ಇಶಾನ್​​​​​​​​​​​​​​​​ ಬಗ್ಗೆ ನಿಮಗೆ ತಿಳಿದಿಲ್ಲ ಈ ವಿಷಯಗಳು.. ಕ್ರಿಕೆಟ್​ ಮೇಲಿನ ವ್ಯಾಮೋಹದಿಂದ ಶಾಲೆ ಬಿಟ್ಟಿದ್ರು..!

T20 ವಿಶ್ವಕಪ್​ ಅಖಾಡದಲ್ಲಿ ಇಶಾನ್​ ಕಿಶನ್​ ಅಬ್ಬರ ಜೋರಾಗಿದೆ. ಕಮ್​ಬ್ಯಾಕ್ ಬಳಿಕ ಮತ್ತಷ್ಟು ರಗಢ್​ ಬ್ಯಾಟಿಂಗ್​ ನಡೆಸ್ತಿರೋ ಕಿಶನ್, ಡ್ರಾಪ್​ ಆದಾದ ಅನುಭವಿಸಿದ ಯಾತನೆಯನ್ನ ಬ್ಯಾಟಿಂಗ್​ನಿಂದಲೇ ಮರೀತಿದ್ದಾರೆ. ಈ ಇಶಾನ್ ಕಿಶನ್ ಒಬ್ಬ ಅಪ್ರತಿಮ ಹೋರಾಟಗಾರ. ಆನ್​ ಫೀಲ್ಡ್​ ಮಾತ್ರವಲ್ಲ..

author-image
Ganesh Kerekuli
ಟಿ-20 ಪಂದ್ಯ! 4.3 ಓವರ್​ನಲ್ಲಿ 77 ರನ್​ ಚಚ್ಚಿ ಪಂದ್ಯ ಗೆಲ್ಲಿಸಿಕೊಟ್ಟ ಇಶಾನ್.. ಮುಂಬೈ ಇಂಡಿಯನ್ಸ್​ಗೆ ತಪರಾಕಿ..!
Advertisment
  • ದೊಡ್ಡ ಕ್ರಿಕೆಟರ್ ಆಗಿದ್ದು, ಅಣ್ಣನ ತ್ಯಾಗದಿಂದ
  • ಟಾಯ್ಲೆಟ್​ ತೊಳೆಯುತ್ತಿದ್ದ, ಉಪವಾಸ ಮಲಗ್ತಿದ್ದ
  • ಹಠ, ಆತ್ಮವಿಶ್ವಾಸವೇ ಇಶಾನ್​ ಸಕ್ಸಸ್​ ಸೀಕ್ರೆಟ್​​

ಇಶಾನ್​ ಪ್ರಣವ್​ ಕುಮಾರ್ ಪಾಂಡೆ ಕಿಶನ್.! T20 ವಿಶ್ವಕಪ್​ನಲ್ಲಿ ಕಿಶನ್​ ಹೆಸರು ಸಖತ್​ ಸದ್ದು ಮಾಡ್ತಿದೆ. ಆದ್ರೆ, ಕೆಲ ತಿಂಗಳ ಹಿಂದೆ ಈತ ಟೀಮ್​ ಇಂಡಿಯಾಗೆ ಬೇಡವಾಗಿದ್ದ ಕ್ರಿಕೆಟಿಗ. 2023ರಲ್ಲಿ ಟೀಮ್​ ಇಂಡಿಯಾದಿಂದ ಡ್ರಾಪ್ ಆದ ಬಳಿಕ ಈತ ಅನುಭವಿಸಿದ್ದು ನರಕ. ಸತತ 2 ವರ್ಷಗಳ ಕಾಲ ವನವಾಸ ಅನುಭವಿಸಿದ ಕಿಶನ್​, ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಹೋರಾಟ ನಡೆಸಿ ಮತ್ತೆ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಈಗ ಮಾತ್ರವಲ್ಲ.. ಜೀವನದ ಪ್ರತಿ ಹಂತದಲ್ಲೂ ಕಿಶನ್​ ಹೋರಾಟ ನಡೆಸಿದ್ದಾರೆ. ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗಿ ಬಂದ ಕಿಶನ್ ಗೆಲುವಿನ ಕುದುರೆ ಹತ್ತಲು, ಸಣ್ಣ ವಯಸ್ಸಿನಲ್ಲೇ ಪಟ್ಟ ಕಷ್ಟಗಳು ಎಂಥವರನ್ನೂ ಅಯ್ಯೋ ಅನಿಸುತ್ತದೆ.!

ಇದನ್ನೂ ಓದಿ:ಕಿಶನ್​​ ಯಶಸ್ಸಿನ ಹಿಂದೆ ಅದಿತಿ ಹುಂಡಿಯಾ.. ಕೋಟಿ, ಕೋಟಿ ಓಡತಿ, ಯಾರು ಈ ಚೆಲುವೆ..?

