ಹಾರ್ದಿಕ್ ಕ್ರೇಜಿ ಪರ್ಸನ್ ಯಾಕೆ..? ಪಾಂಡ್ಯರ ಶ್ರೀಮಂತಿಗೆ ಹೇಗಿದೆ..?

ಟೀಮ್ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಎಲ್ಲರಿಗಿಂತ ಡಿಫರೆಂಟ್. ಆತನ ನಡೆ, ನುಡಿ, ಸ್ಟೈಲ್ ಎಲ್ಲವೂ ವಿಭಿನ್ನ, ವಿಚಿತ್ರ. ಆನ್​ಫೀಲ್ಡ್ ಮತ್ತು ಆಫ್ ದ ಫೀಲ್ಡ್​ನಲ್ಲಿ ಬೋಲ್ಡ್ ಪರ್ಸನಾಲಿಟಿ ಹೊಂದಿರುವ ಪಾಂಡ್ಯ ಪಕ್ಕಾ ಫ್ಯಾಷನಬಲ್. ಪಾಂಡ್ಯ ಕ್ರೇಜಿ ಮ್ಯಾನ್ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್.

author-image
Ganesh Kerekuli
Hardik Pandya new look (3)
Advertisment
  • ಕೋಟಿ ಕೋಟಿ ವಾಚ್ ಕಲೆಕ್ಷನ್ಸ್ ಒಡೆಯ ಪಾಂಡ್ಯ..!
  • 50 ಕೋಟಿಯ 10 ಲಕ್ಷುರಿ ಕಾರ್ ಪಾಂಡ್ಯ ಬಳಿ ಇವೆ..!
  • ಮುಂಬೈ, ಬರೋಡಾದಲ್ಲಿ 50 ಕೋಟಿ ಮನೆ ಇದೆ..!

ಟೀಮ್ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಎಲ್ಲರಿಗಿಂತ ಡಿಫರೆಂಟ್. ಆತನ ನಡೆ, ನುಡಿ, ಸ್ಟೈಲ್ ಎಲ್ಲವೂ ವಿಭಿನ್ನ, ವಿಚಿತ್ರ. ಆನ್​ಫೀಲ್ಡ್ ಮತ್ತು ಆಫ್ ದ ಫೀಲ್ಡ್​ನಲ್ಲಿ ಬೋಲ್ಡ್ ಪರ್ಸನಾಲಿಟಿ ಹೊಂದಿರುವ ಪಾಂಡ್ಯ ಪಕ್ಕಾ ಫ್ಯಾಷನಬಲ್. ಹಾರ್ದಿಕ್ ಪಾಂಡ್ಯ ಕ್ರೇಜಿ ಮ್ಯಾನ್ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಮತ್ತೊಂದಿಲ್ಲ. 

ಫಿಯರ್​ಲೆಸ್, ಸ್ಟೈಲಿಶ್, ಕಾನ್ಫಿಡೆಂಟ್, ರಿಸ್ಕ್ ಟೇಕರ್ ಜೊತೆಗೆ ಅದ್ದೂರಿ ಜೀವನ ನಡೆಸೋ ಹಾರ್ದಿಕ್ ಪಾಂಡ್ಯ, ಟೀಮ್ ಇಂಡಿಯಾದ ಕ್ರೇಜಿ ಕ್ರಿಕೆಟರ್. ಪಾಂಡ್ಯ ಏನೇ ಮಾಡಿದ್ರೂ ಅದು ಸ್ವ್ಯಾಗ್ ಆಗುತ್ತೆ. ಹೀಗೆ ಡಿಫರೆಂಟ್ ಆಗಿ ಗುರುತಿಸಿಕೊಂಡಿರುವ ಪಾಂಡ್ಯ, ನಿಜ ಜೀವನದಲ್ಲೂ ಕ್ರೇಝಿ ಪರ್ಸನ್. ಆಲ್​ರೌಂಡರ್ ಪಾಂಡ್ಯರನ್ನ ಕ್ರೇಜಿ ಅನ್ನೋದನ್ನ ಕಾರಣ ಕೂಡ ಇದೆ.

