Advertisment

ವ್ಯಾಲೆಂಟೈನ್ಸ್ ಡೇ ಡಿನ್ನರ್ ಮುಗಿಸಿ ಮನೆಗೆ ಬಂದು ಪತ್ನಿಯನ್ನ ಬರ್ಬರವಾಗಿ ಮುಗಿಸಿದ; ಆ ರಾತ್ರಿ ನಡೆದಿದ್ದೇನು..?

ಪ್ರೇಮಿಗಳ ದಿನಾಚರಣೆ ಎಂದರೆ ಪ್ರೀತಿ, ಸಂಭ್ರಮದ ಕ್ಷಣ. ಆದರೆ ಹರಿಯಾಣದಲ್ಲಿ ಈ ಸಂಭ್ರಮದ ರಾತ್ರಿಯೇ ಭೀಕರ ಹ*ತ್ಯೆಯೊಂದಿಗೆ ಅಂತ್ಯವಾಗಿದೆ. ವ್ಯಾಲೆಂಟೈನ್ಸ್ ಡೇ ದಿನ ಪತ್ನಿಯ ಜೊತೆ ಔತಣಕೂಟ ಮುಗಿಸಿ ಮನೆಗೆ ಬಂದ ಪತಿಯೇ, ಆಕೆಯನ್ನು ಬರ್ಬರವಾಗಿ ಮುಗಿಸಿ ದರೋಡೆಕೋರರ ಕಥೆ ಕಟ್ಟಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

author-image
Ganesh Kerekuli
Valentine Day Dinner
Advertisment

ಪ್ರೇಮಿಗಳ ದಿನಾಚರಣೆ (Valentine's Day) ಎಂದರೆ ಪ್ರೀತಿ, ಸಂಭ್ರಮದ ಕ್ಷಣ. ಆದರೆ ಹರಿಯಾಣದಲ್ಲಿ ಈ ಸಂಭ್ರಮದ ರಾತ್ರಿಯೇ ಭೀಕರ ಹ*ತ್ಯೆಯೊಂದಿಗೆ ಅಂತ್ಯವಾಗಿದೆ. ವ್ಯಾಲೆಂಟೈನ್ಸ್ ಡೇ ದಿನ ಪತ್ನಿಯ ಜೊತೆ ಔತಣಕೂಟ ಮುಗಿಸಿ ಮನೆಗೆ ಬಂದ ಪತಿಯೇ, ಆಕೆಯನ್ನು ಬರ್ಬರವಾಗಿ ಮುಗಿಸಿ ದರೋಡೆಕೋರರ ಕಥೆ ಕಟ್ಟಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 

Advertisment

ಹರಿಯಾಣದ ಬಹದ್ದೂರ್‌ಗಢದಲ್ಲಿ ನಡೆದ ಬ್ಯಾಂಕ್ ಉದ್ಯೋಗಿ ಮಹಕ್ ಅವರ ನಿಗೂಢ ಸಾವಿನ ಪ್ರಕರಣವನ್ನು ಝಜ್ಜರ್ ಪೊಲೀಸರು ಕೇವಲ 18 ಗಂಟೆಗಳಲ್ಲಿ ಭೇದಿಸಿದ್ದಾರೆ. ಮೃತಳ ಪತಿ, ಚಾರ್ಟರ್ಡ್ ಅಕೌಂಟೆಂಟ್ (Chartered Accountant) ಅಂಶುಲ್ ಧವನ್ ಕೊ*ಲೆಗಾರ ಎಂದು ಸಾಬೀತಾಗಿದೆ.

ಇದನ್ನೂ ಓದಿ: ಹಾರ್ದಿಕ್ ಕ್ರೇಜಿ ಪರ್ಸನ್ ಯಾಕೆ..? ಪಾಂಡ್ಯರ ಶ್ರೀಮಂತಿಗೆ ಹೇಗಿದೆ..?

