/newsfirstlive-kannada/media/media_files/2025/08/21/hsn_woman-2025-08-21-14-32-11.jpg)
ಹಾಸನ: ಪ್ರೀತಿ ನಿರಾಕರಿಸಿದ ವಿವಾಹಿತ ಮಹಿಳೆಯನ್ನ ಕಾರು ಸಮೇತ ಸಿನಿಮೀಯ ರೀತಿಯಲ್ಲಿ ಕರೆಗೆ ತಳ್ಳಿ ಜೀವ ತೆಗೆಯಲಾಗಿದೆ ಎನ್ನುವ ಆರೋಪ ಮಾಡಲಾಗಿದೆ. ಸದ್ಯ ಈ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ಆಕೆಯ ಕುಟುಂಬಸ್ಥರು ಪ್ರಕರಣ ದಾಖಲು ಮಾಡಿದ್ದಾರೆ.
ಜಿಲ್ಲೆಯ ಬೇಲೂರಿನ ನಿವಾಸಿ ಶ್ವೇತಾ (32) ಜೀವ ಕಳೆದುಕೊಂಡ ಮಹಿಳೆ. ಮದುವೆ ಆಗಿದ್ದ ರವಿ ಎನ್ನುವ ವ್ಯಕ್ತಿ ಹಾಸನದಲ್ಲಿ ಕೆಲಸ ಮಾಡುವಾಗ ಮಹಿಳೆಗೆ ಪರಿಚಯವಾಗಿದ್ದನು. ಗಂಡನಿಂದ ದೂರವಾಗಿದ್ದ ಮಹಿಳೆ ತಂದೆ, ತಾಯಿ ಜೊತೆ ವಾಸವಿದ್ದರು. ರವಿ ಪರಿಚಯ ಇದ್ದಿದ್ದರಿಂದ ಒತ್ತಾಯವನ್ನು ಶ್ವೇತಾ ನಿರಾಕರಣೆ ಮಾಡಿದ್ದರು.
ಇದನ್ನೂ ಓದಿ: ಮಗು ಹುಟ್ಟಲು ಮಹಿಳೆಯರ ಅವಶ್ಯಕತೆನೇ ಇಲ್ಲ.. ಜೀವಂತ ಕಂದಗೆ ಜನ್ಮ ನೀಡಲಿದೆ ರೋಬೋಟ್.!
ಹಾಸನದಿಂದ ತನ್ನ ಕಾರಿನಲ್ಲಿ ರವಿ, ಶ್ವೇತಾರನ್ನು ಕರೆದುಕೊಂಡು ಚಂದನಹಳ್ಳಿ ಕೆರೆ ಬಳಿಗೆ ಬಂದಿದ್ದರು. ಶ್ವೇತಾ ಕಾರಿನಲ್ಲಿ ಇರುವಾಗಲೇ ಕಾರು ಸಮೇತ ಕೆರೆಗೆ ತಳ್ಳಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಶ್ವೇತಾ ಕುಟುಂಬದ ಸದಸ್ಯರ ದೂರು ಆಧರಿಸಿ ಕೊಲೆ ಕೇಸ್ ಅನ್ನು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