/newsfirstlive-kannada/media/media_files/2025/08/21/annayya-serial-2025-08-21-19-38-18.jpg)
ಅಣ್ಣಯ್ಯ ಧಾರಾವಾಹಿ ಮಹಾ ತಿರುವು ಪಡೆದುಕೊಳ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ.​ ಇದರ ಮಧ್ಯೆ ಶಿವಣ್ಣನ ತಂಗಿಯರ ಮುಂದೆ ಶಾರದಮ್ಮನನ್ನ ಮನೆಗೆ ಕರೆದುಕೊಂಡು ಬಂದೇ ಬರುತ್ತೇನೆ ಅಂತ ಪಾರು ದಿಟ್ಟ ನಿರ್ಧಾರಕ್ಕೆ ಬಂದಿದ್ದಾಳೆ. ಹೀಗಾಗಿ ವೀಕ್ಷಕರ ಚಿತ್ತ ಅಣ್ಣಯ್ಯ ಸೀರಿಯಲ್​​ ಮೇಲೆ ನೆಟ್ಟಿದೆ.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ವಿವಾಹಿತೆ.. ಕಾರು ಸಮೇತ ಕೆರೆಗೆ ತಳ್ಳಿ ಜೀವ ತೆಗೆದನಾ ಕಿರಾತಕ..?
/filters:format(webp)/newsfirstlive-kannada/media/media_files/2025/08/21/annaya-2025-08-21-23-10-46.jpg)
ಇನ್ನೂ, ಇದೇ ಸೀರಿಯಲ್​ನಲ್ಲಿ ಕ್ಯೂಟ್​ ಕ್ಯೂಟ್​ ಆಗಿ ಮಾತಾಡೋ ಶಿವಣ್ಣನ ಮುದ್ದು ತಂಗಿ ರಮ್ಯಾ ಅಭಿನಯಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ರಮ್ಯಾ ಪಾತ್ರದಲ್ಲಿ ಅಂಕಿತಾ ಕಾಣಿಸಿಕೊಂಡಿದ್ದಾರೆ. ಮೂರು ಜನ ಸ್ವಂತ ತಂಗಿಯರ ನಡುವೆ ರಮ್ಯಾ ಎಲ್ಲೋ ಸಿಕ್ಕಿದವಳಾಗಿರುತ್ತಾಳೆ. ಆದರೂ ಅವಳನ್ನು ಸ್ವಂತ ತಂಗಿಯಂತೆಯೇ ಸಾಕಿರುತ್ತಾನೆ ಅಣ್ಣಯ್ಯ.
/filters:format(webp)/newsfirstlive-kannada/media/media_files/2025/08/21/annaya1-2025-08-21-23-11-10.jpg)
ಈಗ ನಟಿ ಅಂಕಿತಾ ನ್ಯೂಸ್​ಫಸ್ಟ್​ನೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ಈಗಿನ್ನೂ ನಟಿ ಅಂಕಿತಾ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಓದಿನ ಜೊತೆ ಜೊತೆಗೆ ಅಂಕಿತಾ ಶೂಟಿಂಗ್​ಗೂ ಕೂಡ ಹಾಜರಾಗುತ್ತಾರೆ. ಅಷ್ಟೇ ಅಲ್ಲದೇ ಕಾಟೇರ ಸಿನಿಮಾದಲ್ಲೂ ಅಂಕಿತಾ ಜೂನಿಯರ್ ಆರಾಧನಾ ಆಗಿ ಅಂಕಿತಾ ಗೌಡ ಕಾಣಿಸಿಕೊಂಡಿದ್ದರು. ಇನ್ನು, ಅಣ್ಣಯ್ಯ ಸೀರಿಯಲ್​ ಶೂಟಿಂಗ್​ ವೇಳೆ ನಿಜವಾಗಲೂ ಕಣ್ಣೀರು ಹಾಕಿದ್ದೇ ಅಂತ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ್ದಾರೆ.
ಅದೊಂದು ನನಗೆ ದೊಡ್ಡ ಟಾಸ್ಕ್​ ಆಗಿತ್ತೆ. ಮನೆಯಲ್ಲಿ ಯಾರೂ ಇರೋದಿಲ್ಲ. ನನ್ನ ಅಕ್ಕಂದಿರೆಲ್ಲಾ ಮನೆಯಲ್ಲಿ ಇರೋದಿಲ್ಲ. ಹುಡುಗಿ ದೊಡ್ಡವಾಳಾಗಿದ್ದಾಗ ಅಣ್ಣ ಅವಳನ್ನು ಹೇಗೆ ನೋಡಿಕೊಳ್ಳುತ್ತಾನೆ ಅನ್ನೋದು ಸೀನ್​. ಆ ಸೀನ್​ ಮಾಡೋವಾಗ ನಾನು ಮತ್ತೆ ಅಣ್ಣ ಇಬ್ಬರು ಅಳುತ್ತಾ ಇದ್ವಿ. ಅಲ್ಲಿ ನಿಂತಿರೋರೆಲ್ಲಾ ಯಾಕೆ ಅಳ್ತಾ ಇದ್ಯಾ ಅಂತ ಕೇಳುತ್ತಿದ್ದರು. ಅದರಲ್ಲೂ ಅಂತಹ ಸಂದರ್ಭದಲ್ಲಿ ಅಳುತ್ತಲೇ ಡೈಲಾಂಗ್​ ಹೇಳಿದ್ದೇ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us