ಇದನ್ನೂ ಓದಿ: ಐಟಿ ಕಂಪನಿ ವಿಪ್ರೋದಲ್ಲಿ ಮಾರ್ಚ್ 1 ರಿಂದ ವೇತನ ಹೆಚ್ಚಳ: ಉದ್ಯೋಗಿಗಳಿಗೆ ಎಐ ಸವಾಲು ಮಧ್ಯೆ ವೇತನ ಹೆಚ್ಚಳ!

Hardik Pandya (15)

100 ಕೋಟಿ ಬೆಲೆ ಬಾಳವ ವಾಚ್ ಕಲೆಕ್ಷನ್ಸ್..!

ಹಾರ್ದಿಕ್ ಬಳಿ ರೇರ್ ಌಂಡ್ ಹೈ ಎಂಡ್ ಟೈಮ್ ಪೀಸಸ್ ಇವೆ. ರಿಚರ್ಡ್ ಮಿಲ್ಲೆ RM 56-03 ಬ್ಲೂ ಸಫೈರ್ ಪಾಂಡ್ಯ ಬಳಿ ಇದೆ. ಇದು ಸುಮಾರು 45 ರಿಂದ 55 ಕೋಟಿ ಬೆಲೆ ಬಾಳುತ್ತದೆ. ಇದಲ್ಲದೆ 50 ಕೋಟಿ ರೂಪಾಯಿಗಿಂತೆ ಹೆಚ್ಚು ಕಾಸ್ಟ್ಲಿ ವಾಚ್​ಗಳನ್ನೂ ಪಾಂಡ್ಯ ಖರೀದಿಸಿದ್ದಾರೆ.

50 ಕೋಟಿ ಬೆಲೆಬಾಳುವ 10 ಲಕ್ಷುರಿ ಕಾರು ಪಾಂಡ್ಯ ಗ್ಯಾರೆಜ್​ನಲ್ಲಿವೆ

ಟೀಮ್ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಬಳಿ ಕೋಟಿ ಕೋಟಿ ಬೆಲೆಬಾಳುವ ಲಕ್ಷುರಿ ಕಾರುಗಳು ಇವೆ. ಒಂದೊಂದು ಕಾರಿನ ಬೆಲೆ ಕೇಳಿದ್ರೆ ತಲೆ ಗಿರ್ ಅಂತ ತಿರುಗುತ್ತದೆ. ಹೀಗೆ ಪಾಂಡ್ಯ ಬಳಿ, ಕೋಟಿಗಿಂತ ಹೆಚ್ಚು ಬೆಲೆಬಾಳುವ ಸುಮಾರು 10ಕ್ಕಿಂತ ಹೆಚ್ಚು ಕಾರುಗಳಿವೆ. 

Hardik Pandya new look (1)

ಬರೋಡಾದಲ್ಲಿ ಪಾಂಡ್ಯಗೆ ಸೇರಿದ 50 ಕೋಟಿ ಮನೆ ಇದೆ

ವಾಚ್, ಕಾರುಗಳಷ್ಟೇ ಅಲ್ಲ. ಆಲ್​ರೌಂಡರ್ ಬಳಿ ಕೋಟಿ ಕೋಟಿ ಬೆಲೆಬಾಳುವ ಮನೆಗಳಿವೆ. ಮುಂಬೈನ ಖಾರ್ ವೆಸ್ಟ್​ನಲ್ಲಿ ಪಾಂಡ್ಯರ ಲಕ್ಷುರಿ ಅಪಾರ್ಟ್​ಮೆಂಟ್ ಇದೆ. ಅದರ ಬೆಲೆ 30 ಕೋಟಿಗಿಂತ ಹೆಚ್ಚು. ಇನ್ನು, ಬರೋಡಾದಲ್ಲಿ 6 ಸಾವಿರ ಸ್ಕೇರ್​​​​​​ ಇರೋ ಪೆಂಟ್ ಹೌಸ್ ಇದೆ. ಇದರ ಬೆಲೆ 4 ಕೋಟಿಗಿಂತ ಹೆಚ್ಚು. 