Ishan kishan

ಕ್ರಿಕೆಟ್​ ಮೇಲಿನ ವ್ಯಾಮೋಹ, ಶಾಲೆಯನ್ನೇ ಬಿಟ್ಟ ಇಶಾನ್​​

ಕಿಶನ್​ಗೆ ಚಿಕ್ಕಂದಿನಿಂದಲೂ ಕ್ರಿಕೆಟ್​ ಮೇಲೆ ವ್ಯಾಮೋಹ. ಓದಿಗಿಂತ ಹೆಚ್ಚು ಕ್ರಿಕೆಟ್​ ಮೇಲೆಯೇ ಗಮನ ಹರಿಸ್ತಿದ್ರಂತೆ. DPS ಪಬ್ಲಿಕ್ ಸ್ಕೂಲ್‌ನಲ್ಲಿ 7ನೇ ತರಗತಿ ಓದುತ್ತಿದ್ದಾಗ, ಟೀಚರ್ ಕ್ರಿಕೆಟ್​ ಬೇಕಾ, ಸ್ಟಡೀಸ್ ಬೇಕಾ ಚೂಸ್ ಮಾಡು ಅಂದಿದ್ರಂತೆ. ಆಗಲೇ ಎಜುಕೇಶನ್​ಗಿಂತ ಕ್ರಿಕೆಟ್ಟೇ ಮುಖ್ಯ. ಶಾಲೆಯನ್ನಾದ್ರೂ ಬಿಡ್ತೇನೆ, ಕ್ರಿಕೆಟ್​ ಬಿಡಲ್ಲ ಅಂದಿದ್ರಂತೆ ಇಶಾನ್.! ಬಳಿಕ ಕ್ಲಾಸ್​ಗಿಂತ ಮೈದಾನದಲ್ಲೇ ಹೆಚ್ಚು ಟೈಮ್​ ಸ್ಪೆಂಡ್​ ಮಾಡ್ತಿದ್ರಂತೆ. ಹೀಗಾಗಿ ಶಿಕ್ಷಕರು ಶಾಲೆಯಿಂದಲೇ ಹೊರಹಾಕಿದ್ರಂತೆ.

ಇಶಾನ್​ ಯಶಸ್ಸಿನ ಹಿಂದೆ, ಅಣ್ಣನ ತ್ಯಾಗ ದೊಡ್ಡದಿದೆ. ಇಶಾನ್​ ಸಹೋದರ ರಾಜ್​ ಕಿಶನ್​​ ಸಹ ಟ್ಯಾಲೆಂಡೆಟ್​ ಕ್ರಿಕೆಟರ್​ ಆಗಿದ್ರಂತೆ. ಸ್ಕೂಲ್ ಲೆವೆಲ್​ ಕ್ರಿಕೆಟ್​ನಲ್ಲಿ ರಾಜ್​ ಕಿಶನ್​​ ಓಪನರ್​ ಆಗಿದ್ರಿಂದ ಹೆಚ್ಚು ಚಾನ್ಸ್ ಸಿಗ್ತಿತ್ತು. ರಾಜ್ಯ ಮಟ್ಟದಲ್ಲಿ ಕ್ರಿಕೆಟ್ ಆಡೋ ಅವಕಾಶವೂ ಸಿಕ್ಕಿತ್ತು. ಇಶಾನ್​ ಬೆಂಚ್​ಗೆ ಸೀಮಿತವಾಗಿದ್ರು. ಕೆಲ ಕಾಲದ ಬಳಿಕ ಇದನ್ನ ಅರಿತ ರಾಜ್, ಇಶಾನ್​ಗಾಗಿ ಕ್ರಿಕೆಟ್​ನಿಂದಲೇ ಹಿಂದೆ ಸರಿಯಲು ನಿರ್ಧರಿಸಿದ್ರು. ಅಣ್ಣನ ತ್ಯಾಗದ ಫಲ ಇಂದು ಇಶಾನ್ ಸ್ಟಾರ್​ ಕ್ರಿಕೆಟರ್ ಆಗಿದ್ದಾರೆ. 

ಕ್ರಿಕೆಟಿಗನಾಗೋ ದೊಡ್ಡ ಕನಸು ಹೊತ್ತು, ಬಿಹಾರ ಬಿಟ್ಟು ರಾಂಚಿಗೆ ಬಂದ ಇಶಾನ್​ ನಾಲ್ವರು ಹಿರಿಯರೊಂದಿಗೆ ರೂಮ್​ ಶೇರ್​ ಮಾಡಿಕೊಂಡಿದ್ದ. ಇಶಾನ್​ಗೆ ಅಡುಗೆ ಮಾಡಲು ಬರದಿದ್ದ ಕಾರಣಕ್ಕೆ ರೂಮ್​​ಮೇಟ್ಸ್ ದಿನವೂ​ ಟಾಯ್ಲೆಟ್​, ಬಾತ್​ರೂಮ್​, ಮನೆ ಕ್ಲೀನಿಂಗ್​ಗೆ ಬಳಸಿಕೊಳ್ಳುತ್ತಿದ್ರಂತೆ. ರೂಮ್​​ ಮೇಟ್ಸ್​ ಕ್ರಿಕೆಟ್​ ಆಡಲೆಂದು ರಾತ್ರಿ ಸಮಯದಲ್ಲಿ ಹೋಗುತ್ತಿದ್ದರು. ಆಗ ಅದೆಷ್ಟೋ ಸಲ ಇಶಾನ್ ಕಿಶನ್ ಉಪವಾಸ ಮಲಗಿದ ಉದಾಹರಣೆಯೂ ಇವೆಯಂತೆ.

ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ ಡಿನ್ನರ್ ಮುಗಿಸಿ ಮನೆಗೆ ಬಂದು ಪತ್ನಿಯನ್ನ ಬರ್ಬರವಾಗಿ ಮುಗಿಸಿದ; ಆ ರಾತ್ರಿ ನಡೆದಿದ್ದೇನು..?

Ishan kishan (2)

ರೂಮ್​ಮೇಟ್ಸ್​ ಕಾಟ ತಾಳಲಾರದೇ ಚಿಕ್ಕ ಬಾಡಿಗೆ ಮನೆಗೆ ಕೆಲವೇ ದಿನಗಳಲ್ಲಿ ಕಿಶನ್​ ಶಿಫ್ಟ್​ ಆದ್ರು.  1 ಸಾವಿರ ರೂಪಾಯಿ ಬಾಡಿಗೆಯ ಚಿಕ್ಕ ಕೋಣೆಯದು. ದೊಡ್ಡ ಕನಸು ಕಂಡಿದ್ದ ಕಿಶನ್​, ಡೇ ಆ್ಯಂಡ್ ನೈಟ್​ ಪ್ರಾಕ್ಟೀಸ್​ ಮಾಡ್ತಿದ್ರಂತೆ. ಕಠಿಣ ಪರಿಶ್ರಮದದ ಪ್ರತಿಫಲವಾಗಿ ಅಂಡರ್​​​-16 ತಂಡಕ್ಕೆ ಆಯ್ಕೆಯಾದ್ರು. ನಂತರ ಇಶಾನ್​ ಭಾರತದ ಅಂಡರ್-19 ಕ್ಯಾಪ್ಟನ್​ ಕೂಡ ಆದ್ರು. ಬಳಿಕ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿ, ರಣಜಿ ಟೂರ್ನಿಗಳಲ್ಲೂ ತಮ್ಮ ಸಾಮರ್ಥ್ಯ ಪ್ರೂವ್​ ಮಾಡಿದ್ರು.

ಆ್ಯಡಂ ಗಿಲ್‌ಕ್ರಿಸ್ಟ್, ರಾಹುಲ್ ದ್ರಾವಿಡ್ ಮತ್ತು MS ಧೋನಿಗೆ ಇಶಾನ್​ ದೊಡ್ಡ ಅಭಿಮಾನಿ. ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಆಗೋದಕ್ಕೆ ಧೋನಿಯೇ ಸ್ಫೂರ್ತಿ. ಇದೇ ಕಾರಣಕ್ಕೆ ಚಿಕ್ಕ ಕೆಲಸ ಮಾಡಿದ್ರೂ ತುಂಬಾ ಆತ್ಮ ವಿಶ್ವಾಸದಿಂದ ಹಠ ಹಿಡಿದು ಮಾಡ್ತಿದ್ರಂತೆ. ಆ ಹಠ, ಆತ್ಮವಿಶ್ವಾಸವೇ ಇಂದು ತನ್ನ ಮನಸ್ಸಿನಲ್ಲಿ ಬಿತ್ತಿದ್ದ ಬೀಜವನ್ನ ಹೆಮ್ಮರವಾಗಿಸಿದೆ. ವಿಶ್ವಕಪ್ ಕ್ರಿಕೆಟ್​ ಲೋಕದಲ್ಲಿ ವಂಡರ್ ಸೃಷ್ಠಿಸುವಂತೆ ಮಾಡಿದೆ. 

ಕಲ್ಲು ಮುಳ್ಳಿನ ಹಾದಿ ಸವೆಸಿ ಬಂದು ಇಂಟರ್​ನ್ಯಾಷನಲ್ ಕ್ರಿಕೆಟ್​ನಲ್ಲಿ ಶೈನ್ ಆಗಿದ್ದ ಕಿಶನ್, ಬಿಸಿಸಿಐ ಬಾಸ್​ಗಳ ಕೆಂಗಣ್ಣಿಗೆ ಗುರಿಯಾಗಿ ಮತ್ತೆ ಸೈಡ್​ಲೈನ್ ಆಗಿದ್ರು. 2 ವರ್ಷ ವನವಾಸ ಅನುಭವಿಸಿ, ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಹೋರಾಟ ನಡೆಸಿದ ಮತ್ತೆ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಫೈಯರ್​ ಬ್ರ್ಯಾಂಡ್​ ಕ್ರಿಕೆಟರ್​ ಆರ್ಭಟ ಹೀಗೆ ಮುಂದೆವರೆಯಲಿ. ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಡಲಿ ಅನ್ನೋದೆ ಎಲ್ಲರ ಆಶಯ. 

ಇದನ್ನೂ ಓದಿ:SSLC-PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ರಿಸಲ್ಟ್ ಡೇಟ್ ಕೂಡ ಫಿಕ್ಸ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Ishan Kishan
Advertisment