/newsfirstlive-kannada/media/media_files/2026/02/13/arjun-tendulkar-6-2026-02-13-13-26-59.jpg)
ಕ್ರಿಕೆಟ್​​ ದೇವರು ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡುಲ್ಕರ್​​ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಬ್ಯಾಚುಲರ್​ ಲೈಫ್​ಗೆ ಟಾಟಾ ಮಾಡೋಕೆ ಸಚಿನ್​ ಪುತ್ರ ಅರ್ಜುನ್​ ತೆಂಡುಲ್ಕರ್​ ರೆಡಿಯಾಗಿದ್ದಾರೆ. ಬಹುಕಾಲದ ಗೆಳತಿ ಸಾನಿಯಾ ಚಂದೋಕ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡೋಕೆ ಅರ್ಜುನ್​ ತಯಾರಾಗಿದ್ದಾರೆ. ಅಷ್ಟಕ್ಕೂ ತೆಂಡುಲ್ಕರ್​ ಪುತ್ರ ವರಿಸ್ತಾ ಇರೋ ಸಾನಿಯಾ ಚಂದೋಕ್​ ಯಾರು? ಹಿನ್ನೆಲೆ ಏನು? ಅಕ್ಕನಿಗಿಂತ ಮೊದಲು ತಮ್ಮನ ವಿವಾಹ ಮಾಡ್ತಿರೋದೇಕೆ?
ಕ್ರಿಕೆಟ್​ ದೇವರ ಮನೆಯಲ್ಲಿ ಮದುವೆ ಸಂಭ್ರಮ
ಕ್ರಿಕೆಟ್​​ ದೇವರು ಸಚಿನ್​ ತೆಂಡುಲ್ಕರ್​ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಪುತ್ರ ಅರ್ಜುನ್​ ತೆಂಡುಲ್ಕರ್​ ವಿವಾಹದ ಸಿದ್ಧತೆ ಅಧಿಕೃತವಾಗಿ ಆರಂಭವಾಗಿದೆ. ಕಳೆದ ಅಗಸ್ಟ್​​ನಲ್ಲಿ ಸದ್ದಿಲ್ಲದೇ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದ ಅರ್ಜುನ್​ ತೆಂಡುಲ್ಕರ್​ ಮಾರ್ಚ್​ 5ರಂದು ನಡೆಯೋ ಅದ್ಧೂರಿ ವಿವಾಹ ಸಮಾರಂಭದಲ್ಲಿ ಬಾಲ್ಯದ ಗೆಳತಿ ಸಾನಿಯಾ ಚಂದೋಕ್​ ಜೊತೆಗೆ ಹಸೆಮಣೆ ಏರಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಟರ್ಫ್ ಕ್ಲಬ್ ಅನ್ನು ಕುಣಿಗಲ್ ಸ್ಟಡ್ ಫಾರಂಗೆ ಸ್ಥಳಾಂತರಿಸಲು ಕ್ಯಾಬಿನೆಟ್ ನಿರ್ಧಾರ
/filters:format(webp)/newsfirstlive-kannada/media/media_files/2026/02/13/arjun-tendulkar-4-2026-02-13-13-27-19.jpg)
ಪುತ್ರ ಅರ್ಜುನ್​ ವಿವಾಹವನ್ನ ಅದ್ಧೂರಿಯಾಗಿ ನೇರವೇರಿಸಲು ಸಚಿನ್​ ತೆಂಡುಲ್ಕರ್​ ನಿರ್ಧರಿಸಿದ್ದಾರೆ. ಸೌತ್​ ಮುಂಬೈನ ಐಷಾರಾಮಿ ಪ್ರೈವೇಟ್​ ಎಸ್ಟೇಟ್​ನಲ್ಲಿ ಸಮಾರಂಭ ನಡೆಯಲಿದೆ ಎನ್ನಲಾಗ್ತಿದೆ. ಮಾರ್ಚ್​ 3ರಿಂದಲೇ ಪ್ರೀ ವೆಡ್ಡಿಂಗ್​ ಇವೆಂಟ್​ಗಳು ಆರಂಭವಾಗಲಿವೆ. ವಿವಾಹ ಸಮಾರಂಭಕ್ಕೆ ದೇಶದ ಗಣ್ಯಾತಿಗಣ್ಯರನ್ನ ಸಚಿನ್​ ಆತ್ಮೀಯವಾಗಿ ಆಮಂತ್ರಿಸ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನ ಈಗಾಗಲೇ ಆಹ್ವಾನಿಸಿದ್ದಾರೆ. ಇವ್ರ ಜೊತೆಗೆ ಇನ್ನೂ ಹಲವು ರಾಜಕೀಯ ಲೋಕದ ಗಣ್ಯರು, ಕ್ರಿಕೆಟ್​ ಲೋಕದ ಸ್ಟಾರ್ಸ್​​, ಬಾಲಿವುಡ್​ ನಟ-ನಟಿಯರನ್ನ ಕೆಲವೇ ದಿನಗಳಲ್ಲಿ ಆಹ್ವಾನಿಸಲಿದ್ದಾರೆ.