ಇದನ್ನೂ ಓದಿ: ನಟಿ ರಶ್ಮಿಕಾ ಮಂದಣ್ಣ-ವಿಜಯದೇವರಕೊಂಡ ವಿವಾಹಕ್ಕೆ ಪೋನ್‌ ಗೆ ನಿರ್ಬಂಧ- ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ

Hardik pandya watch

40 ಕೋಟಿ ಬೆಲೆಯ ಪ್ರೈವೇಟ್ ಜೆಟ್ ಹಾರ್ದಿಕ್ ಪಾಂಡ್ಯ ಬಳಿ ಇದೆ

ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಬಳಿಕ ಹಾರ್ದಿಕ್ ಪಾಂಡ್ಯ ಪ್ರೈವೇಟ್ ಜೆಟ್ ಹೊಂದಿರುವ ಕ್ರಿಕೆಟಿಗ.  ಪಾಂಡ್ಯ ಆಗಾಗ ಫ್ಯಾಮಿಲಿ ಜೊತೆ ಪ್ರೈವೆಟ್ ಜೆಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೇಝಿ ಪಾಂಡ್ಯ ಬಳಿ ಇರುವ ಪ್ರೈವೇಟ್ ಜೆಟ್ ಕಾಸ್ಟ್, ಸುಮಾರು 40 ಕೋಟಿ ರೂಪಾಯಿ ಎನ್ನಲಾಗ್ತಿದೆ.

ಪಾಂಡ್ಯ ಬಳಿ ಇವೆ ಲಕ್ಷ ಲಕ್ಷ ಬೆಳೆಬಾಳುವ ಸ್ನೀಕರ್ಸ್..!

ಕಾರ್, ವಾಚ್, ಮನೆ, ಪ್ರೈವೇಟ್ ಜೆಟ್​ಗೆ ಹಣ ಸುರಿದ್ರೆ ಓಕೆ..! ಆದ್ರೆ ಪಾಂಡ್ಯ ತಾನಾಕೋ ಶೂಸ್, ಸ್ನೀಕರ್ಸ್​​ಗೂ ಲಕ್ಷ ಲಕ್ಷ ಸುರಿಯುತ್ತಾರೆ. ಅದ್ರಲ್ಲೂ ಒಂದೊಂದು ಸ್ನೀಕರ್ಸ್​ ಬೆಲೆ ಕೇಳಿದ್ರೆ ನೀವ್ ಖಂಡಿತ ಕಳೆದು ಹೋಗ್ತೀರಾ..! ಪಾಂಡ್ಯ ಹಾಕೋ ಸ್ನೀಕರ್ಸ್​, ಸುಮಾರು 2 ಲಕ್ಷ ರೂಪಾಯಿಗಿಂತ ಹೆಚ್ಚು ಅಂದ್ರೆ ನಂಬ್ತೀರಾ..? ನಂಬಲೇಬೇಕು ಬಿಡಿ.!

ಒಟ್ನಲ್ಲಿ.. ಹೀಗೆ ಕ್ರೇಜಿ ಜೀವನ ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ, Really ಕ್ರೇಜಿ ವ್ಯಕ್ತಿನೇ.! ಪಾಂಡ್ಯ ಕ್ರೇಜ್ ನೋಡಿ ಕ್ರಿಕೆಟ್ ಅಭಿಮಾನಿಗಳೂ ಆಲ್​ರೌಂಡರ್​ ಲೈಫ್​ಸ್ಟೈಲ್​​ಗೆ ಫಿದಾ ಆಗ್ಬಿಟ್ಟಿದ್ದಾರೆ. 

ಇದನ್ನೂ ಓದಿ: ಅಪರಿಚಿತರಿಗೆ ಕಿಡ್ನಿದಾನ ಮಾಡಿದ ಬೆಂಗಳೂರಿನ ವೈದ್ಯೆ!! : ಹೈಕೋರ್ಟ್ ಮೆಟ್ಟಿಲೇರಿ ಕಿಡ್ನಿದಾನಕ್ಕೆ ಅನುಮತಿ ಪಡೆದ ವೈದ್ಯೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Hardik Pandya
Advertisment