/newsfirstlive-kannada/media/media_files/2025/11/05/suraj-singh-2025-11-05-09-57-10.jpg)
ಬಿಗ್​ಬಾಸ್​ ಮನೆಯಲ್ಲಿ ಸೂರಜ್ ಸಿಂಗ್ (Suraj Singh) ಅವರ ಮತ್ತೊಂದು ಮುಖ ಅನಾವರಣ ಆಗಿದೆ. ರಿಷಾ ಗೌಡ ಮೇಲೆ ಸೂರಜ್ ಸಿಂಗ್ ರೆಬಲ್ ಆಗಿದ್ದಾರೆ. ‘ಮಳ್ಳನ್ ಮಗನ ನಂಬಲ್ಲ ನಾನು’ ಎಂಬ ರಿಷಾ ಹೇಳಿಕೆ ಸೂರಜ್​​ರನ್ನ ಕೆರೆಳಿಸಿದೆ. ಇದೇ ವಿಚಾರಕ್ಕೆ ಬಿಗ್​ಬಾಸ್​ ಮನೆಯಲ್ಲಿ ದೊಡ್ಡ ಗಲಾಟೆ ಆಗಿದೆ.
ಸೋಮವಾರ ಬಿಗ್​ಬಾಸ್ ನೀಡಿದ್ದ ಚಟುವಟಿಕೆಯಲ್ಲಿ ಸೂರಜ್ ಸಿಂಗ್, ರಿಷಾ ಮುಖಕ್ಕೆ ಮಷಿ ಬಳಿದಿದ್ದರು. ಅದನ್ನೇ ಇಟ್ಟುಕೊಂಡ ರಿಷಾ, ಸೂರಜ್ ಸಿಂಗ್​ಗೆ ಮನೆಯಿಂದ ಬಂದಿದ್ದ ಪತ್ರವನ್ನು ಮಷಿನ್​​ಗೆ ಹಾಕಿ ಧ್ವಂಸ ಮಾಡಿದ್ದಾಳೆ. ಇದು ಸೂರಜ್​ಗೆ ತುಂಬಾನೇ ನೋವು ತಂದಿದೆ.
ಈ ಬೆಳವಣಿಗೆ ನಂತರ ಸೂರಜ್ ಹಾಗೂ ರಿಷಾ ಎದುರಾಗಿದ್ದಾರೆ. ನನ್ನನ್ನ ಮಳ್ಳ ಅಂತಾ ಕರೆಯೋಷ್ಟು ಏನು ಮಾಡಿದ್ದೆ ಅಂತಾ ಪ್ರಶ್ನೆ ಮಾಡ್ತಾರೆ. ನನಗೆ ನಿನ್ನ ನಂಬಲ ಆಗಲ್ಲ ಎಂದು ಬೇರೆ ಎಲ್ಲೋ ನೋಡುತ್ತ ರಿಷಾ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:BBK12 ತಮ್ಮದೇ ಗುಟ್ಟು ರಟ್ಟು ಮಾಡಿದ್ರಾ ಜಾಹ್ನವಿ?
ಅದಕ್ಕೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳುವಂತೆ ಸೂರಜ್ ತಾಕೀತು ಮಾಡಿದ್ದಾರೆ. ಅಷ್ಟಕ್ಕೆ ಕೋಪಿಸಿಕೊಳ್ಳುವ ರಿಷಾ, ಏನು ಇಲ್ಲಿ ನೋಡ್ಕುಂಡು ಹೇಳೋದು. ಎಲ್ಲಿ ಬೇಕಾದರೂ ನೋಡಿ ಮಾತಾಡ್ತೀನಿ ಎಂದು ಕೈ ತೋರಿಸಿ ಕಿರುಚಾಡಿದ್ದಾರೆ. ಆಗ ತಾಳ್ಮೆ ಕಳೆದುಕೊಂಡ ಸೂರಜ್ ಸಿಂಗ್, ಇದನ್ನೆಲ್ಲ ನಿನ್ನ ಮನೆಯಲ್ಲಿ ಇಟ್ಕೋ. ಮಾತಾಡು, ಬರೀ ಏಏಏಏ ಅಂದರೆ ಆಗಲ್ಲ ಎನ್ನುತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಬಿಗ್​ಬಾಸ್ ಮನೆಯಲ್ಲಿ ರೋಮ್ಯಾಂಟಿಕ್, ಲವ್ ವಿಚಾರದಲ್ಲಿ ಸೂರಜ್ ಸಿಂಗ್ ಹೆಚ್ಚು ಸುದ್ದಿ ಆಗುತ್ತಿದ್ದರು. ರಾಶಿಕಾ ಮತ್ತು ಸೂರಜ್ ನಡುವಿನ ಸಂಭಾಷಣೆ ಬಿಗ್​ಬಾಸ್ ವೀಕ್ಷಕರನ್ನು ಹೆಚ್ಚು ಗಮನ ಸೆಳೆಯುತ್ತಿತ್ತು. ಇದೀಗ ಸೂರಜ್ ಅವರ ಇನ್ನೊಂದು ಮುಖ ಅನಾವರಣ ಆಗಿದೆ. ಇದೇ ಮೊದಲ ಬಾರಿಗೆ ಎನ್ನುವಂತೆ ಜೋರಾಗಿ ಬಿಗ್​ಬಾಸ್ ಮನೆಯಲ್ಲಿ ಜಗಳವಾಡಿದ್ದಾರೆ.
ಇದನ್ನೂ ಓದಿ:ಖ್ಯಾತ ಸೀರಿಯಲ್​ ನಟಿಗೆ ‘ಆ’ ಫೋಟೋ ಕಳಿಸಿ ಲಾಕ್ ಆದ ‘ನವರಂಗಿ’ ನವೀನ..!
ಸೂರಜ್ಗೆ 'ಮಳ್ಳನ' ಕ್ಲಾರಿಟಿ ಸಿಗುತ್ತಾ?
— JioHotStar Kannada (@JHSKannada) November 5, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BBK12#ColorsKannada#jiohotstarkannadapic.twitter.com/HU1nkNlhdr
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us