Advertisment

‘ಬೆಂಗಳೂರು ಕೌಶಲ್ಯ ಶೃಂಗಸಭೆ’ಗೆ ಚಾಲನೆ ನೀಡಿದ ಸಿದ್ದರಾಮಯ್ಯ.. ವಿಶೇಷತೆ ಏನು..?

ರಾಜ್ಯದ ಕೌಶಲ್ಯ ಮತ್ತು ಮಾನವ ಸಂಪನ್ಮೂಲವನ್ನು ಜಾಗತಿಕ ಉದ್ಯೋಗಾರ್ಹತೆಗೆ ಸಿದ್ಧಗೊಳಿಸುವ ಗುರಿಯೊಂದಿಗೆ ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರು ಕೌಶಲ್ಯ ಶೃಂಗಸಭೆ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

author-image
Ganesh Kerekuli
Bengaluru Skill Summit (1)
Advertisment

‘ಬೆಂಗಳೂರು ಕೌಶಲ್ಯ ಶೃಂಗಸಭೆ-2025’ (Bengaluru Skill Summit 2025) ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ರಾಜ್ಯದ ಕೌಶಲ್ಯ ಮತ್ತು ಮಾನವ ಸಂಪನ್ಮೂಲವನ್ನು ಜಾಗತಿಕ ಉದ್ಯೋಗಾರ್ಹತೆಗೆ ಸಿದ್ಧಗೊಳಿಸುವ ಗುರಿಯೊಂದಿಗೆ ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರು ಕೌಶಲ್ಯ ಶೃಂಗಸಭೆ ನಡೆಯುತ್ತಿದೆ. 

Advertisment

ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಸಹಭಾಗಿತ್ವದಲ್ಲಿ ಶೃಂಗಸಭೆ ನಡೆಯುತ್ತಿದೆ.  ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಇಂದಿನಿಂದ 06 ರವರೆಗೆ ನಡೆಯಲಿರುವ ಶೃಂಗಸಭೆಯಲ್ಲಿ ವಿದೇಶಿ ಸಹಭಾಗಿತ್ವಗಳ ವೃದ್ಧಿ, ಭಾಷಾ ತರಬೇತಿ ಹಾಗೂ ಪ್ರಮಾಣಪತ್ರ ನೀಡುವ ವ್ಯವಸ್ಥೆಗಳಿಗೆ ಉತ್ತೇಜನ ನೀಡಲಿದೆ.

ಇದನ್ನೂ ಓದಿ:ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಜಾಹೀರಾತು ಶುಲ್ಕದಲ್ಲಿ ಭಾರಿ ಏರಿಕೆ : ವಿಶ್ವಕಪ್ ಗೆದ್ದ ಆಟಗಾರ್ತಿಯರಿಗೆ ಭಾರಿ ಡಿಮ್ಯಾಂಡ್‌

ಇವತ್ತಿನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ್, ಸಂಸದ ರಾಧಕೃಷ್ಣ ದೊಡ್ಡ ಮನಿ, ಎಂಎಲ್‌ಸಿ ಮಂಜುನಾಥ್ ಭಂಡಾರಿ ಭಾಗಿಯಾಗಿದ್ದಾರೆ. ಮಾರಿಷಸ್ ಗಣರಾಜ್ಯದ ಕಾರ್ಮಿಕ ಮತ್ತು ಕೈಗಾರಿಕಾ ಸಂಬಂಧಗಳ ಸಚಿವ ಮುಹಮ್ಮದ್ ರೆಝಾ ಖಾಸ್ಸಂ ಉತೀಮ್, ಜರ್ಮನಿ ರಾಯಭಾರಿ ಡಾ.ಫಿಲಿಪ್ ಅಕೆರ್ಮನ್, ಕೋರ್ಸೆರಾ ಸಂಸ್ಥೆಯ ಭಾರತ ಮತ್ತು ಏಷ್ಯಾ ಪೆಸಿಫಿಕ್ ವ್ಯವಸ್ಥಾಪಕ ನಿರ್ದೇಶಕ ಅಶುತೋಷ್ ಗುಪ್ತಾ ಸೇರಿ ಹಲವು ಗಣ್ಯರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದಾರೆ. 

