ಪ್ರೀತಿಗೆ ಬೆಲೆ ಕಟ್ಟಲಾಗದು.. ಆದರೆ ಕೆಂಗುಲಾಬಿಗೆ? ಪ್ರೇಮಿಯ ಜೇಬಿಗೆ ಗುಲಾಬಿಯೂ ಕತ್ತರಿ ಹಾಕ್ತಿದೆ ಮಾರಾಯ್ರೆ..!

ನಾಳೆ ಪ್ರೇಮಿಗಳ ದಿನ (Valentine's Day). ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಪ್ರೇಮದ ಸಂಕೇತವಾದ ಕೆಂಪು ಗುಲಾಬಿಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ತಮ್ಮ ಪ್ರೇಮ ನಿವೇದನೆಗೆ ಗುಲಾಬಿ ನೀಡಲು ಮುಂದಾಗಿರುವ ಪ್ರೇಮಿಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

author-image
Ganesh Kerekuli
Valentines Day
Advertisment

ಬೆಂಗಳೂರು: ನಾಳೆ ಪ್ರೇಮಿಗಳ ದಿನ (Valentine's Day). ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಪ್ರೇಮದ ಸಂಕೇತವಾದ ಕೆಂಪು ಗುಲಾಬಿಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ತಮ್ಮ ಪ್ರೇಮ ನಿವೇದನೆಗೆ ಗುಲಾಬಿ ನೀಡಲು ಮುಂದಾಗಿರುವ ಪ್ರೇಮಿಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ಗುಲಾಬಿ ಹೂವಿನ ಬೆಲೆ ಡಬಲ್ ಅಲ್ಲ, ತ್ರಿಬಲ್ ಆಗಿದೆ!

ಗುಲಾಬಿಗೆ 'ಚಿನ್ನ'ದ ಬೆಲೆ!

ಕೆ.ಆರ್. ಮಾರುಕಟ್ಟೆ ಸೇರಿದಂತೆ ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಗುಲಾಬಿ ಹೂವಿನ ದರ ಗಗನಕ್ಕೇರಿದೆ. ಸಾಮಾನ್ಯ ದಿನಗಳಲ್ಲಿ 15-20 ರೂ.ಗೆ ಸಿಗುತ್ತಿದ್ದ ಒಂದು ಗುಲಾಬಿ ಹೂವಿಗೆ, ಈಗ 50 ರಿಂದ 80 ರೂ.ವರೆಗೂ (ರಿಟೇಲ್ ದರ) ಮಾರಾಟವಾಗುತ್ತಿದೆ. ಇನ್ನು ಮಾಲ್ ಅಥವಾ ಹೈ-ಡಿಮ್ಯಾಂಡ್ ಪ್ರದೇಶಗಳಲ್ಲಿ ಒಂದು ಗುಲಾಬಿಯ ಬೆಲೆ 100 ರೂ. ದಾಟಿದರೂ ಅಚ್ಚರಿಯಿಲ್ಲ ಎನ್ನುವಂತಾಗಿದೆ.
ಹೂವಿಗೆ ಭಾರೀ ಬೇಡಿಕೆ ಬಂದಿರುವುದರಿಂದ ವರ್ತಕರು ರೈತರಿಂದ ದುಪ್ಪಟ್ಟು ಬೆಲೆ ಕೊಟ್ಟು ಹೂವು ಖರೀದಿಸುತ್ತಿದ್ದಾರೆ. ಇತ್ತ ಗುಲಾಬಿ ಬೆಳೆದ ರೈತರು ಕೂಡ ಸಿಕ್ಕಾಪಟ್ಟೆ ಖುಷ್ ಆಗಿದ್ದಾರೆ. ಮಾರುಕಟ್ಟೆಯಲ್ಲಿ ಕೆಂಪು ಗುಲಾಬಿಗೆ ಬಂಗಾರದ ಬೆಲೆ ಬಂದಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: ನಟ ಧನುಷ್ ಜೊತೆಗಿನ ವಿವಾಹ ಸುದ್ದಿ ಬಗ್ಗೆ ಮೃಣಾಲ್ ಠಾಕೂರ್ ಹೇಳಿದ್ದೇನು? ಕೊನೆಗೂ ಮೌನ ಮುರಿದ ನಟಿ ಮೃಣಾಲ್ ಠಾಕೂರ್‌

ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?

