ಹಳ್ಳಿ ಸೊಗಡಿನ ಗಾಸಿಪ್ ನಾರಿಯರಾದ ಜಾಹ್ನವಿ, ಕಾವ್ಯ.. ಅಯ್ಯಯ್ಯೋ, ಅಶ್ವಿನಿ ಬಗ್ಗೆ ಹೀಗಾ ಹೇಳೋದು?

ಬಿಗ್​ಬಾಸ್​ ಮನೆಯಲ್ಲಿ ಈ ವಾರ ಯಾವುದೇ ಟಾಸ್ಕ್​​ಗಳು ನಡೆಯಲ್ಲ. ಎಲ್ಲಾ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಅವರೇ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಹೀಗಾಗಿ ಪ್ರತಿ ಸ್ಪರ್ಧಿಗಳಿಗೂ ಅಳಿವು, ಉಳಿವಿನ ಪ್ರಶ್ನೆಯಾಗಿದೆ.. ಈ ಮಧ್ಯೆ ಜಾಹ್ನವಿ ಮತ್ತು ಕಾವ್ಯ ಗೌಡ ವಿಶೇಷ ಕಾರಣಕ್ಕೆ ಗಮನ ಸೆಳೆಯುತ್ತಿದ್ದಾರೆ

author-image
Ganesh Kerekuli
Ashwini Gowda and Jahnvi
Advertisment

ಬಿಗ್​ಬಾಸ್​ ಮನೆಯಲ್ಲಿ ಈ ವಾರ ಯಾವುದೇ ಟಾಸ್ಕ್​​ಗಳು ನಡೆಯಲ್ಲ. ಎಲ್ಲಾ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಅವರೇ ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಹೀಗಾಗಿ ಪ್ರತಿ ಸ್ಪರ್ಧಿಗಳಿಗೂ ಅಳಿವು, ಉಳಿವಿನ ಪ್ರಶ್ನೆಯಾಗಿದೆ.. 

ಟಾಸ್ಕ್​ಗಳು ಇಲ್ಲದ ಕಾರಣ ದೊಡ್ಮನೆಯಲ್ಲಿ ಮುಂದಿನ ವಾರಕ್ಕೆ ಸೇವ್ ಆಗಬೇಕು ಅಂದರೆ ಸ್ಪರ್ಧಿಗಳು ತಮ್ಮನ್ನು ತಾವು ನಿರೂಪಿಸಿಕೊಳ್ಳಬೇಕಿದೆ. ಅದಕ್ಕಾಗಿ ಒಬ್ಬೊಬ್ಬರು ಒಂದೊಂದು ಹಾದಿಯನ್ನು ಕಂಡುಕೊಳ್ತಿದ್ದಾರೆ. ವಿಶೇಷ ಅಂದರೆ ಜಾಹ್ನವಿ ಮತ್ತು ಕಾವ್ಯ ಶೈವ ಹಳ್ಳಿ ಮನೆಯ ಗಾಸಿಪ್ ಕನ್ಯೆಯರಾಗಿ ಬದಲಾಗಿದ್ದಾರೆ.. 

ಇದನ್ನೂ ಓದಿ:BBK12; ಬಿಗ್​ಬಾಸ್​ನಲ್ಲಿ ಕ್ಯಾಪ್ಟನ್​ ಧನುಷ್‌ ಈ ವಿಚಾರದಲ್ಲಿ ತಪ್ಪು ಮಾಡಿದ್ರಾ..?

ಹಳ್ಳಿ ಶೈಲಿಯಲ್ಲಿ ಮಾರುವೇಷ ಮಾಡಿಕೊಂಡು ಬಿಗ್​ಬಾಸ್ ಮನೆಯಲ್ಲಿ ತಿರುಗಾಡುತ್ತಿರುವ ಇವರು, ಇತರ ಸ್ಪರ್ಧಿಗಳ ಬಗ್ಗೆ ಚರ್ಚೆ ನಡೆಸಿ, ತಮಾಷೆ ಮಾಡಿ ಮಜಾ ತಗೋತಿದ್ದಾರೆ. ಇಬ್ಬರ ಸಂಭಾಷಣೆ ಕೇಳಿ ಬೇರೆ ಸ್ಪರ್ಧಿಗಳು ನಕ್ಕು ನಲಿಯುತ್ತಿದ್ದಾರೆ..
 
ಗಾರ್ಡನ್ ಏರಿಯಾದಲ್ಲಿ ನಡೆದ ಮಾತುಕತೆಯೊಂದು ಹೀಗಿದೆ.. ಗಾರ್ಡನ್ ಏರಿಯಾದಲ್ಲಿ ಬಹುತೇಕ ಸ್ಪರ್ಧಿಗಳು ಕೂತಿದ್ದಾರೆ. ಅಶ್ವಿನಿ ಗೌಡ ಮಾತ್ರ ನಿಂತಿದ್ದಾರೆ. ಅಶ್ವಿನಿ ಗೌಡರನ್ನ ನೋಡಿ ಜಾಹ್ನವಿ ಕಾವ್ಯ ಜೊತೆ ಮಾತಿಗೆ ಇಳಿದಿದ್ದಾರೆ.. 

ಓ ಇವ್ರು.. ರಾಜಮಾತೆ ಅಂತಾ ಕರಿತಿದ್ರಲ್ವಾ.. ಜಾಹ್ನವಿ ಮತ್ತು ಇವ್ರು ಯಾವಾಗಲೂ ಕಚ್ಕೊಂಡೇ ಇದ್ರು. ಎಲ್ಲಿಗೆ ಹೋದ್ರು ಒಟ್ಟಿಗೆ ಹೋಗ್ತಿದ್ರು. ಬೆಳಗಿನ ಜಾವದ ವರೆಗೂ ಮಾತಾಡೋರು ಎಂದು ರಾಗ ಎಳೆದಿದ್ದಾರೆ. ಅದಕ್ಕೆ ಕಾವ್ಯ ಕೂಡ ಗೇಲಿ ಮಾಡಿದ್ದಾರೆ. ಇದನ್ನು ಕೇಳಿಸಿಕೊಂಡ ಅಶ್ವಿನಿ ನಿಂತಲ್ಲೇ ನಕ್ಕಿದ್ದಾರೆ.  ಕಾವ್ಯ ಮತ್ತು ಜಾಹ್ನವಿ ಸಂಪೂರ್ಣ ಸಂಭಾಷಣೆ ಇಲ್ಲಿದೆ.. 

ಇದನ್ನೂ ಓದಿ: ‘ಇನ್ಮೇಲೆ ನಾವಿಬ್ಬರು just friends..’ ಪ್ರೀತಿ, ಗೀತಿಗೆ ಫುಲ್​ಸ್ಟಾಪ್, ಗೇಮ್​ ಚೇಂಜ್ ಎಂದ ರಾಶಿಕಾ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Bigg Boss Kannada 12 BBK12 janhvi bigg boss kannada Bigg boss bigg boss kavya
Advertisment