Advertisment

ಇವತ್ತಿನ ಪ್ರಮುಖ ವಿಷಯ Workforce 2030: Scale, Systems, Synergy ಅಂದರೆ ಮಾನವಸಂಪನ್ಮೂಲ 2030: ವಿಸ್ತರಣೆ, ವ್ಯವಸ್ಥೆಗಳು, ಸಮನ್ವಯ. ಇದು ರಾಜ್ಯದ ಕೌಶಲ್ಯಾಭಿವೃದ್ಧಿ ದೃಷ್ಟಿಯಲ್ಲಿ ಮೂರು ಪ್ರಮುಖ ಅಂಶಗಳನ್ನು ಸೂಚಿಸುತ್ತದೆ: ವಿಸ್ತರಣೆ (ಹೆಚ್ಚಿನ ಯುವಕರಿಗೆ ಕೌಶಲ್ಯಾವಕಾಶಗಳನ್ನು ವಿಸ್ತರಿಸುವುದು), ವ್ಯವಸ್ಥೆಗಳು (ಗುಣಮಟ್ಟ ಮತ್ತು ಪ್ರಸ್ತುತತೆಯುಳ್ಳ ಕೌಶಲ್ಯ ತರಬೇತಿ ವ್ಯವಸ್ಥೆಗಳನ್ನು ಬಲಪಡಿಸುವುದು) ಹಾಗೂ ಸಮನ್ವಯ (ಸರ್ಕಾರ, ಕೈಗಾರಿಕೆ ಮತ್ತು ಶಿಕ್ಷಣ ವಲಯಗಳ ನಡುವಿನ ಸಮನ್ವಯವನ್ನು ವೃದ್ಧಿಸುವುದು).

3,000ಕ್ಕೂ ಹೆಚ್ಚು ಮಂದಿ ಭಾಗಿ

ಶೃಂಗಸಭೆಯಲ್ಲಿ 3,000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. (ನೀತಿರೂಪಕರು, ಕಾರ್ಪೊರೇಟ್ ನಾಯಕರು, ಶೈಕ್ಷಣಿಕ ತಜ್ಞರು, ನವೀನತಾವಾದಿಗಳು ಇತ್ಯಾದಿ), 100ಕ್ಕೂ ಹೆಚ್ಚು ಭಾಷಣಕಾರರು (ಜಾಗತಿಕ ನಾಯಕರು, ಶೈಕ್ಷಣಿಕ ಪ್ರವರ್ತಕರು) ಹಾಗೂ 50ಕ್ಕೂ ಹೆಚ್ಚು ಪ್ರದರ್ಶಕರು ಮತ್ತು ಸಹಭಾಗಿದಾರರು ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಪಾಲ್ಗೊಳ್ಳಲಿದ್ದಾರೆ.

Advertisment

ಇದನ್ನೂ ಓದಿ: ಹಳ್ಳಿ ಸೊಗಡಿನ ಗಾಸಿಪ್ ನಾರಿಯರಾದ ಜಾಹ್ನವಿ, ಕಾವ್ಯ.. ಅಯ್ಯಯ್ಯೋ, ಅಶ್ವಿನಿ ಬಗ್ಗೆ ಹೀಗಾ ಹೇಳೋದು?

