/newsfirstlive-kannada/media/media_files/2025/11/14/ashe-2025-11-14-11-10-06.jpg)
ಆಸೆ ಸೀರಿಯಲ್​ನಲ್ಲಿ ಮಜಾ ಕೊಡೋ ಕ್ಯಾರೆಕ್ಟರ್​ ಸಕ್ರೇಬೈಲ್​ ಶಾಂತಿ. ಸೂರ್ಯ ಸಕ್ಕರೇ ಕಾಂಬಿನೇಷನ್​ ಅಂತೂ ಸಖತ್​ ಕಿಕ್​ ಕೊಡುತ್ತೆ. ಆದರೆ ಇತ್ತೀಚಿನ ಸಂಚಿಕೆಯಲ್ಲಿ ವೀಕ್ಷಕರು ಕಣ್ಣೀರಿಡುವಂತೆ ಮಾಡಿದೆ ಈ ಕೊಂಬೋ.
ಸಕ್ಕರೇ.. ಸಕ್ಕರೇ ಅಂತ ಬಾಯಿತುಂಬಾ ಸೂರ್ಯ ಕರೆಯೆದನ್ನ ಕೇಳೋದೇ ಚಂದ. ಬಾಲ್ಯದಲ್ಲಿ ನಡೆದ ಕಹಿ ಘಟನೆಯೊಂದಕ್ಕೆ ಮುನಿಸಿಕೊಂಡ ತಾಯಿಗೆ ಸೂರ್ಯ ಕಂಡ್ರೇ ಆಗ್ತಿರಿಲಿಲ್ಲ. ಹಾಗಂತ ಇವ್ರ ನಡುವೆ ಪ್ರೀತಿ ಇರಿಲಿಲ್ಲ ಅಂತಲ್ಲ, ತೋರಿಸಿಕೊಳ್ತಿರಲಿಲ್ಲ.
ಇದನ್ನೂ ಓದಿ: Bihar Election Result LIVE.. ಬಿಹಾರದಲ್ಲಿ ಮತ್ತೆ ನೀತೀಶ್ ಕುಮಾರ್ ಸಿಎಂ ಆಗೋದು ಪಕ್ಕಾ ಎಂದ ಫಲಿತಾಂಶ!
ಸದ್ಯ ಆಸೆ ಧಾರಾವಾಹಿಯಲ್ಲಿ ಎಲ್ಲಾ ಉಲ್ಟಾಪಲ್ಟವಾಗಿದೆ. ಸಕ್ಕರೆ ತಲೆಮೇಲೆ ಬಿಂದಿಗೆ ಬಿದ್ದು ಹಳೆ ನೆನಪು ಮಾಯಾ ಆಗಿದೆ. ಅಪ್ಪಟ ಗೃಹಣಿ, ಮಮತೆ ತುಂಬಿದ ತಾಯಿಯಾಗಿ ನಡೆದುಕೊಳ್ತಿದ್ದಾಳೆ ಶಾಂತಿ. ಸೂರ್ಯಗೆ ಅಮ್ಮನ ಮಮತೆ ಸಿಕ್ಕಿದ್ರೇ ಮನೋಜನ ಅಹಂಕಾರಕ್ಕೆ ತಕ್ಕ ಶಿಕ್ಷೆ ಸಿಕ್ಕಿದೆ.
ಈ ಕ್ಷಣಕ್ಕೆ ವೀಕ್ಷಕರು ಕಾಯ್ತಿದ್ರು. ಇದು ಕನಸು ಅಂತ ತೋರಿಸದೇ ಇರಲಿ. ನಮಗೆ ನಿರಾಸೆ ಮಾಡ್ಬೇಡಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಅಭಿಪ್ರಾಯ ತಿಳಿಸುತ್ತಿದ್ದಾರೆ. ಹೀಗಾಗಿನೇ ಸ್ವಲ್ಪ ದಿನದ ಮಟ್ಟಿಗೆ ಸೂರ್ಯ-ಶಾಂತಿ ನಡುವಿನ ತಿಕ್ಕಾಟ ದೂರ ಮಾಡಿ, ಅಮ್ಮ ಮಗನ ಬಾಂಧವ್ಯವನ್ನ ಎತ್ತಿಹಿಡಿದಿದ್ದಾರೆ ನಿರ್ದೇಶಕರು.
ಒಟ್ನಲ್ಲಿ ಶಾಂತಿ ಪಾತ್ರದಲ್ಲಿ ಸಿಕ್ಕಾಪಟ್ಟೆ ವೇರಿಯಶನ್ಸ್​ ಇದ್ದು, ನಟಿ ಸ್ನೇಹಾ ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ. ಸೂರ್ಯನಾಗಿ ನಿನಾದ್​ ಪ್ರತಿ ಮನೆಯ ಮಗನಾಗಿದ್ದಾರೆ. ಹೊಸ ಸಂಚಿಕೆಯ ಅಮ್ಮ-ಮಗನ ಪ್ರೊಮೋ ವೀಕ್ಷಕರ ಆಸೆ ತಣಿಸಿದೆ.
ಇದನ್ನೂ ಓದಿ:ಪತಿಯನ್ನೇ ಗೃಹಬಂಧನದಲ್ಲಿಟ್ಟ ಪತ್ನಿ.. ಗದಗದಲ್ಲಿ ಅಮಾನವೀಯ ಕೃತ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us