/newsfirstlive-kannada/media/media_files/2026/02/17/ishan-kishan-8-2026-02-17-14-26-31.jpg)
ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಓರ್ವ ಮಹಿಳೆ ಇರ್ತಾಳೆ. ಇದು ಎಲ್ಲರ ಜೀವನದಲ್ಲಿ ಎಷ್ಟು ನಿಜವಾಗಿದೆಯೋ ಗೊತ್ತಿಲ್ಲ. ಆದರೆ ಟೀಮ್ ಇಂಡಿಯಾದ ಸೆನ್ಷೆಷನಲ್ ಸ್ಟಾರ್ ಇಶಾನ್ ಕಿಶನ್ ಸಕ್ಸಸ್​ಗೆ ಆ ಲೇಡಿನೆ ಕಾರಣ. ಜಾರ್ಖಂಡ್​ ಪುತ್ತರ್​​​​ನ ​​​ ಏಳು-ಬೀಳಿನಲ್ಲಿ ಈಕೆ ಸದಾ ಬೆನ್ನಿಗೆ ನಿಂತಿದ್ದಾಳೆ. ಅಷ್ಟಕ್ಕೂ ಆಕೆ ಯಾರಪ್ಪಾ ಅಂತೀರಾ?
ಬದ್ಧವೈರಿ ಪಾಕಿಸ್ತಾನ ವಿರುದ್ಧ ವೀರಾವೇಶ ತೋರಿದ ಬಳಿಕ ಇಶಾನ್​ ಕಿಶನ್​ ಸಖತ್​ ಟ್ರೆಂಡ್​ನಲ್ಲಿದ್ದಾರೆ. ಪ್ರತಿಷ್ಟೆಯ ಪಂದ್ಯದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಇಶಾನ್​ ಕಿಶನ್​, ಪಾಕ್​ ಪಡೆಗೆ ಪವರ್​​ಫುಲ್​ ಪಂಚ್​ ನೀಡಿದ್ರು. ಕಿಶನ್ ಅಬ್ಬರದ ಆಟಕ್ಕೆ ಪಾಕಿಸ್ತಾನದ ಬೌಲಿಂಗ್ ಅಟ್ಯಾಕ್​ ಪಂಚರ್​ ಆಗೋಯ್ತು.
ಇದನ್ನೂ ಓದಿ:ಹಾರ್ದಿಕ್ ಕ್ರೇಜಿ ಪರ್ಸನ್ ಯಾಕೆ..? ಪಾಂಡ್ಯರ ಶ್ರೀಮಂತಿಗೆ ಹೇಗಿದೆ..?
/filters:format(webp)/newsfirstlive-kannada/media/media_files/2026/02/17/ishan-kishan-7-2026-02-17-14-26-46.jpg)
ಬಿಗ್ ಸ್ಟೇಜ್​​​, ಬಿಗ್ ಗೇಮ್​​​ನಲ್ಲಿ ಕಿಶನ್​​​ ನಡೆಸಿದ ಕೆಚ್ಚದೆಯ ಹೋರಾಟಕ್ಕೆ ನಿಜಕ್ಕೂ ಸಲಾಂ ಹೇಳಲೇಬೇಕು. ಯಾಕಂದ್ರೆ ಉಳಿದೆಲ್ಲಾ ಬ್ಯಾಟರ್​​ಗಳು ಪರದಾಟ ನಡೆಸಿದ ಟ್ರಿಕ್ಕಿ ಪಿಚ್​ನಲ್ಲಿ ಪಾಕ್​​ನ ಬೌಲಿಂಗ್ ಅಟ್ಯಾಕ್​ನ ಛಿದ್ರಗೊಳಿಸಿ 77 ರನ್​ಗಳಿಸಿದ್ದು ಸುಲಭದ ಟಾಸ್ಕ್​ ಅಗಿರಲಿಲ್ಲ್ಲ. ಪ್ರೆಶರ್​​ ಗೇಮ್​ನಲ್ಲಿ ಫಿಯರ್​ಲೆಸ್​ ಬ್ಯಾಟಿಂಗ್ ನಡೆಸೋಕೆ ಡಬಲ್ ಗುಂಡಿಗೆ ಬೇಕು.