Valentine Day Dinner (1)

ದರೋಡೆ ನಾಟಕ ಆಡಿದ್ದ ಪತಿ

ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸರಿಗೆ ಕರೆ ಮಾಡಿದ ಅಂಶುಲ್, ನಮ್ಮ ಮನೆಗೆ ನುಗ್ಗಿದ ಅಪರಿಚಿತ ದರೋಡೆಕೋರರು ನನ್ನ ಪತ್ನಿಯ ಕುತ್ತಿಗೆ ಸೀಳಿ ಕೊ*ಲೆ ಮಾಡಿದ್ದಾರೆ ಎಂದು ಕಣ್ಣೀರು ಹಾಕುವ ನಾಟಕವಾಡಿದ್ದ. ಗುರಗಾಂವ್‌ನಲ್ಲಿ ಕೆಲಸ ಮಾಡುತ್ತಿದ್ದ ಈತ, 

ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಆರಂಭಿಸಿದಾಗ ಅಂಶುಲ್ ಹೇಳಿಕೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದವು. ಆತ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಿಸುತ್ತಿದ್ದ. ದರೋಡೆಕೋರರ ಚಹರೆ ಬಗ್ಗೆ ಕೇಳಿದಾಗ ಉತ್ತರಿಸಲು ತಡವರಿಸುತ್ತಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ಕಠಿಣವಾಗಿ ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.

Advertisment

ಇದನ್ನೂ ಓದಿ: ಕಿಶನ್​​ ಯಶಸ್ಸಿನ ಹಿಂದೆ ಅದಿತಿ ಹುಂಡಿಯಾ.. ಕೋಟಿ, ಕೋಟಿ ಓಡತಿ, ಯಾರು ಈ ಚೆಲುವೆ..?

ಮೃತ ಮಹಕ್ ಗುರಗಾಂವ್‌ನ ಎಚ್‌ಡಿಎಫ್‌ಸಿ (HDFC) ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು. ಪತ್ನಿಯ ನಡತೆಯ ಬಗ್ಗೆ ಅಂಶುಲ್ ಮೊದಲಿನಿಂದಲೂ ಅನುಮಾನ ಹೊಂದಿದ್ದ. ಆಕೆಯ ಚಾರಿತ್ರ್ಯವನ್ನು ಶಂಕಿಸಿ ಆಗಾಗ ಜಗಳವಾಡುತ್ತಿದ್ದ. ವ್ಯಾಲೆಂಟೈನ್ಸ್ ಡೇ ದಿನವೂ ಇದೇ ವಿಚಾರಕ್ಕೆ ಮನಸ್ತಾಪ ಉಂಟಾಗಿ, ಪತ್ನಿಯ ಕುತ್ತಿಗೆ ಹಿಸುಕಿ, ಬಳಿಕ ಕತ್ತರಿಯಿಂದ (Scissors) ಕುತ್ತಿಗೆ ಸೀಳಿ ಕೊಲೆ ಮಾಡಿದ್ದ.

ಕೈಗೆ ಗ್ಲೌಸ್ ಹಾಕಿ ಕೃತ್ಯ

ಕೊಲೆ ಮಾಡುವಾಗ ತನ್ನ ಬೆರಳಚ್ಚು (Fingerprints) ಸಿಗಬಾರದೆಂದು ಪತಿರಾಯ ಕೈಗೆ ಗ್ಲೌಸ್ ಧರಿಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 25 ರಂದು ಹಿಸಾರ್ ಮೂಲದ ಅಂಶುಲ್ ಮತ್ತು ಹನ್ಸಿ ಮೂಲದ ಮಹಕ್ ಮದುವೆಯಾಗಿದ್ದ. ಮದುವೆಯಾದ ಕೆಲವೇ ತಿಂಗಳಲ್ಲಿ ಈ ದಾರುಣ ಘಟನೆ ನಡೆದಿದೆ. ಮೃತಳ ತಂದೆ ಕೃಷ್ಣ ಕಥೂರಿಯಾ ಅವರು ಮೊದಲಿನಿಂದಲೂ ತಮ್ಮ ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisment

ಇದನ್ನೂ ಓದಿ:ರಾಜ್ಯ ಪೌರಸೇವಾ ನೌಕರರ ಸಂಘಕ್ಕೆ ನೂತನ ಸಾರಥಿ: ಶೈಲಾ KD ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News
Advertisment
Advertisment
Advertisment