Advertisment

ಬಸುರಿ ಬಯಕೆ ಈಡೇರಿಸಿಕೊಂಡ ಲಕ್ಷ್ಮೀ ಬಾರಮ್ಮ ಖ್ಯಾತಿಯ​ ನಟಿ ರಶ್ಮಿ ಪ್ರಭಾಕರ್.. ಏನದು..?

ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದ ನಟಿ ಎಂದರೆ ಅದು ನಟಿ ರಶ್ಮಿ ಪ್ರಭಾಕರ್. ಸದ್ಯ ನಟಿ ರಶ್ಮಿ ಪ್ರಭಾಕರ್ ದಂಪತಿ ಸಖತ್ ಖುಷಿಯಲ್ಲಿದ್ದಾರೆ.

author-image
NewsFirst Digital
Rashmi Prabhakar
Advertisment

ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದ ನಟಿ ಎಂದರೆ ಅದು ನಟಿ ರಶ್ಮಿ ಪ್ರಭಾಕರ್. ಸದ್ಯ ನಟಿ ರಶ್ಮಿ ಪ್ರಭಾಕರ್ ದಂಪತಿ ಸಖತ್ ಖುಷಿಯಲ್ಲಿದ್ದಾರೆ.

Advertisment

ಇದನ್ನೂ ಓದಿ: ಬಿಗ್​​ಬಾಸ್​ಗೆ ಎಂಟ್ರಿ ಕೊಡ್ತಿದ್ದಾರಾ ಪಹಲ್ಗಾಮ್ ಸಂತ್ರಸ್ತೆ ಹಿಮಾಂಶಿ ನರ್ವಾಲ್? ಇದರ ಅಸಲಿಯತ್ತೇನು?

Rashmi Prabhakar(3)

ಹೌದು, ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ರಶ್ಮಿ ಪ್ರಭಾಕರ್‌ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಮ್ಮ ಪುಟ್ಟ "ಕನಸು" ಎಂದು ಬರೆದುಕೊಂಡಿದ್ದ ನಟಿ ರಶ್ಮಿ ಪ್ರಭಾಕರ್‌ ಪತಿ ಜೊತೆಗೆ ಬೇಬಿ ಬಂಪ್‌ ಫೋಟೋಶೂಟ್‌ ಮೂಲಕ ಗುಡ್​ ನ್ಯೂಸ್​ ಕೊಟ್ಟಿದ್ದರು.

Rashmi Prabhakar(2)

ಇದೀಗ ‘‘ನಮ್ಮ ಪುಟ್ಟ ಆಶೀರ್ವಾದಕ್ಕಾಗಿ ಕಾಯುತ್ತಿದ್ದೇನೆ. ಮಡಿಸೀರೆ ಹಾಕಿಕೊಳ್ಳುವುದು ನನ್ನ ಕನಸ್ಸು (9 ಗಜ ಸೀರೆ)’’ ಅಂತ ಫೋಟೋಗಳ ಜೊತೆಗೆ ಹೀಗೆ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಬಸುರಿ ಬಯಕೆ ಈಡೇರಿಸಿಕೊಂಡಿದ್ದಾರೆ.

Advertisment

ಲಕ್ಷ್ಮೀ ಬಾರಮ್ಮ, ಜೀವನಚೈತ್ರ, ಶುಭವಿವಾಹ, ಮನಸೆಲ್ಲಾ ನೀನೇ ಸೇರಿದಂತೆ ಕನ್ನಡ ಹಾಗೂ ಪರಭಾಷೆಯ ಧಾರಾವಾಹಿಯಲ್ಲಿ ನಟಿಸಿರುವ ನಟಿ ರಶ್ಮಿ ಪ್ರಭಾಕರ್ 2022 ಏಪ್ರಿಲ್ 25ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ಅವರು ನಿಖಿಲ್ ಎಂಬುವವರ ಜೊತ ಸಪ್ತಪದಿ ತುಳಿದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashmi Prabhakar
Advertisment
Advertisment
Advertisment