ಮನೆಗೆ ಬಂದಿದ್ದ ಅತಿಥಿಗಳಿಗೆ ಹರ್ಟ್ ಮಾಡಿದ ಗಿಲ್ಲಿ -VIDEO

ಬಿಗ್ ​ಬಾಸ್​ ಮನೆಗೆ ಸೀಸನ್-11ರ ಸ್ಪರ್ಧಿಗಳಾದ ಮ್ಯಾಕ್ಸ್ ಮಂಜು, ಮೋಕ್ಷಿತಾ ಪೈ, ರಜತ್ ಕಿಶನ್, ತ್ರಿವಿಕ್ರಂ ಆಗಮಿಸಿದ್ದಾರೆ. ಇವರಲ್ಲಿ ಕೆಲವರು ವೈಲ್ಡ್​ ಕಾರ್ಡ್​ ಎಂಟ್ರಿಯಾಗಿ ಬಿಗ್​ ಬಾಸ್​ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ.

author-image
Ganesh Kerekuli
Gilli Nata and Rajat
Advertisment

ಬಿಗ್ ​ಬಾಸ್​ ಮನೆಗೆ ಸೀಸನ್-11ರ ಸ್ಪರ್ಧಿಗಳಾದ ಮ್ಯಾಕ್ಸ್ ಮಂಜು, ಮೋಕ್ಷಿತಾ ಪೈ, ರಜತ್ ಕಿಶನ್, ತ್ರಿವಿಕ್ರಂ ಆಗಮಿಸಿದ್ದಾರೆ. ಇವರಲ್ಲಿ ಕೆಲವರು ವೈಲ್ಡ್​ ಕಾರ್ಡ್​ ಎಂಟ್ರಿಯಾಗಿ ಬಿಗ್​ ಬಾಸ್​ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ. 

ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಅತಿಥಿಗಳೊಂದಿಗೆ ದೊಡ್ಡ ಪಾರ್ಟಿ ನಡೆಯುತ್ತಿದ್ದು, ಅದರ ಸಂಭ್ರಮ ಜೋರಾಗಿದೆ. ಈ ಮಧ್ಯೆ ಮಾತಿನ ಭರದಲ್ಲಿ ಅತಿಥಿಗಳಿಗೆ ಗಿಲ್ಲಿ ನಟ ಬೇಸರವನ್ನುಂಟು ಮಾಡಿದ್ರಾ ಎಂಬ ಪ್ರಶ್ನೆ ಶುರುವಾಗಿದೆ. ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಗೆ ಸಂಬಂಧಿಸಿದ ಕಲರ್ಸ್ ಕನ್ನಡ ಪ್ರೊಮೋ ಶೇರ್ ಮಾಡಿದೆ. 

ಇದನ್ನೂ ಓದಿ: ಅದ್ದೂರಿಯಾಗಿ ಅಕ್ಕನ ಮದುವೆ ಮಾಡಿದ ಸುಕೃತಾ ನಾಗ್..! Photos

ಅದರಲ್ಲಿ.. ‘ನಮ್ಮ ನಲ್ಮೆಯ ಮಹಾರಾಜ ಮಂಜು ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ’ ಎಂದು ಬಿಗ್​ಬಾಸ್ ಘೋಷಣೆ ಮಾಡಿದ್ದಾರೆ. ಆಗ ಎಲ್ಲರೂ ಖುಷಿಯಿಂದ ಶುಭಾಶಯ ಕೋರಿದ್ದಾರೆ. ಆಗ ಗಿಲ್ಲಿ, ‘ಎರಡನೆಯದಾ?, ಮೂರನೆಯದಾ..’ ಎಂದು ಪ್ರಶ್ನೆ ಮಾಡಿದ್ದಾರೆ, ಆಗ ಮಂಜು ತಿರುಗಿ ನೋಡಿದ್ದಾರೆ. ಅಲ್ಲದೇ, ಎದ್ದು ಹೋಗಿ ಕೆಲವೊಂದು ವಿಚಾರದಲ್ಲಿ ಪರ್ಸನಲ್​​ಗೆ ಬಂದರೆ ನೀನು ಸಪ್ಲೆಯರ್​​​ ಅಲ್ಲ, ನಾನು ಅತಿಥಿಯೂ ಅಲ್ಲ. ಬೇರೆಯೇ ಆಗಿಬಿಡ್ತೀವಿ ಎಂದು ಎಚ್ಚರಿಸಿದ್ದಾರೆ. 

ಮತ್ತೊಂದು ವಿಡಿಯೋ ಕ್ಲಿಪ್​ನಲ್ಲಿ, ಮಾತು ಒಂದಕ್ಕೆ ‘ಓ ನೀವೆಲ್ಲ.. ಸುಮ್ನೆ ಬಿಟ್ಟಿ ಊಟ ಮಾಡೋಕೆ ಬಂದಿದ್ದೀರಾ..? ಎಂದು ಕೇಳಿದ್ದಾರೆ. ಅದಕ್ಕೆ ರಜತ್ ರೊಚ್ಚಿಗೆದ್ದಿದ್ದಾರೆ. ನೀನು ಕೊಡ್ತಾ ಇದ್ದಿಯೆನಪ್ಪ ಬಿಟ್ಟಿ ಊಟನಾ? ಎಂದು ಕೇಳಿದ್ದಾರೆ. ಆಗ ಗಿಲ್ಲಿ ಸ್ವಾರಿ ಸರ್ ಎಂದಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ರಜತ್, ಮಾತುಗಳನ್ನು ಕರೆಕ್ಟ್ ಆಗಿ ಆಡಬೇಕು. ಮಗ ಎಲ್ಲರ ಹತ್ತಿರ ಮಾತನಾಡಿದ ಹಾಗೆ ನನ್ನ ಜೊತೆ ಮಾತನ್ನಾಡಲು ಬರಬೇಡ ಎಂದಿದ್ದಾರೆ. ಎಷ್ಟು ಇರಬೇಕು, ಅಷ್ಟೇ ಇರು ಮಗ ಎಂದು ವಾರ್ನ್ ಮಾಡಿದ್ದಾರೆ.  

ಇದನ್ನೂ ಓದಿ: ಹೃದಯಸ್ಪರ್ಷಿ ಪ್ರೀತಿಯ ಅಂತಾರಳ ಹೇಳಿದ ಬೆಸ್ಟ್​ ಬಡ್ಡೀಸ್..! ಹಾರ್ಟ್​ ಟಚ್ಚಿಂಗ್ ವಿಡಿಯೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rajath kishan, Akshita Rajath Bigg Boss Kannada 12 Gilli Nata Bigg boss Ugram Manju
Advertisment