‘ನೀನಾದೆ ನಾ’ ಖ್ಯಾತಿಯ ಕನ್ನಡದ ಸೀರಿಯಲ್‌ ನಟಿ ಹಠಾತ್‌ ನಿಧನ

ಕನ್ನಡದ ಖ್ಯಾತ ಸೀರಿಯಲ್ ನಟಿ ನಂದಿನಿ ಸಾವಿಗೆ ಶರಣಾಗಿದ್ದಾರೆ. ಜೀವ ಹೂವಾಗಿದೆ, ಸಂಘರ್ಷ, ನೀನಾದೆ ನಾ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದರು. ಬೆಂಗಳೂರಿನ ಆರ್‌ ಆರ್‌ ನಗರದಲ್ಲಿ ಈ ಘಟನೆ ನಡೆದಿದೆ.

author-image
Ganesh Kerekuli
serial-actress-Nandini (2)
Advertisment

ಬೆಂಗಳೂರು: ಕನ್ನಡದ ಖ್ಯಾತ ಸೀರಿಯಲ್ ನಟಿ ನಂದಿನಿ ಸಾವಿಗೆ ಶರಣಾಗಿದ್ದಾರೆ. ಜೀವ ಹೂವಾಗಿದೆ, ಸಂಘರ್ಷ, ನೀನಾದೆ ನಾ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದರು. ಬೆಂಗಳೂರಿನ ಆರ್‌ ಆರ್‌ ನಗರದಲ್ಲಿ ಈ ಘಟನೆ ನಡೆದಿದೆ. 

serial-actress-Nandini (4)

ಮೂಲತಃ ಬಳ್ಳಾರಿ ಜಿಲ್ಲೆ ಕೊಟ್ಟೂರಿನವರಾದ ನಂದಿನಿ, ಬೆಂಗಳೂರಿನಲ್ಲಿ ವಾಸವಿದ್ದರು. ಕನ್ನಡ ಮಾತ್ರವಲ್ಲ, ತಮಿಳು ಧಾರಾವಾಹಿಗಳಲ್ಲೂ ನಟಿಸಿದ್ದರು. ಪ್ರಸ್ತುತ ತಮಿಳಿನ ಗೌರಿ ಧಾರಾವಾಹಿಯಲ್ಲಿ ಲೀಡ್‌ ರೋಲ್‌ನಲ್ಲಿ ಅಭಿನಯಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಕನಕ ಹಾಗೂ ದುರ್ಗಾ ಎನ್ನುವ ದ್ವಿಪಾತ್ರದಲ್ಲಿ ನಟಿಸುತ್ತಿದ್ದರು.

ಇದನ್ನೂ ಓದಿ: ಅಚ್ಚರಿ ಹೆಸರು..! ಸೂರಜ್​​ಗೆ ಯಾರು ಬಿಗ್​ಬಾಸ್ ಗೆಲ್ಲಬೇಕಂತೆ ಗೊತ್ತಾ..?

serial-actress-Nandini

ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಪಿಜಿ ಒಂದರಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಕಳೆದ ಭಾನುವಾರ ಮಧ್ಯರಾತ್ರಿ ನೇಣು ಬಿಗಿದು ಜೀವಬಿಟ್ಟಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ  ಬೆಳಗಿನ ಜಾವ ಆರ್ ಆರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ವೈಯುಕ್ತಿಕ ಸಮಸ್ಯೆಯಿಂದ ಕೆಟ್ಟ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

serial-actress-Nandini (3)

ನಂದಿನಿ ತಂದೆ ಸರ್ಕಾರಿ ಶಿಕ್ಷಕರಾಗಿದ್ದರು. ಮೂರು ವರ್ಷಗಳ ಹಿಂದೆ ಅವರು ನಿಧನರಾಗಿದ್ದರು. ತಂದೆಯ ಕೆಲಸವನ್ನು ಮಾಡುವಂತೆ ಕುಟುಂಬಸ್ಥರಿಂದ ಒತ್ತಾಯ ಇತ್ತು. ಆದರೆ ಟೀಚರ್ ಕೆಲಸ ನಂದಿನಿಗೆ ಇಷ್ಟವಿರಲಿಲ್ಲ. ಅಲ್ಲದೇ ಕೆಲ ಅನಾರೋಗ್ಯ ಸಮಸ್ಯೆಯಿಂದ ನಂದಿನಿದ್ದರು ಎಂದು ತಿಳಿದುಬಂದಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿವರ್ಷದ ಆರಂಭದಲ್ಲೇ ಕಹಿ ಅನುಭವ.. ಹೇಗಿತ್ತು ಕೊಹ್ಲಿ ಜರ್ನಿ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

serial actress Nandini
Advertisment