ಬಾಲ್ಯದ ಗೆಳತಿ, ಇನ್ಮುಂದೆ ಬಾಳ ಸಂಗಾತಿ
ಸಾನಿಯಾ ಚಂದೋಕ್​ ಹಾಗೂ​ ಅರ್ಜುನ್​ ತೆಂಡುಲ್ಕರ್ ಬಾಲ್ಯದ ಗೆಳೆಯರು. ಬಾಲ್ಯದಿಂದ ಉತ್ತಮ ಸ್ನೇಹಿತರಾಗಿದ್ದ ಇವರಿಬ್ಬರು ಕೆಲ ವರ್ಷಗಳಿಂದ ಪ್ರೇಮಿಗಳಾಗಿದ್ರು. ಕಳೆದ ಅಗಸ್ಟ್​ನಲ್ಲಿ ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ಮುಂಬೈನಲ್ಲಿ ನಡೆದಿದ್ದ ಖಾಸಗಿ ಸಮಾರಂಭದಲ್ಲಿ ಸಾನಿಯಾ ಹಾಗೂ ಅರ್ಜುನ್​ ರಿಂಗ್​ ಬದಲಾಯಿಸಿಕೊಂಡಿದ್ರು. ಬಾಲ್ಯದ ಗೆಳತಿ ಇನ್ನು ಕೆಲವೇ ದಿನಗಳಲ್ಲಿ ಬಾಳ ಸಂಗಾತಿಯಾಗಲಿದ್ದಾರೆ.
/filters:format(webp)/newsfirstlive-kannada/media/media_files/2026/02/13/arjun-tendulkar-2-2026-02-13-13-27-39.jpg)
ಸಚಿನ್​ ತೆಂಡುಲ್ಕರ್​ ಕ್ರಿಕೆಟ್​​ ಲೋಕಕ್ಕೆ ಗುಡ್​ ಬೈ ಹೇಳಿದ ದಶಕವೇ ಉರುಳಿದೆ. ಆದ್ರೆ, ಈಗಲೂ ಕೂಡ ಸಚಿನ್​ ತೆಂಡುಲ್ಕರ್​​ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ಸಂಬಂದ ಬೆಳೆಸಿರುವ ಕುಟುಂಬ ಕೂಡ ದೇಶದ ಶ್ರೀಮಂತ ಕುಟುಂಬವೇ.! ಸಾನಿಯಾ ಚಂದೋಕ್​ ಖ್ಯಾತ ಬ್ಯುಸಿನಸ್​ಮನ್​ ರವಿ ಘಾಯ್​ರ ಮೊಮ್ಮಗಳು. hospitality ಇಂಡಸ್ಟ್ರಿಯಲ್ಲಿ​ ರವಿ ಘಾಯ್​ ಬಿಗ್​​​​​ ಬ್ಯುಸಿನೆಸ್​ಮನ್​ ಆಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರೀತಿಗೆ ಬೆಲೆ ಕಟ್ಟಲಾಗದು.. ಆದರೆ ಕೆಂಗುಲಾಬಿಗೆ? ಪ್ರೇಮಿಯ ಜೇಬಿಗೆ ಗುಲಾಬಿಯೂ ಕತ್ತರಿ ಹಾಕ್ತಿದೆ ಮಾರಾಯ್ರೆ..!
ಗ್ರಾವಿಸ್​​ ಗ್ರೂಪ್​ಗೆ ರವಿ ಘಾಯ್ ಚೇರ್​​ಮನ್​ ಆಗಿದ್ದು, ಈ ಕಂಪನಿಯ ಕಳೆದೊಂದು ವರ್ಷದ ರೆವಿನ್ಯೂನೇ ಬರೋಬ್ಬರಿ 624 ಕೋಟಿ ಎಂದು ವರದಿಯಾಗಿದೆ. ಹೋಟೆಲ್​, ಐಸ್​​ಕ್ರೀಮ್​ ಸೇರಿದಂತೆ ಹಲವು ಉದ್ದಿಮೆಗಳಲ್ಲಿ ಸಾನಿಯಾ ಕುಟುಂಬದವರು ಹೂಡಿಕೆ ಮಾಡಿದ್ದಾರೆ. ಇನ್ನು ಸಾನಿಯಾ ಚಂದೋಕ್​ ಕೂಡ ಬ್ಯುಸಿನೆಸ್​ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಮುಂಬೈನಲ್ಲಿ ಮಿಸ್ಟರ್​​ ಪಾವ್ಸ್​​​ ಪೆಟ್​ ಸ್ಪಾ & ಸ್ಟೋರ್​​ (Mr. Paws Pet Spa & Store) ನಡೆಸ್ತಿದ್ದು, ಇದಕ್ಕೆ ಸಾನಿಯಾನೇ ಡೈರೆಕ್ಟರ್​​ ಆಗಿದ್ದಾರೆ.
