/newsfirstlive-kannada/media/media_files/2026/02/17/pavitra-bhandhana-2026-02-17-16-58-02.jpg)
ಪವಿತ್ರಾ ಬಂಧನದ ಪವಿತ್ರಾಳಿಗೆ ಕೊನೆಗೂ ಅಮ್ಮಾಸ್ ಕಾಫಿ ಸಂಸ್ಥೆಯಲ್ಲಿ ಜಾಬ್​ ಸಿಕ್ಕಿದೆ. ಆದ್ರೆ ಆಫೀಸ್​ನಲ್ಲಿ ಪವಿತ್ರಾ ನೂರಾರು ಕಷ್ಟ ಅನುಭವಿಸೋ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಆಫೀಸ್​ಗೆ ತಿಲಕ್ ಬಂದಿದ್ದಾನೆ. ತಿಲಕ್​ನನ್ನ ಕಂಡ ಪವಿತ್ರಾ ಹಾಗೂ ದೇವ್​ ಇಬ್ಬರು ಹಾಯ್​ ಅಂತಾ ಹೇಳ್ತಾರೆ.. ಮುಂದೆ ತಿಲಕ್​ ಹೇಗೆ ಇಬ್ಬರ ಕೈಯಿಂದ ಎಸ್ಕೇಪ್​ ಆಗ್ತಾನೆ... ಆಫಿಸ್​ನಲ್ಲಿ ಪವಿತ್ರಾ ಪಡ್ತಿರೋ ಕಷ್ಟ ತಿಲಕ್​ಗೆ ಗೊತ್ತಾಗುತ್ತಾ?
ಅಪ್ಪನಿಗೆ ಸಹಾಯ ಮಾಡಬೇಕು, ಕಾಯಿಲೆ ಬಿದ್ದ ತಮ್ಮನನ್ನ ಉಳಿಸಿಕೊಳ್ಳಬೇಕೆಂದು ಪವಿತ್ರಾ ಧೈರ್ಯ ಮಾಡಿ, ಜಾಬ್​ ಹುಡುಕುತ್ತಾ ಬೆಂಗಳೂರಿಗೆ ಬರ್ತಾಳೆ. ಅದ್ರಲ್ಲೂ ಕಾಕತಾಳೀಯ ಎಂಬಂತೆ, ತನ್ನ ಜೊತೆ ಗಲಾಟೆ ಮಾಡಿದ್ದ ರಾಧಿಕಾಳ ಕಂಪನಿಗೆ ಬರ್ತಾಳೆ. ಆದ್ರೆ ಇನ್ನೇನು ಕೆಲಸ ಸಿಕ್ಕಿ ತನ್ನ ಕನಸು ಈಡೇರಿಸಿಕೊಳ್ತೀನಿ ಅಂತಾ ಕನಸು ಕಾಣ್ತಿದ್ದ ಪವಿತ್ರಾಳಿಗೆ ನಮ್ರತಾ ಶಾಕ್​ ಕೊಟ್ತಾಳೆ. ಯಾರೆಲ್ಲಾ ಹಳ್ಳಿಯಿಂದ ಬಂದಿದ್ದೀರಾ ಎಲ್ಲಾ ಹೊರಗೆ ಹೋಗಿ ಎಲ್ಲರು ಹೊರಗೆ ಹೋಗಿ ಅಂತ ಹೇಳ್ತಾಳೆ.
ಆದ್ರೆ ಛಲ ಬಿಡದ ಪವಿತ್ರಾ ಧರಣಿ ಕುರ್ತಾಳೆ.. ನಂತರ ರಾಧಿಕಾ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಗೆದ್ದು ಅಮ್ಮಾಸ್ ಕಾಫಿ ಸಂಸ್ಥೆಯಲ್ಲಿ ಜಾಬ್​ ಪಡೆದುಕೊಳ್ತಾಳೆ...ಜಾಬ್​ ಏನೋ ಆಯ್ತು ಇನ್ಮುಂದೆ ತನ್ನ ತಂದೆ, ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬಹುದು ಅಂತಾ ಅಂದುಕೊಂಡಿರ್ತಾಳೆ ಪವಿತ್ರಾ .. ಆದ್ರೆ ಇಲ್ಲೆ ಇರೋದು ಟ್ವೀಸ್ಟ್​...
ಆಫೀಸ್​ಗೆ ಬಂದ ಪವಿತ್ರಾಳಿಗೆ ನಮ್ರತಾ ಕೆಲಸ ಮಾಡಲು ಜಾಗವನ್ನು ಕೊಡದೇ ಏನು ಮಾಡ್ಬೇಕು ಅಂತಾ ಹೇಳದೇ ಆಟವಾಡಿಸ್ತಾಳೆ.. ಸಾಲದಕ್ಕೆ ಆಫೀಸ್​ನಲ್ಲಿರುವವರು ಕೂಡ ಪವಿತ್ರಾಳೊಂದಿಗೆ ಮಾತನಾಡವುದಿಲ್ಲ.. ಹೆಜ್ಜೆ ಹೆಜ್ಜೆಗೂ ಕಷ್ಟ ಪಡುವ ಪರಿಸ್ಥಿತಿ ಪವಿತ್ರಾಳಿಗೆ ಎದುರಾಗುತ್ತೆ.. ಆದ್ರೆ ಎಲ್ಲಿ ಹೋದ್ರು ಖುಷಿ ಹುಡುಕಿಕೊಳ್ಳೋ ಕಲೆ ಪವಿತ್ರಾಗೆ ಇದೆ.. ಹೀಗಾಗಿ ಪವಿತ್ರಾ ಎಲ್ಲವನ್ನ ಸಹಿಸಿಕೊಂಡು ಮುಂದೆ ಸಾಗ್ತಾಳೆ..
