Advertisment

ಅಗ್ನಿ ಪರೀಕ್ಷೆಯಲ್ಲಿ ಶುಭ್​ಮನ್​ ಗಿಲ್.. ‘ಯುವರಾಜ’ನ ಮುಂದಿವೆ 5 ಬಿಗ್ ಚಾಲೆಂಜ್..!

ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಕೆ.ಎಲ್​ ರಾಹುಲ್​, ಜಸ್​​ಪ್ರಿತ್​ ಬೂಮ್ರಾ ಕ್ರಿಕೆಟ್​ ಲೋಕ ಕಂಡ ದಿಗ್ಗಜ ಆಟಗಾರರು ಏಕದಿನ ತಂಡದಲ್ಲಿದ್ದಾರೆ. ಇಂತಾ ಸೀನಿಯರ್​ ಪ್ಲೇಯರ್​ಗಳ ಜೊತೆಗೆ ಹಲವು ಯುವ ಆಟಗಾರರೂ ಕೂಡ ಟೀಮ್​ನಲ್ಲಿದ್ದಾರೆ.

author-image
Bhimappa
GILL_ROHITH_SHARMA
Advertisment

ಆಸ್ಟ್ರೇಲಿಯಾ ಪ್ರವಾಸದೊಂದಿಗೆ ಟೀಮ್​ ಇಂಡಿಯಾ ಏಕದಿನ ತಂಡದಲ್ಲಿ ಹೊಸ ಪರ್ವ ಆರಂಭವಾಗಲಿದೆ. ನೂತನವಾಗಿ ಸಿಂಹಾಸನ ಏರಿರುವ ಪ್ರಿನ್ಸ್​​ ಶುಭ್​ಮನ್​ ಗಿಲ್ ಅಳ್ವಿಕೆ ಶುರುವಾಗಲಿದೆ. ತಂಡದಲ್ಲಿರೋ ಸೀನಿಯರ್​​ಗಳನ್ನ ಬೀಟ್​ ಮಾಡಿ 25 ವರ್ಷಕ್ಕೆ ಏಕದಿನ ನಾಯಕನ​ ಪಟ್ಟವೇರಿರೋ ಶುಭ್​ಮನ್​ ಗಿಲ್​ಗೆ ಮೊದಲ ಪ್ರವಾಸದಲ್ಲೇ ಅಗ್ನಿ ಪರೀಕ್ಷೆ ಎದುರಾಗಲಿದೆ. ಶುಭ್​ಮನ್​ ಮುಂದಿರೋ ಸವಾಲುಗಳೇನು?.

Advertisment

ಟೀಮ್​ ಇಂಡಿಯಾ ಏಕದಿನ ತಂಡದಲ್ಲಿ ಹೊಸ ಪರ್ವದ ಆರಂಭಕ್ಕೆ ಕೌಂಟ್​​ಡೌನ್ ಶುರುವಾಗಿದೆ. ಹೊಸ ನಾಯಕನ ಸಾರಥ್ಯದಲ್ಲಿ ಮಹತ್ವದ ಸರಣಿಗೆ ಟೀಮ್​ ಇಂಡಿಯಾ ರೆಡಿಯಾಗಿದೆ. ನೂತನವಾಗಿ ಸಿಂಹಾಸನವೇರಿರುವ ಶುಭ್​ಮನ್​ ಗಿಲ್​ಗೆ ನಿಜವಾದ ಪರೀಕ್ಷೆ ಇನ್ನು ಆರಂಭವಾಗಲಿದೆ. ಟೆಸ್ಟ್​ ನಾಯಕನಾಗಿ ಶುಭ್​ಮನ್​ ಸಕ್ಸಸ್​ ಕಂಡಿದ್ದಾರೆ. ವೈಟ್​ಬಾಲ್​ ಫಾರ್ಮೆಟ್​ನಲ್ಲಿ ಬ್ಯಾಟ್ಸ್​ಮನ್​ ಆಗಿಯೂ ಯಶಸ್ಸನ್ನ ಕಂಡಿದ್ದಾರೆ. ಆದ್ರೆ, ನಾಯಕನಾಗಿ ಅದೇ ಯಶಸ್ಸನ ಓಟ ಮುಂದುವರೆಸ್ತಾರಾ ಅನ್ನೋದೆ ಸದ್ಯಕ್ಕಿರೋ ಪ್ರಶ್ನೆಯಾಗಿದೆ. ನಾಯಕನ ಪಟ್ಟವೇರಿರುವ ಗಿಲ್​ಗೆ ಪ್ರಮುಖವಾಗಿ 5 ಸವಾಲುಗಳು ಎದುರಾಗಲಿವೆ. 

