Advertisment

BBK12 ತಮ್ಮದೇ ಗುಟ್ಟು ರಟ್ಟು ಮಾಡಿದ್ರಾ ಜಾಹ್ನವಿ?

ಬಿಗ್‌ಬಾಸ್‌ ಆರಂಭವಾದ ಮೂರು ವಾರಗಳಲ್ಲಿ ಜಾಹ್ನವಿ ಹಾಗೂ ಅಶ್ವಿನಿ ಗೌಡ ಜೋಡಿ ಅಂದ್ರೆ ಕಿಲಾಡಿ ಜೋಡಿ ಅನ್ನೋ ಥರ ಇತ್ತು. ಇದೀಗ ಆ ಜೋಡಿ ದೂರಾಗಿದ್ದು ಮತ್ತೆ ಒಂದಾಗ್ತಾರಾ? ಕಣಿ ಕೇಳೋಕೆ ಹೊರಟಿದ್ದಾರೆ ಜಾಹ್ನವಿ.

author-image
Ganesh Kerekuli
Jahnvi
Advertisment

ಅಶ್ವಿನಿ ಗೌಡ ಹಾಗೂ ಜಾಹ್ನವಿ ಪ್ರಾಣ ಸ್ಹೇಹಿತೆಯ ರೀತಿ ಇದ್ದವರು. ಎಲ್ಲೆ ಹೋದ್ರೂ ಏನೇ ಮಾಡಿದ್ರೂ ಜೊತೆಗೆ ಇರುತ್ತಿದ್ದ ಈ ಜೋಡಿ ಈಗ ದೂರಗಿದೆ. ಬಿಬಿ ಕಾಲೇಜ್‌ನ ಚರ್ಚಾ ಸ್ಪರ್ಧೆಯಲ್ಲಿ ವಿರೋಧಿಗಳಾಗಿ ಮಾತನಾಡಿದ್ದ ಇವರಿಬ್ಬರೂ ತಮ್ಮ ಸ್ಹೇಹದ ಬಗ್ಗೆ ಪ್ರಸ್ತಾಪಿಸಿದ್ದರು. ಅಶ್ವಿನಿಯಂತು ಜಾಹ್ನವಿ ಸ್ನೇಹವನ್ನು ಸ್ಟ್ರಾಟಜಿ ಎಂದು ಕರೆದಿದ್ದರು. ಅಲ್ಲಿಂದ ಈ ಜೋಡಿ ದೂರಾಗಿದ್ದು, ಈ ಜೋಡಿ ಒಂದಾಗುತ್ತಾ? ಅಥವಾ ಹೀಗೆ ಮುಂದುವರಿಯುತ್ತಾ ಅನ್ನುವ ಅನುಮಾನ ಬಿಗ್‌ಬಾಸ್‌ ಪ್ರೇಕ್ಷಕರಲ್ಲೂ ಮೂಡಿದೆ. 

Advertisment

ಇದನ್ನೂ ಓದಿ:ಹಳ್ಳಿ ಸೊಗಡಿನ ಗಾಸಿಪ್ ನಾರಿಯರಾದ ಜಾಹ್ನವಿ, ಕಾವ್ಯ.. ಅಯ್ಯಯ್ಯೋ, ಅಶ್ವಿನಿ ಬಗ್ಗೆ ಹೀಗಾ ಹೇಳೋದು?

Ashwini Gowda and Jahnvi

ಇದೇ ಅನುಮಾನ ಜಾಹ್ನವಿಯ ಮನದಲ್ಲೂ ಮೂಡಿದಂತಿದ್ದು, ಈ ಬಗ್ಗೆ ಕಣಿ ಕೇಳೋಕೆ ಮುಂದಾಗಿದ್ದಾರವರು. ಕಾವ್ಯ ಕಣಿ ಹೇಳುವವಳಾಗಿ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟಿದ್ದರೆ ಜಾಹ್ನವಿ ಇವರಲ್ಲಿ ಕಣಿ ಕೇಳೋಕೆ ಮುಂದಾಗಿದ್ದಾರೆ. ಬಿಗ್‌ಬಾಸ್‌ ಆರಂಭವಾಗಿದ್ದಾಗ ಅಂಟಿಕೊಂಡೇ ಇರುತ್ತಿದ್ದ ಜಾಹ್ನವಿ ಹಾಗೂ ಅಶ್ವಿನಿ ಜೋಡಿ ಮತ್ತೆ ಒಂದಾಗ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಮಾತ್ರವಲ್ಲ ಅವರು ರಾತ್ರಿ ಮೂರು ಗಂಟೆವರೆಗೂ ಮನೆಯವರೆಲ್ಲರ ಬಗ್ಗೆ ಚರ್ಚಿಸುತ್ತಿದ್ದರು ಎನ್ನುವ ವಿಚಾರವನ್ನೂ ತಿಳಿಸಿದ್ದಾರೆ. 

ಜಾಹ್ನವಿ ಪ್ರಶ್ನೆಗೆ ಕಣಿ ಹೇಳುವವಳಾಗಿ ಉತ್ತರಿಸಿರುವ ಕಾವ್ಯ ಅವರಿಬ್ಬರು ಒಂದಾಗೋಕೆ ಚಾನ್ಸೆ ಇಲ್ಲ. ಯಾವತ್ತೂ ದೂರ ದೂರನೇ ಇರ್ತಾರೆ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: ‘ಬೆಂಗಳೂರು ಕೌಶಲ್ಯ ಶೃಂಗಸಭೆ’ಗೆ ಚಾಲನೆ ನೀಡಿದ ಸಿದ್ದರಾಮಯ್ಯ.. ವಿಶೇಷತೆ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Ashwini Gowda Bigg Boss Ashwini Gowda janhvi bigg boss kannada Bigg Boss Kannada 12 Bigg boss
Advertisment
Advertisment
Advertisment