ಇದನ್ನೂ ಓದಿ: ರಾಜ್ಯ ಪೌರಸೇವಾ ನೌಕರರ ಸಂಘಕ್ಕೆ ನೂತನ ಸಾರಥಿ: ಶೈಲಾ KD ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆ!
/filters:format(webp)/newsfirstlive-kannada/media/media_files/2026/02/09/pavitra-bandhana-1-2026-02-09-16-56-36.jpg)
ಈ ನಡುವೆ ಆಫೀಸ್​ಗೆ ತಿಲಕ್​ ಬರ್ತಾನೆ. ತಿಲಕ್​ನನ್ನ ಕಂಡ ಪವಿತ್ರಾ ಹಾಗೂ ಅಣ್ಣ ದೇವ್​​ ಇಬ್ಬರು ಹಾಯ್​ ಮಾಡ್ತಾರೆ.. ತಿಲಕ್​ ಯಾರ ಬಳಿ ಹೋದ್ರು ಸತ್ಯ ತಿಳಿದುಬಿಡುತ್ತೆ ಏನೂ ಮಾಡೋದು ಎಂಬ ಧರ್ಮಸಂಕಟದಲ್ಲಿ ಸಿಲುಕ್ತಾನೆ.. ಬಳಿಕ ಅಲ್ಲಿಂದಲೇ ದೇವ್​ಗೆ ಫೋನ್​ ಮಾಡಿ ನನಗೆ ಪಾಸ್ತಾ ತಿನ್​ ಬೇಕು ಹೋಗೋಣ ಅಂತಾ ಹಠ ಮಾಡ್ತಾನೆ.. ದೇವ್​ ಅಂತು ತಮ್ಮ ತಿಲಕ್​ನ ಮಾತು ಮೀರಲ್ಲ. ಅವನ ಆಸೆಯಂತೆ ಸರಿ ಎಂದು ಬರ್ತಾನೆ.. ದೇವ್​ನನ್ನ ಕಂಡು ಪವಿತ್ರಾ ಒಳಹೋಗ್ತಾಳೆ.
ಈ ಮಧ್ಯೆ ತಿಲಕ್​ ದೇವ್​ಗಾಗಿ ಹುಡುಗಿಯನ್ನ ಹುಡುಕಲು ಶುರುಮಾಡಿದ್ದಾನೆ. ಈ ವಿಷಯವನ್ನ ದೇವ್​ ಬಳಿಯೂ ಹೇಳ್ತಾನೆ. ಆದ್ರೆ ದೇವ್​ ಅಮ್ಮಾ ನಮ್ರತಾ ಜೊತೆ ಮದುವೆ ಫೀಕ್ಸ್​ ಮಾಡಿದ್ದಾರೆ ಮಾತು ಮೀರಲು ಸಾಧ್ಯವಿಲ್ಲ ಅಂತಾ ಹೇಳ್ತಾನೆ. ಹಾಗಾದ್ರೆ ನನಗೆ ಕೊಟ್ಟಿರೋ ಮಾತು ಅಂತಾ ತಿಲಕ್​ ಪ್ರಶ್ನಿಸ್ತಾನೆ. ಅದಕ್ಕೆ ದೇವ್​ ಅದಕ್ಕಾಗಿ ಎಂಗೆಜ್​ಮೆಂಟ್​ ಪೋಸ್ಟ್‌ಫೋನ್​ ಮಾಡಿಸಿರೋದು. ಈ ಸಂಕಷ್ಠಕ್ಕೆ ನನ್ನನ್ನ ಸಿಲುಕಿಸಬೇಡ ಅಂತ ಹೇಳ್ತಾನೆ. ತಿಲಕ್​ ಸತ್ಯವನ್ನ ಹೇಳಲಾಗದೇ ಮತ್ತೇ ಧರ್ಮಸಂಕಟದಲ್ಲಿ ಸಿಲುಕ್ತಾನೆ. ಇತ್ತ ನಮೃತ ತಾಯಿ ದೇವ್​ ಮನೆಗೆ ಬಂದು ನನ್ನ ಮಗಳಿಗೆ ಮೋಸ ಮಾಡ್ತಿದ್ದೀರಾ ಅಂತಾ ಗಲಾಟೆ ಮಾಡಿದ್ದಾಳೆ..
ಮುಂದೆ ತಿಲಕ್ ಪ್ರೀತಿಸ್ತಿರೋದು ಪವಿತ್ರಾನ ಅಂತ ದೇವ್‌ಗೆ ಗೊತ್ತಾದ್ರೆ ಏನಾಗ್ಬೋದು? ಆಫೀಸ್​ನಲ್ಲಿ ಪವಿತ್ರಾ ಪಡ್ತಿರೋ ಕಷ್ಟ ತಿಲಕ್​ಗೆ ಗೊತ್ತಾದ್ರೆ ಏನಾಗುತ್ತೆ? ಅಲ್ಲದೇ, ತಿಲಕ್ ಆಗರ್ಭ ಶ್ರೀಮಂತರ ಮಗ ಅನ್ನೋ ಸತ್ಯ ಪವಿತ್ರಾಗೆ ತಿಳಿಯುತ್ತಾ ಅನ್ನೋದೆಲ್ಲಾ ಸಾಕಷ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us