/newsfirstlive-kannada/media/media_files/2025/11/04/rashika-shetty-and-suraj-sing-bigg-boss-2025-11-04-16-39-05.jpg)
ಬಿಗ್​ಬಾಸ್​ ಮನೆಯಲ್ಲಿ ರಾಶಿಕಾ ಶೆಟ್ಟಿ ಮತ್ತು ಸೂರಜ್ ಸಿಂಗ್ ಲವ್​ ಬರ್ಡ್ಸ್​ ಆಗಿ ಕಳೆದವಾರ ಕಾಣಿಸಿಕೊಂಡಿದ್ದರು. ಇಬ್ಬರ ಮಧ್ಯೆ ಐ ಲವ್​ ಯೂ ಎಂಬ ಪದ ಕೂಡ ಸುಳಿದಾಡಿ ಹೋಗಿತ್ತು. ಇದೇ ವಿಚಾರವನ್ನು ಕಿಚ್ಚ ಸುದೀಪ್ ಸೂಕ್ಷ್ಮವಾಗಿ ಇಬ್ಬರ ಗಮನಕ್ಕೆ ತಂದು ಬಿಗ್​ಬಾಸ್​ ಮನೆಗೆ ಏಕೆ ಬಂದಿದ್ದೀರಿ ಅನ್ನೋದನ್ನು ಅರ್ಥ ಮಾಡಿಸಿದ್ದರು.
ಭಾನುವಾರದ ಎಪಿಸೋಡ್ ಮುಗಿದ ಬೆನ್ನಲ್ಲೇ, ರಾಶಿಕಾ ಹಾಗೂ ಸೂರಜ್ ಲಿವಿಂಗ್ ಏರಿಯಾದಲ್ಲಿ ಕೂತು ಚರ್ಚೆ ನಡೆಸಿದ್ದಾರೆ. ಇನ್ಮೇಲೆ ನಾವಿಬ್ಬರು ‘ಜಸ್ಟ್​ ಫ್ರೆಂಡ್ಸ್’ ಎಂದು ಸೂರಜ್​ಗೆ ಹೇಳಿದ್ದಾರೆ. ಅದಕ್ಕೆ ಸೂರಜ್ ಹಂಡ್ರೆಂಡ್ ಪರ್ಸೆಂಟ್ ಎಂದು ತಲೆ ಅಲ್ಲಾಡಿಸಿದ್ದಾರೆ.
\
/filters:format(webp)/newsfirstlive-kannada/media/media_files/2025/10/27/suraj_rashika-2025-10-27-14-32-48.jpg)
ಮತ್ತೆ ಮಾತು ಮುಂದುವರಿಸಿರುವ ರಾಶಿಕಾ.. ಇದ್ಕಿಂತ ನಂದು ಏನೂ ಎಕ್ಸಪೆಕ್ಟೇಷನ್ ಇಲ್ಲ. ಸಿಂಪಲ್ ಅಷ್ಟೇ.. ಎಂದಿದ್ದಾರೆ. ಅದಕ್ಕೆ ಸೂರಜ್ ಆಯ್ತು ಎಂದಿದ್ದಾರೆ. ಅದಕ್ಕೆ ಮತ್ತೆ ಪ್ರತಿಕ್ರಿಯಿಸಿ.. ಬೇರೆ ಥರಾ ಕೈಕೈ ಹಿಡಿದುಕೊಂಡು ಓಡಾಡೋದು, ಕೂತ್ಕೊಳ್ಳೋದು ಅದೆಲ್ಲ ಇಲ್ಲ. ನಾವು ಮಾತಾಡ್ತಾ ಇದೀವಿ, ಒಟ್ಟಿಗೆ ಕೂತ್ಕೊಂಡು ಇದೀವಿ ಅಂದಮಾತ್ರಕ್ಕೆ ಅದನ್ನು ನಾನು ಅಕ್ಸೆಪ್ಟ್ ಮಾಡಲ್ಲ ಎಂದಿದ್ದಾರೆ. ಅದಕ್ಕೆ ಸೂರಜ್ ಕೂಡ ಒಪ್ಪಿಕೊಂಡಿದ್ದಾರೆ.
ಸೂರಜ್ ಬಂದ ಮೂರೇ ದಿನಕ್ಕೆ ರಾಶಿಕಾಗೆ ಲವ್ ಆಗಿದೆ ಎಂಬ ಮಾತು ಕೇಳಿಬಂದಿತ್ತು. ಕೆಲವರು ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಳ್ಳಲು ಇಬ್ಬರು ಲವ್ ನಾಟಕ ಆಡುತ್ತಿದ್ದಾರೆ ಎಂದಿದ್ದರು. ಇದೀಗ ಸೂರಜ್ ಹಾಗೂ ರಾಶಿಕಾ ಆಟದ ಹಾದಿಯನ್ನ ಬದಲಾಯಿಸಿದ್ದಾರೆ. ಮುಂದೆ ಬಿಗ್​ಬಾಸ್ ಮನೆಯಲ್ಲಿ ಹೇಗೆ ಇರುತ್ತಾರೆ ಎಂಬುವುದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ರಾಜಾರಾಣಿ ಖ್ಯಾತಿಯ ಹರ್ಷಿತಾ-ವಿನಯ್ ಬಾಳಲ್ಲಿ ಹೊಸ ಬೆಳಕು..!
​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us