ವ್ಯಾಲೆಂಟೈನ್ಸ್ ಡೇ: ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಯುವಜನತೆಯಿಂದ ಕೆಂಪು ಗುಲಾಬಿಗೆ ವಿಪರೀತ ಬೇಡಿಕೆ ಬಂದಿದೆ.
ಮದುವೆ ಸೀಸನ್: ಇದೇ ಸಮಯದಲ್ಲಿ ಮದುವೆ ಸೀಸನ್ ಕೂಡ ಜೋರಾಗಿರುವುದರಿಂದ ಹೂವಿನ ಅಗತ್ಯ ಹೆಚ್ಚಿದೆ.
ಸರಬರಾಜು ಕೊರತೆ: ಹೊರರಾಜ್ಯಗಳಿಂದ ಬರುತ್ತಿದ್ದ ಹೂವಿನ ಸರಬರಾಜು ಕಡಿಮೆಯಾಗಿದೆ.
ಆನ್‌ಲೈನ್ ಬುಕ್ಕಿಂಗ್: ಸ್ಥಳೀಯ ಮಾರುಕಟ್ಟೆಗಿಂತ ಆನ್‌ಲೈನ್ ಮೂಲಕ ಹೂವು ಮತ್ತು ಬೂಕೆಗಳ ಬುಕ್ಕಿಂಗ್ ಹೆಚ್ಚಾಗಿದ್ದು, ಮಾರ್ಕೆಟ್‌ನಲ್ಲಿ ಶಾರ್ಟೇಜ್ ಉಂಟಾಗಿದೆ.

ಸಾಮಾನ್ಯ ದಿನ vs ಪ್ರೇಮಿಗಳ ದಿನ 

ವಿವರ

ಸಾಮಾನ್ಯ ದಿನದ ದರ (ರೂಪಾಯಿಗಳಲ್ಲಿ)

ವ್ಯಾಲೆಂಟೈನ್ ವಾರದ ದರ

ಒಂದು ಗುಲಾಬಿ (ಹೋಲ್ಸೇಲ್)16-2020-30
ಒಂದು ಗುಲಾಬಿ (ರಿಟೇಲ್​)20-3050-80
ಹೈ- ಡಿಮ್ಯಾಂಡ್ ಏರಿಯಾಗಳು30-5080-120
10 ಗುಲಾಬಿ ಬೊಕ್ಕೆ200-350500-800
20 ಗುಲಾಬಿ ಬೊಕ್ಕಿ 350-500800-1100

ಒಟ್ಟಿನಲ್ಲಿ, ‘ಪ್ರೀತಿಗೆ ಬೆಲೆ ಕಟ್ಟಲಾಗದು’ ಎನ್ನುತ್ತಾರೆ. ಆದರೆ ಆ ಪ್ರೀತಿಯನ್ನು ವ್ಯಕ್ತಪಡಿಸಲು ನೀಡುವ ಗುಲಾಬಿಗೆ ಮಾತ್ರ ಈ ಬಾರಿ ದುಬಾರಿ ಬೆಲೆ ತೆರಬೇಕಾಗಿರುವುದು ಸುಳ್ಳಲ್ಲ!

ಇದನ್ನೂ ಓದಿ:ಲವ್ ಟ್ರ್ಯಾಕ್​ನಲ್ಲಿ ವಿನೋದ್ ಗೊಬ್ರಗಾಲ? ಸಖತ್ ಟ್ರೆಂಡ್​ ಆಗ್ತಿದೆ ಈ ವಿಡಿಯೋ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Valentine's Day
Advertisment