Advertisment

ಪ್ರೇಮ ಹೊಸ ಗೆಟಪ್​ ಕಂಡು ರಾಮ್​, ಸ್ನೇಹಾ ಶಾಕ್.. ಕತೆಯಲ್ಲೊಂದು ಟ್ವಿಸ್ಟ್..!

ಇಷ್ಟು ದಿನ ಪ್ರೇಮಾ ಪಟ್ಟ ಕಷ್ಟಗಳಲೆಲ್ಲಾ ಇದೀಗ ಸರಿಯಾಗ್ತಿದೆ. ರಾಮ್​ ಸ್ನೇಹಾಳ ಮೋಸವನ್ನ ಅರಿತು ಬದಲಾಗಿದ್ದಾನೆ. ರಾಮ್​ಗೆ ಇದೀಗ ಪ್ರೇಮಾ ಮೇಲೆ ಲವ್​ ಶುರುವಾಗ್ತಿದೆ. ಈ ನಡುವೆ ಪ್ರೇಮಾ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾಳೆ. ಪ್ರೇಮಾ ಮಾಡ್ರನ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ನಿಬ್ಬೆರಗಾಗಿಸಿದೆ.

author-image
Ganesh Kerekuli
prema kavya (3)
Advertisment

ಇಷ್ಟು ದಿನ ಪ್ರೇಮಾ ಪಟ್ಟ ಕಷ್ಟಗಳಲೆಲ್ಲಾ ಇದೀಗ ಸರಿಯಾಗ್ತಿದೆ. ರಾಮ್​ ಸ್ನೇಹಾಳ ಮೋಸವನ್ನ ಅರಿತು ಬದಲಾಗಿದ್ದಾನೆ. ರಾಮ್​ಗೆ ಇದೀಗ ಪ್ರೇಮಾ ಮೇಲೆ ಲವ್​ ಶುರುವಾಗ್ತಿದೆ. ಈ ನಡುವೆ ಪ್ರೇಮಾ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾಳೆ. ಹೌದು, ಪ್ರೇಮಾ ಮಾಡ್ರನ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು ಎಲ್ಲರನ್ನೂ ನಿಬ್ಬೆರಗಾಗಿಸಿದೆ.

Advertisment

ಪ್ರೇಮಾ ಚಿಕ್ಕದಿನಿಂದ ರಾಮ್​ನನ್ನ ಪ್ರೀತಿಸುತ್ತ ಅವನನ್ನೇ ಮದುವೆ ಆಗಬೇಕು ಎಂದು ಕನಸು ಕಾಣ್ತಿದ್ಲು. ಆದ್ರೆ ರಾಮ್​, ಸ್ನೇಹಾಳನ್ನ ಪ್ರೀತಿಸ್ತಾ ಇರ್ತಾನೆ. ಈ ವಿಷಯ ಪ್ರೇಮಾಳಿಗೂ ಗೊತ್ತಾಗುತ್ತೆ... ಈ ನಡುವೆ ಮಾಹದೇವನೊಂದಿಗೆ ಪ್ರೇಮಾಳ ಮದುವೆ ಫಿಕ್ಸ್​ ಆಗುತ್ತೆ. ಆದ್ರೆ ಪ್ರೇಮಾ ತನ್ನ ಪ್ರೀತಿಯನ್ನ ಉಳಿಸಿಕೊಳ್ಳಬೇಕು ಅಂತಾ ಕೊನೆ ಕ್ಷಣದಲ್ಲಿ ಸುಳ್ಳು ಹೇಳಿ, ರಾಮ್​ನನ್ನ ಮದುವೆ ಆಗ್ತಾಳೆ. ಇತ್ತ ಮಾಹದೇವನನ್ನ ಪ್ರೇಮಾಳ ತಂಗಿ ಕಾವ್ಯ ಮದುವೆ ಆಗ್ತಾಳೆ.

prema kavya (1)

ತಾನು ಆಸೆ ಪಟ್ಟಂತೆ ಮದುವೆ ಏನೋ ಆದ ಪ್ರೇಮಾ, ಮುಂದೆ ಅತ್ತೆಯಿಂದ ತೊಂದರೆ ಅನುಭವಿಸ್ತಾಳೆ. ಅಲ್ಲದೇ ಆಕೆಗೆ ಗಂಡನ ಪ್ರೀತಿಯೂ ಸಿಗುದಿಲ್ಲ.. ಗಂಡನ ಪ್ರೀತಿಯನ್ನ ಪಡೆಯಲು ಬಹಳಷ್ಟು ಕಷ್ಟ ಪಡುತ್ತಾಳೆ. ಆದ್ರೆ ರಾಮ್​ಗೆ ಸ್ನೇಹಳಿಂದ ತನ್ನನ್ನ ದೂರ ಮಾಡಿದ್ದಾಳೆ ಎಂದು ಪ್ರೇಮಾ ಮೇಲೆ ಕೋಪವಿರುತ್ತೆ. ಕಾಲ ಬದಲಾದಂತೆ ಸ್ನೇಹಾಳ ನಿಜರೂಪ ರಾಮ್​ ಮುಂದೆ ತೆರೆಯುತ್ತಾ ಹೋಗುತ್ತೆ. ಸ್ನೇಹಾ ಕೆಟ್ಟವಳು, ತನಗೆ ಮೋಸ ಮಾಡಿದ್ದಾಳೆ ಎಂಬುದು ರಾಮ್​ ಮುಂದೆ ಬಯಲಾಗುತ್ತೆ.

