/newsfirstlive-kannada/media/media_files/2025/08/21/rashmi-prabhakar5-2025-08-21-19-03-57.jpg)
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದ ನಟಿ ಎಂದರೆ ಅದು ನಟಿ ರಶ್ಮಿ ಪ್ರಭಾಕರ್. ಸದ್ಯ ನಟಿ ರಶ್ಮಿ ಪ್ರಭಾಕರ್ ದಂಪತಿ ಸಖತ್ ಖುಷಿಯಲ್ಲಿದ್ದಾರೆ.
/filters:format(webp)/newsfirstlive-kannada/media/media_files/2025/08/12/rashmi-prabhakar2-2025-08-12-14-30-32.jpg)
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ರಶ್ಮಿ ಪ್ರಭಾಕರ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಮ್ಮ ಪುಟ್ಟ "ಕನಸು" ಎಂದು ಬರೆದುಕೊಂಡಿದ್ದ ನಟಿ ರಶ್ಮಿ ಪ್ರಭಾಕರ್ ಪತಿ ಜೊತೆಗೆ ಬೇಬಿ ಬಂಪ್ ಫೋಟೋಶೂಟ್ ಮೂಲಕ ಗುಡ್​ ನ್ಯೂಸ್​ ಕೊಟ್ಟಿದ್ದರು.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ವಿವಾಹಿತೆ.. ಕಾರು ಸಮೇತ ಕೆರೆಗೆ ತಳ್ಳಿ ಜೀವ ತೆಗೆದನಾ ಕಿರಾತಕ..?
/filters:format(webp)/newsfirstlive-kannada/media/media_files/2025/08/21/rashmi-prabhakar7-2025-08-21-19-04-33.jpg)
ಈಗ ನಟಿ ರಶ್ಮಿ ಪ್ರಭಾಕರ್ ಅವರು ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದಾರೆ. ರಶ್ಮಿ ಪ್ರಭಾಕರ್ ಅವರ ಸೀಮಂತ ಕಾರ್ಯಕ್ರಮಕ್ಕೆ ನಿರೂಪಕಿ ಅನುಪಮಾ ಗೌಡ, ನಟಿ ಇಶಿತಾ ಅವರು ಭಾಗಿಯಾಗಿದ್ದರು.
/filters:format(webp)/newsfirstlive-kannada/media/media_files/2025/08/21/rashmi-prabhakar4-2025-08-21-19-03-57.jpg)
ನಟಿ ರಶ್ಮಿ ಪ್ರಭಾಕರ್ ಅವರ ಸೀಮಂತ ಫೋಟೋವನ್ನು ಅನುಪಮಾ ಗೌಡ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ರಶ್ಮಿ ಪ್ರಭಾಕರ್ ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
/filters:format(webp)/newsfirstlive-kannada/media/media_files/2025/08/21/rashmi-prabhakar6-2025-08-21-19-04-33.jpg)
ಲಕ್ಷ್ಮೀ ಬಾರಮ್ಮ, ಜೀವನಚೈತ್ರ, ಶುಭವಿವಾಹ, ಮನಸೆಲ್ಲಾ ನೀನೇ ಸೇರಿದಂತೆ ಕನ್ನಡ ಹಾಗೂ ಪರಭಾಷೆಯ ಧಾರಾವಾಹಿಯಲ್ಲಿ ನಟಿಸಿರುವ ನಟಿ ರಶ್ಮಿ ಪ್ರಭಾಕರ್ 2022 ಏಪ್ರಿಲ್ 25ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ಅವರು ನಿಖಿಲ್ ಎಂಬುವವರ ಜೊತ ಸಪ್ತಪದಿ ತುಳಿದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us