ಕಮ್​ಬ್ಯಾಕ್​ ಬಳಿಕ ಇಶಾನ್​ ಕಿಶನ್ ಆರ್ಭಟ
ಪಾಕ್ ವಿರುದ್ಧದ ಪಂದ್ಯ ಮಾತ್ರವಲ್ಲ. ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಮಾಡಿದ ಬಳಿಕ ಇಶಾನ್ ಕಿಶನ್ ಅಬ್ಬರ ಜೋರಾಗಿದೆ. ನ್ಯೂಜಿಲೆಂಡ್​ ಸರಣಿಯಲ್ಲಿ ಸೆಂಚುರಿ ಚಚ್ಚಿದ ಇಶಾನ್ ಕಿಶನ್​, ಸೌತ್​ ಆಫ್ರಿಕಾ ಎದುರಿನ ವಾರ್ಮ್​ಅಪ್​ ಗೇಮ್​ನಲ್ಲೂ ಆರ್ಭಟಿಸಿದ್ರು. ಇದೀಗ ವಿಶ್ವಕಪ್​ ಅಖಾಡದಲ್ಲೂ ಆರ್ಭಟಿಸ್ತಿದ್ದಾರೆ. ನಮೀಬಿಯಾ ಎದುರು 61 ರನ್​ಗಳಿಸಿ ಮಿಂಚಿದ್ದ ಇಶಾನ್, ಪಾಕ್ ವಿರುದ್ಧವೂ ಸಾಲಿಡ್​ ಅರ್ಧಶತಕ ಚಚ್ಚಿದ್ದಾರೆ.
ಏಳು-ಬೀಳಿನಲ್ಲಿ ಜೊತೆಗೆ ನಿಂತ ಅದಿತಿ ಹುಂಡಿಯಾ
ಕಿಶನ್​ನ ಇಂದು ಎಲ್ಲರೂ ಹೆಗಲ ಮೇಲೆ ಹೊತ್ತು ಮೆರೆಸ್ತಿದ್ದಾರೆ. ಪ್ರಶಂಸೆಗಳ ಮಹಾಪೂರವೇ ನಡೀತಿದೆ. ಸೋಷಿಯಲ್​ ಮೀಡಿಯಾಗಳಲ್ಲಂತೂ ಕಿಶನ್​ನ ಹೊಗಳಿ ಅಟ್ಟಕ್ಕೇರಿಸಲಾಗ್ತಿದೆ. ಇದೇ ಕಿಶನ್​ 2023ರಲ್ಲಿ ಟೀಮ್ ಇಂಡಿಯಾ ಏಕಾಏಕಿ ಡ್ರಾಪ್ ಆದಾಗ ಯಾರು ಇರಲಿಲ್ಲ. ಬಿಸಿಸಿಐ ಬಾಸ್​ಗಳ ಕೆಂಗಣ್ಣಿಗೆ ಗುರಿಯಾಗಿ ಸೆಂಟ್ರಲ್ ಕಾಂಟ್ರ್ಯಾಕ್ಟ್​ ಕಳೆದುಕೊಂಡು ಕರಿಯರ್​ ಅಂತ್ಯವಾಯ್ತು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದು ಇಶಾನ್ ಕಿಶನ್​ ಜೊತೆ ನಿಂತಿದ್ದು, ಅದಿತಿ ಹುಂಡಿಯಾ.
ಇದನ್ನೂ ಓದಿ: ಹಾರ್ದಿಕ್ ಕ್ರೇಜಿ ಪರ್ಸನ್ ಯಾಕೆ..? ಪಾಂಡ್ಯರ ಶ್ರೀಮಂತಿಗೆ ಹೇಗಿದೆ..?
/filters:format(webp)/newsfirstlive-kannada/media/media_files/2026/02/17/ishan-kishan-9-2026-02-17-14-26-58.jpg)
ಇಶಾನ್ ಕಿಶನ್​ ಆಟಕ್ಕೆ ಅದಿತಿ ಫುಲ್​ ಖುಷ್
ಪಾಕ್ ವಿರುದ್ಧ ಕಿಶನ್ ಕಟ್ಟಿದ ಈ ಬೆಂಕಿ ಇನ್ನಿಂಗ್ಸ್ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ. ಕಿಶನ್ ಆಟವನ್ನ ಗೆಳತಿ ಅದಿತಿ ಹುಂಡಿಯಾ ಕೂಡ ಮೆಚ್ಚಿಕೊಂಡಿದ್ದಾರೆ. ಇಶಾನ್ ಕಿಶನ್​ ಫೋಟೋವನ್ನ ಲವ್ ಇಮೋಜಿಯೊಂದಿಗೆ ಪೋಸ್ಟ್​ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಕಿಶನ್​ ಇಂದು ಏನೇ ಆಗಿದ್ರೂ ಅದರ ರಿಯಲ್ ಕ್ರೆಡಿಟ್​​​ ಅದಿತಿ ಹುಂಡಿಯಾಗೆ ಸೇರಬೇಕು. ಕಿಶನ್​ 2 ವರ್ಷಗಳ ಕಾಲ ಟೀಮ್ ಇಂಡಿಯಾದಿಂದ ಹೊರಬಿದ್ದು, ಮಾನಸಿಕವಾಗಿ ಕುಗ್ಗಿ ಹೋಗಿದ್ದಾಗ ಕಿಶನ್​ಗೆ ಜೊತೆ ನಿಂತು ನೆರವಾಗಿದ್ದು ಅದಿತಿ ಹುಂಡಿಯಾ.