ಬಟ್​ ಸ್ನೇಹಾ ರಾಮ್​ನನ್ನ ಪಡೆಯಲೇ ಬೇಕು ಅಂತಾ ನೂರಾರು ಪ್ರಯತ್ನ ಮಾಡ್ತಾಳೆ. ರಾಮ್​ ಹಾಗೂ ಪ್ರೇಮಾಳಿಗೆ ಕೊಡಬಾರದ ಕಷ್ಟವನ್ನೆಲ್ಲಾ ಕೋಡ್ತಾಳೆ.. ಕೊನೆಗೆ ಕೋರ್ಟ್​ ಮೆಟ್ಟಿಲೆರ್ತಾಳೆ.. ಆದ್ರೆ ಕೋರ್ಟ್​ನಲ್ಲಿ ರಾಮ್​ ಹಾಗೂ ಪ್ರೇಮ ಗೆಲ್ತಾರೆ.. ಸೋಲು ಅರಗಿಸಿಕೊಳ್ಳಲಾಗದ ಸ್ನೇಹಾ ಪ್ರೇಮಾ ಮೇಲೆ ಮತ್ತಷ್ಟು ಕಿಡಿಕಾರ್ತಳೆ.

Advertisment

ಇದನ್ನೂ ಓದಿ: ಬಾಂಗ್ಲಾದೇಶದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಎನ್‌ಪಿಗೆ ಭರ್ಜರಿ ಗೆಲುವು: ತಾರೀಖ್ ರೆಹಮಾನ್ ಮುಂದಿನ ಪ್ರಧಾನಿ

prema kavya

ಇದೀಗ ರಾಮ್​ಗೆ ಪ್ರೇಮಾ ಮೇಲೆ ಲವ್​ ಶುರುವಾಗ್ತಿದೆ.. ರಾಮ್​ ಮಾಡ್ತಿರೋ ಪ್ರೀತಿಯ ಕಾಳಜಿಯಲ್ಲಿ ಪ್ರೇಮ ತೇಲಾಡ್ತಿದ್ದಾಳೆ. ಈ ನಡುವೆ ರಾಮ್​ನ ಆಫೀಸ್​ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತೆ.. ಈ ಪಾರ್ಟಿಗೆ ಸ್ನೇಹಾ ಕೂಡ ಬಂದಿರ್ತಾಳೆ.. ಪಾರ್ಟಿಗೆ ಬಂದ ವ್ಯಕ್ತಿಯೊಬ್ಬರು, ರಾಮ್​ ಬಳಿ ಮದುವೆಯಾಯ್ತು ಅಂತಾ ಸುದ್ದಿ ಕೇಳ್ದೆ.. ನಿಮ್ಮ ಹೆಂಡತಿ ಎಲ್ಲಿ ಅಂತಾ ಕೇಳ್ತಾರೆ.. ಈ ವೇಳೆ ಸ್ನೇಹಾ ಅವನ ಹೆಂಡತಿನ ನಿಮಗೆ ಪರಿಚಯ ಮಾಡಿಸಲು ಅವನಿಗೆ ನಾಚಿಕೆ ಆಗುತ್ತೆ ಅಂತಾ ಹೇಳ್ತಾಳೆ..

prema kavya (2)

ಆದ್ರೆ ಇದೇ ವೇಳೆ ಪ್ರೇಮ ಎಲ್ಲರಿಗೂ ಶಾಕ್​ ಕೋಡ್ತಾಳೆ. ಇಷ್ಟು ದಿನ ಸೀರೆ ಹಾಕಿಕೊಂಡು ಅಪ್ಪಟ ಕನ್ನಡತಿಯಾಗಿ ಕಾಣ್ತಿದ್ದ ಪ್ರೇಮಾ ಮಾಡ್ರನ್​ ಡ್ರೆಸ್​  ಹಾಕ್ಕೊಂಡು ಪಾರ್ಟಿಗೆ ಎಂಟ್ರಿ ಕೋಡ್ತಾಳೆ.  ಜೊತೆಗೆ ಇಂಗ್ಲೀಷ್​ನಲ್ಲಿಯೇ ಉತ್ತರ ಕೊಡ್ತಾಳೆ.. ಪ್ರೇಮಳನ್ನ ಮಾಡ್ರನ್​ ಡ್ರೇಸ್​​ನಲ್ಲಿ ಕಂಡ ರಾಮ್​ ಮೂಕವಿಸ್ಮಿತನಾಗಿ ನಿಂತಿದ್ದಾನೆ.

Advertisment

ಒಟ್ನಲ್ಲಿ  ಪ್ರೇಮ ಹೊಸ ಗೆಟಪ್​ ಕಂಡು ರಾಮ್​, ಸ್ನೇಹಾ ಶಾಕ್​ ಆಗಿದ್ದಾರೆ. ಇದು ಪ್ರೇಮಾಳ ಹೊಸ ಅವತಾರವೇ? ತಾತ್ಕಲಿಕ ಅವತಾರವೇ ಎಂಬುದು ಸದ್ಯದಲ್ಲಿಯೇ ತಿಳಿಯಲಿದೆ.

ಇದನ್ನೂ ಓದಿ: ಅಕ್ಕನಿಗಿಂತ ತಮ್ಮನಿಗೆ ಮೊದಲು ಮದುವೆ..? ಕ್ರಿಕೆಟ್ ದೇವರ ಮನೆಯಲ್ಲಿ ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

prema kavya kannada serial
Advertisment
Advertisment
Advertisment