/newsfirstlive-kannada/media/media_files/2025/11/08/kiccha-sudeep-2025-11-08-16-15-50.jpg)
ಬಿಗ್​ಬಾಸ್​ ಮನೆಯಲ್ಲಿ ಇವತ್ತು ಕಿಚ್ಚನ ಪಂಚಾಯ್ತಿ ನಡೆಯಲಿದೆ. ಸುದೀಪ್ ಅವರು ಸ್ಪರ್ಧಿಗಳ ಜೊತೆ ಯಾವೆಲ್ಲ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಕಳೆದ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಅವರೇ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದರು. ಇದರಿಂದ ಬಿಗ್​ಬಾಸ್​ ಮನೆಯಲ್ಲಿ ಯಾವುದೇ ಟಾಸ್ಕ್​ಗಳು ನಡೆಯಲಿಲ್ಲ. ಎಲ್ಲಾ ಸ್ಪರ್ಧಿಗಳಿಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಿಕ್ಕ ದೊಡ್ಡ ಅವಕಾಶವಾಗಿತ್ತು.
ಇದನ್ನೂ ಓದಿ: ಕಬ್ಬು ಬೆಳೆಗಾರರ ದಿಕ್ಕು ತಪ್ಪಿಸೋ ಕ್ರಮ: ಸಿಎಂಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಖಡಕ್ ಪತ್ರ
ಈ ವ್ಯಕ್ತಿತ್ವದ ಪರೀಕ್ಷೆಯಲ್ಲಿ ಯಾರು ಪಾಸ್ ಆಗಿದ್ದಾರೆ? ಯಾರಿಗೆ ಗೇಟ್‌ಪಾಸ್ ಸಿಗಲಿದೆ ಅನ್ನೋದು ತಿಳಿಯಲಿದೆ. ಇದರ ಮಧ್ಯೆ ಸುದೀಪ್ ಯಾವೆಲ್ಲ ವಿಚಾರವನ್ನು ಚರ್ಚೆ ಮಾಡ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.
ಸುದೀಪ್​ನ ಪಂಚಾಯ್ತಿಯಲ್ಲಿ ಮತ್ತೆ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ. ರಕ್ಷಿತಾ ಶೆಟ್ಟಿಯಿಂದ ನಮಗೆ ದೊಡ್ಡ ಅವಮಾನ ಆಗಿದೆ ಎಂದು ಅಶ್ವಿನಿ ಗೌಡ ಆರೋಪಿಸಿದ್ದಾರೆ. ಹಾಗೆಯೇ ಸೂರಜ್ ಸಿಂಗ್ ಮತ್ತು ರಿಷಾ ಗೌಡ ನಡುವಿನ ಗಲಾಟೆ ಬಗ್ಗೆ ಪ್ರಸ್ತಾಪವಾದರೂ ಅಚ್ಚರಿಯಿಲ್ಲ.
ಇನ್ನೊಂದು ವಿಚಾರ ಪ್ರಮುಖವಾಗಿರೋದು, ಗಿಲ್ಲಿಗೆ ರಿಷಾ ಗೌಡ ಹಲ್ಲೆ ಮಾಡಿರೋದು. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ರಿಷಾ ಗೌಡರನ್ನು ನಿಯಮಗಳ ಪ್ರಕಾರ, ಬಿಗ್​ಬಾಸ್​ ಮನೆಯಿಂದ ಹೊರ ಹೋಗಬೇಕು ಎಂಬ ಒತ್ತಾಯ ಜೋರಾಗಿದೆ. ಗಿಲ್ಲಿ ಮೇಲೆ ಹಲ್ಲೆ ವಿಚಾರವನ್ನು ಸುದೀಪ್ ಯಾವ ರೀತಿ ವಿಶ್ಲೇಷಣೆ ಮಾಡ್ತಾರೆ ಅನ್ನೋದು ಸದ್ಯದ ಕುತೂಹಲ. ಹಾಗೆಯೇ, ಧ್ರುವಂತ್, ಕಾವ್ಯ ಬಗ್ಗೆ ಆಡಿರುವ ಮಾತುಗಳನ್ನೂ ಸುದೀಪ್ ಚರ್ಚಿಸುವ ಸಾಧ್ಯತೆ ಇದೆ. ಹೀಗಾಗಿ, ಇವತ್ತಿನ ಕಿಚ್ಚನ ಎಪಿಸೋಡ್ ತುಂಬಾನೇ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಜೈಲಿನಲ್ಲಿ ವಿಕೃತ ಕಾಮಿ ಉಮೇಶ್ ರೆಡ್ಡಿ ಬಳಿ ಮೂರು ಪೋನ್ ಪತ್ತೆ! : ಉಮೇಶ್ ರೆಡ್ಡಿ ಪೋನ್ ನಲ್ಲಿ ಮಾತುಕತೆ ವಿಡಿಯೋ ಬಿಡುಗಡೆ!
ವ್ಯಕ್ತಿತ್ವದ ಪರೀಕ್ಷೆಯಲ್ಲಿ ಯಾರು ಪಾಸ್? ಯಾರಿಗೆ ಗೇಟ್‌ಪಾಸ್?
— Colors Kannada (@ColorsKannada) November 8, 2025
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/FF1cTgq5Gj
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us