ಚೆಂದುಳ್ಳಿ ಚೆಲುವೆ.. ಕೋಟಿ, ಕೋಟಿ ಓಡತಿ
ಜೈಪುರ ಮೂಲದ ಅದಿತಿ ಹುಂಡಿಯಾ ಬೇಸಿಕಲಿ ಮಾಡೆಲ್​​​​. 2017ರ ಮಿಸ್ ಇಂಡಿಯಾದ ಫೈನಲಿಸ್ಟ್​​​. 2018ರಲ್ಲಿ ಮಿಸ್​ ದಿವಾ ಗೆದ್ದ ಸುಂದರಿ. ಮಾಡಲೆಂಗ್​ ಕ್ಷೇತ್ರದಲ್ಲಿ ಹೆಸರು ಮಾಡಿರೋ ಅದಿತಿ ಹುಂಡಿಯಾ, ತನ್ನದೇ ಆದ ಬ್ರ್ಯಾಂಡ್​ ಕೂಡ ಸ್ವಂತ ಫ್ಯಾಷನ್​ ಬ್ರ್ಯಾಂಡ್​ ಕೂಡ ಹೊಂದಿದ್ದಾರೆ. ಜೊತೆಗೆ ಹಲವಾರು ಕಂಪನಿಗಳ ಬ್ರ್ಯಾಂಡ್​ ಅಂಬಾಸಿಡರ್​ ಕೂಡ ಆಗಿದ್ದಾರೆ. ಈಕೆಯ ನೆಟ್​ವರ್ತ್​​ 20 ರಿಂದ 25 ಕೋಟಿ.
2019 ರಿಂದ ಕಿಶನ್ ಹಾಗೂ ಅದಿತಿ ಡೇಟಿಂಗ್​ ನಡೆಸ್ತಿದ್ದಾರೆ ಎಂಬ ಗಾಸಿಪ್​ ಓಡಾಡ್ತಿದೆ. ಅನೇಕ ಬಾರಿ ಈ ಲವ್ ಬರ್ಡ್ಸ್ ಸಾರ್ವಜನಿಕವಾಗಿ ಜೊತೆಯಾಗಿ ಕಾಣಿಸಿಕೊಂಡಿದ್ದೂ ಇದೆ. ಅದಿತಿ, ಕಿಶನ್​ ಇಬ್ಬರೂ ಈ ಬಗ್ಗೆ ಎಲ್ಲೂ ಈವರೆಗೂ ಮಾತನಾಡಿಲ್ಲ. ಇತ್ತೀಚೆಗಷ್ಟೇ ಕಿಶನ್​ ಅಜ್ಜಿ ಇವರಿಬ್ಬರ ರಿಲೇಷನ್​ಶಿಪ್​ ಬಗ್ಗೆ ಓಪನ್​ ಮಾತನಾಡಿ ಲವ್​ ಕನ್​ಫರ್ಮ್ ಮಾಡಿದ್ದಾರೆ.
ಇಷ್ಟು ದಿನ ಈ ಇಬ್ಬರ ಪ್ರೇಮ ಕಹಾನಿ ಬರೀ ಗಾಸಿಪ್ ಎಂದು ಹೇಳಲಾಗ್ತಿತ್ತು. ಕಿಶನ್​ ಅಜ್ಜಿ ಇವರಿಬ್ಬರ ಲವ್​​ಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಲವ್​, ಮದುವೆ ಕತೆ ಏನೇ ಇರಲಿ.. ತಂಡದಿಂದ ಡ್ರಾಪ್ ಆದ ಬಳಿಕ ಕುಗ್ಗಿ ಹೋಗಿದ್ದ ಇಶಾನ್ ಕಿಶನ್​ಗೆ ನೆರವಾಗಿ ಮತ್ತೆ ಕಮ್​ಬ್ಯಾಕ್ ಮಾಡುವಂತೆ ಮಾಡಿದ ಅದಿತಿ ಹುಂಡಿಯಾಗೆ ಕ್ರಿಕೆಟ್​ ಫ್ಯಾನ್ಸ್​ ಕಡೆಯಿಂದ ಒಂದು ಸಲಾಂ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us