ಪ್ರಮುಖ ಭಾಷಣಕಾರರಲ್ಲಿ ಸುಬ್ರತೋ ಬಾಗ್ಚಿ (ಮೈಂಡ್‌ಟ್ರೀ ಸಹ-ಸ್ಥಾಪಕರು ಹಾಗೂ ಮಾಜಿ ಅಧ್ಯಕ್ಷರು, ಒಡಿಶಾ ಕೌಶಲ್ಯಾಭಿವೃದ್ಧಿ ಪ್ರಾಧಿಕಾರ), ರವಿ ವೆಂಕಟೇಶನ್ (ಗ್ಲೋಬಲ್ ಎನರ್ಜಿ ಅಲಯನ್ಸ್ ಅಧ್ಯಕ್ಷರು ಹಾಗೂ ಮೈಕ್ರೋಸಾಫ್ಟ್ ಇಂಡಿಯಾ ಮಾಜಿ ಅಧ್ಯಕ್ಷರು), ಅತುಲ್ ಕುಮಾರ್ ತಿವಾರಿ (ಮಾಜಿ ಕಾರ್ಯದರ್ಶಿಗಳು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ಭಾರತ ಸರ್ಕಾರ), ಬಿ.ವಿ.ಆರ್. ಸುಬ್ರಹ್ಮಣ್ಯಂ (ನೀತಿ ಆಯೋಗದ ಸಿಇಒ), ನವೀನ್ ನಾರಾಯಣನ್ (ಬಯೋಕಾನ್ ಬಯಾಲಾಜಿಕ್ಸ್ ಗ್ಲೋಬಲ್ ಹೆಡ್  ಹೆಚ್‌ಆರ್), ಸರಸ್ವತಿ ರಾಮಚಂದ್ರ (ಲೈಟ್‌ಕಾಸ್ಟ್ ವ್ಯವಸ್ಥಾಪಕ ನಿರ್ದೇಶಕರು), ಜೀ ಸೂನ್ ಸಾಂಗ್ (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನಿರ್ದೇಶಕರು) ಹಾಗೂ ಮಿಷ್ ಈಸ್ಟ್‌ಮನ್ (ಆರ್‌ಎಂಐಟಿ ವಿಶ್ವವಿದ್ಯಾಲಯದ ಉಪ ಉಪಕುಲಪತಿ) ಸೇರಿದಂತೆ ದೇಶ-ವಿದೇಶದ ಗಣ್ಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ನವೆಂಬರ್ 05 ರಂದು Convergence of Education, Skills & Industry for a Trillion USD Economy by 2032 ಎಂಬ ವಿಷಯದ ಕುರಿತು ವಿಶೇಷ ಸಚಿವರ ಸಮಿತಿಯ ಚರ್ಚೆ ನಡೆಯಲಿದೆ. ಇದರಲ್ಲಿ ಡಾ. ಶರಣಪ್ರಕಾಶ್ ಆರ್. ಪಾಟೀಲ್, ಡಾ. ಎಂ. ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಹಾಗೂ ಡಾ. ಎಂ. ಸಿ. ಸುಧಾಕರ್ ಅವರು ಭಾಗವಹಿಸಲಿದ್ದಾರೆ. ನಿರ್ವಹಣೆಯನ್ನು ಮದನ್ ಪದಕಿ (ಹೆಡ್ ಹೆಲ್ಡ್ ಹೈ ಫೌಂಡೇಶನ್ ವ್ಯವಸ್ಥಾಪಕರು) ನಿರ್ವಹಿಸಲಿದ್ದಾರೆ. ಈ ಚರ್ಚೆಯು ಶಿಕ್ಷಣ, ಕೌಶಲ್ಯ ಮತ್ತು ಕೈಗಾರಿಕಾ ಕ್ಷೇತ್ರಗಳ ಸಮನ್ವಯದ ಮೂಲಕ ಭಾರತವನ್ನು 2032ರೊಳಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಮುನ್ನಡೆಸುವ ಮಾರ್ಗಗಳನ್ನು ಚರ್ಚಿಸಲಿದೆ.

Advertisment

ಇದನ್ನೂ ಓದಿ: ಬೋಸ್ಟನ್ ಗ್ಲೋಬಲ್ ಫೋರಂನಿಂದ ಶ್ರೀ ರವಿ ಶಂಕರರಿಗೆ 2025ರ ವರ್ಲ್ಡ್ ಲೀಡರ್ ಫಾರ್ ಪೀಸ್ ಆಂಡ್ ಸೆಕ್ಯೂರಿಟಿ ಪ್ರಶಸ್ತಿ ನೀಡಿ ಗೌರವ ಸಲ್ಲಿಕೆ

Bengaluru Skill Summit

ಶೃಂಗಸಭೆಯಲ್ಲಿ ವಿಮಾನೋದ್ಯಮ ಮತ್ತು ರಕ್ಷಣಾ ವಲಯ, ಕೃಷಿ ತಂತ್ರಜ್ಞಾನ, ವಾಹನೋದ್ಯಮ, ಆಸ್ತಿ ಮತ್ತು ನಿರ್ಮಾಣ, ಬ್ಯಾಂಕಿಂಗ್ ಮತ್ತು ಹಣಕಾಸು, ಶಿಕ್ಷಣ, ಆರೋಗ್ಯ ರಕ್ಷಣೆ, ಉತ್ಪಾದನೆ, ಮಾಧ್ಯಮ, ವ್ಯಾಪಾರ, ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನ, ದೂರಸಂಪರ್ಕ, ಆತಿಥ್ಯ ಮತ್ತು ಪ್ರವಾಸೋದ್ಯಮ ಸೇರಿದಂತೆ ಹಲವು ಕೈಗಾರಿಕಾ ವಲಯಗಳು ಭಾಗವಹಿಸಲಿವೆ.

