/newsfirstlive-kannada/media/media_files/2025/08/22/anushree-marriage1-2025-08-22-17-55-57.jpg)
ಇಷ್ಟು ದಿನ ಅಭಿಮಾನಿಗಳು ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಕೊನೆಗೂ ನಿರೂಪಕಿ ಅನುಶ್ರೀ ಅವರ ಆಮಂತ್ರಣ ಪತ್ರಿಕೆಯಲ್ಲಿ ಉತ್ತರ ಸಿಕ್ಕಿದೆ. ಚಟಪಟ ಅಂತ ಮಾತನಾಡುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅನುಶ್ರೀ ಮದುವೆ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತೆ. ಮದುವೆ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತನಾಡದ ಅನುಶ್ರೀ ಅವರು ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಇದನ್ನೂ ಓದಿ:ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಯಾರಾರಿಗೆ ಎಷ್ಟೆಷ್ಟು ಕೋಟಿ ಕೊಟ್ರು?
ಹೌದು, ಕೆಲವು ದಿನಗಳಿಂದ ಎಲ್ಲೆಲ್ಲೂ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆಯೇ ಮಾತುಕತೆ ನಡೀತಿತ್ತು. ಮದುವೆ ಫಿಕ್ಸ್ ಆಯ್ತು.. ಆದ್ರೆ ಹುಡುಗ ಯಾರೂ ಅನ್ನೋದು ಅಧಿಕೃತವಾಗಿರಲಿಲ್ಲ. ಇದೀಗ ಹುಡುಗ ಯಾರು, ಮದುವೆ ಯಾವಾಗ, ಸ್ಥಳ ಎಲ್ಲಿ ಎಂಬೆಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟಿ, ನಿರೂಪಕಿ ಅನುಶ್ರೀ ಅವರು ಯುವ ರಾಜ್‍ಕುಮಾರ್ ಪತ್ನಿ ಶ್ರೀದೇವಿ ಆಪ್ತ ಸ್ನೇಹಿತ ಆಗಿರುವ ರೋಷನ್ ಜೊತೆಗೆ ಮದುವೆ ಆಗುತ್ತಿದ್ದಾರೆ. ಇದೇ ಆಗಸ್ಟ್ 28 ಅಂದರೆ ಗುರುವಾರ ರೋಷನ್ ಹಾಗೂ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಸದ್ಯ ನಿರೂಪಕಿ ಅನುಶ್ರೀ ಅವರ ಸರಳ ಆಮಂತ್ರಣ ಪತ್ರಿಕೆ ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ. ಇದೇ ಆಗಸ್ಟ್ 28ರಂದು ರೋಷನ್ ಜೊತೆ ನಿರೂಪಕಿ ಅನುಶ್ರೀ ಸಪ್ತಪದಿ ತುಳಿಯಲಿದ್ದಾರೆ. ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ಆಗಲಿದೆ. ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ ಮದುವೆ ನಡೆಯಲಿದೆ. ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ಅನುಶ್ರೀ ವಿವಾಹ ಆಗಲಿದ್ದಾರೆ.
ಇನ್ನೂ, ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೊದಲು ‘‘ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿಯಾಗುವ ಹೊಸ ಮನ್ವಂತರ ಎಂದು ಬರೆಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