GILL_STYLE

ಚಾಲೆಂಜ್​ ನಂ.1- ನಾಯಕತ್ವದ ನಿರ್ವಹಣೆ

ನಾಯಕನಾಗಿ ಶುಭ್​ಮನ್​ ಗಿಲ್​ ಟೆಸ್ಟ್​​ನಲ್ಲಿ ಪಾಸ್​​ ಆಗಿದ್ದಾರೆ. ಐಪಿಎಲ್​ನಲ್ಲೂ ತಂಡವನ್ನ ಮುನ್ನಡೆಸಿದ ಅನುಭವವಿದೆ. ಆದ್ರೆ, ಏಕದಿನ ಮಾದರಿಯಲ್ಲಿ ನಾಯಕನಿಗೆ ಮತ್ತಷ್ಟು ಡಿಫರೆಂಟ್​ ಟಾಸ್ಕ್​ ಎದುರಾಗಲಿವೆ. 50 ಓವರ್​​ಗಳ ಸುದೀರ್ಘ ಗೇಮ್​ ಇದು. ಪಂದ್ಯ ಸಾಗಿದಂತೆ ಗೇಮ್​​ಪ್ಲಾನ್​, ಟ್ಯಾಕ್ಟಿಕ್ಸ್​ ಬದಲಾಗಬೇಕಿರುತ್ತೆ. ಆನ್​ ಫೀಲ್ಡ್​ನ ಒಂದೊಂದು ಡಿಶಿಷನ್​ ಕೂಡ ಗೇಮ್​ನ ಚೇಂಜ್​ ಮಾಡುತ್ತೆ. ಒತ್ತಡವೂ ಹೆಚ್ಚಾಗುತ್ತೆ. ಒತ್ತಡದ ನಡುವೆ ಸರಿಯಾದ ನಿರ್ಧಾರ ತೆಗೆದುಕೊಂಡು ನಾಯಕತ್ವವನ್ನ ನಿರ್ವಹಿಸೋದೆ ದೊಡ್ಡ ಸವಾಲು.

ಚಾಲೆಂಜ್​ ನಂ.2- ರೋಹಿತ್​ ಯಶಸ್ಸನ್ನ ಮುಂದುವರೆಸಬೇಕು

ನಾಯಕನಾಗಿ ರೋಹಿತ್​ ಶರ್ಮಾ ಏಕದಿನ ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾವನ್ನ ಯಶಸ್ಸಿನ ಉತ್ತುಂಗದಲ್ಲಿರಿಸಿದ್ದಾರೆ. 2023ರ ಏಕದಿನ ವಿಶ್ವಕಪ್​ನಲ್ಲಿ ತಂಡವನ್ನ ಅಜೇಯವಾಗಿ ಫೈನಲ್​ಗೆ ಕೊಂಡೊಯ್ದಿದ್ದ ರೋಹಿತ್​ ಶರ್ಮಾ, 2025ರ ಚಾಂಪಿಯನ್ಸ್​ ಟ್ರೋಫಿ ಕಿರೀಟ ಗೆಲ್ಲಿಸಿಕೊಟ್ಟಿದ್ದಾರೆ. ರೋಹಿತ್​ ನಾಯಕತ್ವದಡಿ ದ್ವಿಪಕ್ಷೀಯ ಸರಣಿಗಳಲ್ಲೂ ಟೀಮ್​ ಇಂಡಿಯಾ ಡಾಮಿನೇಟಿಂಗ್​ ಪರ್ಫಾಮೆನ್ಸ್​ ನೀಡಿದೆ. ಈ ಯಶಸ್ವಿನ ಓಟವನ್ನ ಮುಂದುವರೆಸೋ ಸವಾಲು ಇದೀಗ ಗಿಲ್​ ಮುಂದಿದೆ. 

Advertisment

ಚಾಲೆಂಜ್​ ನಂ.3- ಸೀನಿಯರ್​ ಆಟಗಾರರ ನಿರ್ವಹಣೆ

ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಕೆ.ಎಲ್​ ರಾಹುಲ್​, ಜಸ್​​ಪ್ರಿತ್​ ಬೂಮ್ರಾ ಕ್ರಿಕೆಟ್​ ಲೋಕ ಕಂಡ ದಿಗ್ಗಜ ಆಟಗಾರರು ಏಕದಿನ ತಂಡದಲ್ಲಿದ್ದಾರೆ. ಇಂತಾ ಸೀನಿಯರ್​ ಪ್ಲೇಯರ್​ಗಳ ಜೊತೆಗೆ ಹಲವು ಯುವ ಆಟಗಾರರೂ ಕೂಡ ಟೀಮ್​ನಲ್ಲಿದ್ದಾರೆ. ಸಣ್ಣ ಎಡವಟ್ಟಾದ್ರೂ ಡ್ರೆಸ್ಸಿಂಗ್​ರೂಮ್​ನ ವಾತಾವರಣ ಹದಗೆಡಲಿದೆ. ಸೀನಿಯರ್​, ಜೂನಿಯರ್​ ಆಟಗಾರರನ್ನ ಮ್ಯಾನೇಜ್​ ಮಾಡೋದು 25 ವರ್ಷದ ಗಿಲ್​ ದೊಡ್ಡ ಸವಾಲಾಗಲಿದೆ. 