ಭಾಗವಹಿಸುವ ಪ್ರತಿನಿಧಿಗಳಿಗೆ ಹೊಸ ಕೌಶಲ್ಯ ನವೀಕರಣಗಳನ್ನು ತಿಳಿದುಕೊಳ್ಳುವ ಅವಕಾಶ, ಸರ್ಕಾರ ಮತ್ತು ಕೈಗಾರಿಕಾ ನಾಯಕರೊಂದಿಗೆ ಸಂಪರ್ಕ, ಪ್ರತ್ಯಕ್ಷ ಪ್ರದರ್ಶನಗಳು ಮತ್ತು ನೀತಿ ಸಂವಾದಗಳಲ್ಲಿ ಪಾಲ್ಗೊಳ್ಳುವ ಅವಕಾಶ ಹಾಗೂ ಉದ್ಯೋಗ, ತರಬೇತಿ ಮತ್ತು ಸಹಭಾಗಿತ್ವದ ಹೊಸ ಅವಕಾಶಗಳನ್ನು ಅನ್ವೇಷಿಸುವ ಅವಕಾಶಗಳು ಸಿಗಲಿವೆ.

Advertisment

ಶೃಂಗಸಭೆಯ ಪ್ರಮುಖ ಆಕರ್ಷಣೆಗಳು ಸೇರಿದಂತೆ Skillathon 2025 (ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಷ್ಟ್ರಮಟ್ಟದ ನವೀನತಾ ಸ್ಪರ್ಧೆ), ಕೌಶಲ್ಯ ಕರ್ನಾಟಕ ಪ್ರಶಸ್ತಿ (ರಾಜ್ಯದ ಕೈಗಾರಿಕೆಗಳ ಸಾಧನೆಗಳನ್ನು ಗೌರವಿಸುವುದು), Skill Expo Pavilion (ಅತ್ಯಾಧುನಿಕ ತರಬೇತಿ ತಂತ್ರಜ್ಞಾನಗಳ ಪ್ರದರ್ಶನ) ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಕರ್ನಾಟಕ ವೈಭವ (ರಾಜ್ಯದ ಪರಂಪರೆ ಮತ್ತು ಸಂಸ್ಕೃತಿಯ ಪ್ರದರ್ಶನ).

ಶೃಂಗಸಭೆಯು ಮಾಸ್ಟರ್‌ಕ್ಲಾಸ್‌ಗಳು, ಆಳವಾದ ಚರ್ಚಾತ್ಮಕ ಅಧಿವೇಶನಗಳು, ನೀತಿ ಚರ್ಚಾ ವೇದಿಕೆಗಳು ಹಾಗೂ ಯುವ ವಲಯವನ್ನು ಒಳಗೊಂಡಿದ್ದು, ಚರ್ಚೆಗಳು ಕೌಶಲ್ಯಾಭಿವೃದ್ಧಿಯಲ್ಲಿ ಹೊಸ ಆಲೋಚನೆಗಳು, ಎಲ್ಲರಿಗೂ ಕೌಶಲ್ಯ (ಮಹಿಳೆಯರು, ಯುವಕರು, ಗಿಗ್‌ ಕಾರ್ಮಿಕರು), ಜಾಗತಿಕ ಕೌಶಲ್ಯ ಹಾಗೂ ಭವಿಷ್ಯಮುಖಿ ಕೌಶಲ್ಯ (ಎಐ, ಹಸಿರು ಉದ್ಯೋಗಗಳು, ಡಿಜಿಟಲ್ ಜಗತ್ತು) ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಿವೆ. ಭಾರತದ ಭವಿಷ್ಯದ ಮಾನವಸಂಪನ್ಮೂಲವನ್ನು ರೂಪಿಸುವ ಈ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನವಿದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ https://bengaluruskillsummit.com/ವೆಬ್‌ಸೈಟ್‌ ಭೇಟಿ ನೀಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH Bengaluru Skill Summit
Advertisment
Advertisment
Advertisment