/filters:format(webp)/newsfirstlive-kannada/media/media_files/2026/02/13/arjun-tendulkar-1-2026-02-13-13-27-54.jpg)
ತಮ್ಮನ ವಿವಾಹ ಯಾಕೆ?
ಅರ್ಜುನ್​ ತೆಂಡುಲ್ಕರ್ ವಿವಾಹಕ್ಕೆ ಸಿದ್ಧತೆ ಆರಂಭವಾಗ್ತಿದ್ದಂತೆ ಬಹುತೇಕರನ್ನ ಕಾಡ್ತಿರೋ ಪ್ರಶ್ನೆಯಿದು. ಶುಭ್​ಮನ್​ ಗಿಲ್, ಸಿದ್ಧಾರ್ಥ್​ ಚತುರ್ವೇದಿ ಸೇರಿದಂತೆ ಹಲವರ ಜೊತೆಗೆ ಸಾರಾ ಹೆಸರು ಆಗಾಗ ಕೇಳಿ ಬರ್ತಾ ಇರುತ್ತೆ. ಹೀಗಿದ್ರೂ ಸಾರಾಗೂ ಮುನ್ನ 26 ವರ್ಷದ ಅರ್ಜುನ್​ ವಿವಾಹ ಮಾಡಲು ಸಚಿನ್​ ಮುಂದಾಗಿದ್ದಾರೆ. ಯಾಕಂದ್ರೆ ಸಾರಾ ತೆಂಡುಲ್ಕರ್​ಗೆ ಈಗಲೇ ವಿವಾಹ ಇಷ್ಟವಿಲ್ಲವಂತೆ.
ಸಚಿನ್​ ತೆಂಡುಲ್ಕರ್​ ಫೌಂಡೇಶನ್​ನ ಡೈರೆಕ್ಟರ್​​ ಆಗಿರೋ ಸಾರಾಗೆ ಸಾಮಾಜಿಕ ಕೆಲಸ ಮಾಡಬೇಕು ಅನ್ನೋ ಕಾಳಜಿಯನ್ನೂ ಹೊಂದಿದ್ದಾರೆ. ಆಸ್ಟ್ರೇಲಿಯನ್​ ಟೂರಿಸಮ್​ನ​ ಅಂಬಾಸಿಡರ್ ಆಗಿ ಕೂಡ ಸಾರಾ ಆಯ್ಕೆಯಾಗಿದ್ದಾರೆ. ಮಾಡೆಲಿಂಗ್​ ಕ್ಷೇತ್ರದಲ್ಲಿ ಮುಂದುವರೆಯಬೇಕು ಅನ್ನೋದು ಸಚಿನ್​ ಪುತ್ರಿ ಸಾರಾ ತೆಂಡುಲ್ಕರ್​​ ಆಸೆಯಂತೆ. ಹೀಗಾಗಿ ಈಗಲೇ ವಿವಾಹ ಬೇಡ ಎಂಬ ನಿರ್ಧಾರಕ್ಕೆ ಸಾರಾ ಬಂದಿದ್ದು, ಸಚಿನ್​ ಕೂಡ ಮಗಳ ಇಷ್ಟ ನನ್ನಿಷ್ಟ ಎಂದಿದ್ದಾರಂತೆ.
ಇದನ್ನೂ ಓದಿ: ನಟ ಧನುಷ್ ಜೊತೆಗಿನ ವಿವಾಹ ಸುದ್ದಿ ಬಗ್ಗೆ ಮೃಣಾಲ್ ಠಾಕೂರ್ ಹೇಳಿದ್ದೇನು? ಕೊನೆಗೂ ಮೌನ ಮುರಿದ ನಟಿ ಮೃಣಾಲ್ ಠಾಕೂರ್
ಸಾರಾ ನಿರ್ಧಾರವನ್ನ ಒಪ್ಪಿ ಅಕ್ಕನಿಗಿಂತ ಮುನ್ನವೇ ಅರ್ಜುನ್​ ತೆಂಡುಲ್ಕರ್​ ವಿವಾಹ ಮಾಡಲು ಸಚಿನ್​ ಮುಂದಾಗಿದ್ದಾರೆ. ಅಂದು ಸದ್ದಿಲ್ಲದೇ ಎಂಗೇಜ್​ಮೆಂಟ್​ ಮಾಡಿ ಮುಗಿಸಿದ್ದ ಸಚಿನ್ ತೆಂಡುಲ್ಕರ್​​​, ಇದೀಗ ಅದ್ಧೂರಿಯಾಗಿ ವಿವಾಹ ನಡೆಸಲು ಸಿದ್ಧತೆ ಆರಂಭಿಸಿದ್ದಾರೆ. ಮದುವೆ ಸಂಭ್ರಮ ಕ್ರಿಕೆಟ್​​ ದೇವರ ಮನೆಯಲ್ಲಿ ಮನೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us