧಿಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಮಾವಿನ ಎಲೆಗಳ ಚಹಾ.. ನಿಮ್ಮ ಮೆದುಳಿನ ಆರೋಗ್ಯಕ್ಕೆ ಬೆಸ್ಟ್ ಆಯ್ಕೆ ಅಂದ್ರೆ ಟೀ..!
ಒಟ್ಟು ಏಳು ಮಂದಿ ಪಾದಯಾತ್ರೆ ಮಾಡುತ್ತಿದ್ದರು. ಮಲ್ಲಿಕಾರ್ಜುನ ಮ್ಯಾಗೇರಿ ಆದಪ್ಪ ಅಂಡಿ, ಸಿದ್ದಪ್ಪ ಅಂಡಿ, ಕಸ್ತೂರಿಯವ್ವ ಮ್ಯಾಗೇರಿಗೆ ಗಾಯವಾಗಿದೆ. ಕಸ್ತೂರಿ ಅನ್ನೋರಿಗೆ ಬೆನ್ನುಮೂಳೆ ಮೂರಿದು ಗಂಭೀರಗಾಯವಾಗಿದೆ. ಇನ್ನು, ಸ್ವಲ್ಪಹೊತ್ತು ಕಳೆದಿದ್ರೆ ದೇವಸ್ಥಾನಕ್ಕೆ ಹೋಗುತ್ತಿದ್ದೆವು. ಈ ರೀತಿಯಾದ್ರೆ ದೇವರು ಯಾಕೆ ಬೇಕೆ ಅನಿಸುತ್ತದೆ. ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು ಎಂದ ಗಾಯಳು ಮಲ್ಲಿಕಾರ್ಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಯಚೂರಲ್ಲಿ ಕೆಲಸ ಮಾಡಲು ಬಯಸುವರಿಗೆ ಗುಡ್​ನ್ಯೂಸ್.. RIMSನಲ್ಲಿ ಉದ್ಯೋಗಾವಕಾಶಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