ಚಾಲೆಂಜ್​ ನಂ.4- ಫಾರ್ಮ್​ ಜೊತೆ ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​

ಶುಭ್​ಮನ್​ ಗಿಲ್​ ಆಟಗಾರನಾಗಿ ಏಕದಿನ ಮಾದರಿಯಲ್ಲಿ ಸಾಲಿಡ್​ ರೆಕಾರ್ಡ್​ ಹೊಂದಿದ್ದಾರೆ. ಆರಂಭಿಕನಾಗಿ ಟೀಮ್​ ಇಂಡಿಯಾ ಇನ್ನಿಂಗ್ಸ್​ಗೆ ಗುಡ್​ ಸ್ಟಾರ್ಟ್​ ನೀಡಬೇಕಾದ ಜವಾಬ್ದಾರಿಯನ್ನ ಇಷ್ಟು ವರ್ಷ ಸಮರ್ಥವಾಗಿ ನಿರ್ವಹಿಸಿದ್ದಾರೆ. ನಾಯಕತ್ವದ ಒತ್ತಡದ ಜೊತೆಗೆ ಇದೇ ಫಾರ್ಮ್​ನ ಮುಂದುವರೆಸಬೇಕಿದೆ. ಜೊತೆಗೆ ಮೂರೂ ಫಾರ್ಮೆಟ್ ಪ್ಲೇಯರ್​ ಆಗಿರೋದ್ರಿಂದ ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ವಿಚಾರದಲ್ಲೂ ಎಚ್ಚರಿಕೆ ವಹಿಸಬೇಕಿದೆ. 

ಇದನ್ನೂ ಓದಿ: 6, 6, 6, 6, 6, 6, 6; ಪ್ರಭಾಸಿಮ್ರಾನ್ ಸಿಡಿಲಬ್ಬರದ ಶತಕ.. ಟೀಮ್ ಇಂಡಿಯಾ ಜಯಭೇರಿ

Advertisment

ABHISHEK_GILL

ಚಾಲೆಂಜ್​ ನಂ.5- ವಿಶ್ವಕಪ್​ಗೆ ಸಿದ್ಧತೆ, ಟ್ರೋಫಿ ಗೆಲುವು

2011ರಲ್ಲಿ ಧೋನಿ ನಾಯಕತ್ವದಲ್ಲಿ ವಿಶ್ವಕಪ್​ ಗೆದ್ದಿದ್ದೆ ಕೊನೆ. ಆ ಬಳಿಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊನೆ ಹಂತಗಳಲ್ಲಿ ಟೀಮ್​ ಇಂಡಿಯಾ ಎಡವಿದೆ. ಹೀಗಾಗಿ 2027ರ ವಿಶ್ವಕಪ್​ಗೆ ಈಗಿನಿಂದಲೇ ಟೀಮ್​ ಇಂಡಿಯಾದಲ್ಲಿ ಸಿದ್ಧತೆ ಆರಂಭವಾಗಿದೆ. ಅದ್ರ ಭಾಗವಾಗಿಯೇ ಗಿಲ್​ಗೆ ನಾಯಕನ ಪಟ್ಟ ಕಟ್ಟಲಾಗಿದೆ. ವಿಶ್ವಕಪ್​ಗೆ ಮುನ್ನ ಕೆಲವೇ ಕೆಲವು ಪಂದ್ಯಗಳಿದ್ದು, ನಾಯಕನಾಗಿ ಸಮರ್ಥ ಪ್ಲಾನಿಂಗ್​ ರೂಪಿಸಿಕೊಳ್ಳಬೇಕಿದೆ. ಏಕದಿನ ವಿಶ್ವಕಪ್​ ಗೆದ್ದು ಕೋಟ್ಯಂತರ ಅಭಿಮಾನಿಗಳ ಕನಸು ನನಸು ಮಾಡಬೇಕಿದೆ.

ಏಕದಿನ ನಾಯಕನ ಸಿಂಹಾಸನವೇರಿರುವ ಯುವ ನಾಯಕ ಶುಭ್​ಮನ್​ ಗಿಲ್​​ಗೆ ಮುಂದಿನ ಸರಣಿಗಳಲ್ಲಿ ಕಠಿಣ ಸವಾಲುಗಳು ಎದುರಾಗಲಿವೆ. ಆರಂಭದಲ್ಲೇ ಎದುರಾಗೋ ಅಗ್ನಿಪರೀಕ್ಷೆಗಳನ್ನ ಗಿಲ್​ ಗೆಲ್ತಾರಾ.? ತಂಡವನ್ನ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸ್ತಾರಾ.? ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Shubman Gill Shubman Gill Captaincy Shubman Gill style
Advertisment
Advertisment
Advertisment