/newsfirstlive-kannada/media/media_files/2025/08/24/kohli_batting-2025-08-24-14-38-45.jpg)
2025.. ಕಿಂಗ್​ ವಿರಾಟ್​ ಕೊಹ್ಲಿ ಎಂದೂ ಮರೆಯಲಾಗದ ವರ್ಷ. ವರ್ಷದ ಆರಂಭದಲ್ಲಿ ಕಹಿಯುಂಡು ಫೇವರಿಟ್​ ಫಾರ್ಮೆಟ್​ಗೆ ಟೆಸ್ಟ್​​ ಗುಡ್​ ಬೈ ಹೇಳಿದ ವಿರಾಟ್ ಕೊಹ್ಲಿ​, ನಂತರದ ದಿನಗಳಲ್ಲಿ ದರ್ಬಾರ್​ ನಡೆಸಿದ್ರು. ಸುದೀರ್ಘ 18 ವರ್ಷಗಳ ಕಪ್​ ಕನಸು ನನಸಾಗಿದ್ದು, ಇದೇ ವರ್ಷದಲ್ಲಿ. ಏಕದಿನ ಫಾರ್ಮೆಟ್​ನಲ್ಲಂತೂ ವಿರಾಟ್​ ವೀರಾವೇಷಕ್ಕೆ ಎದುರಾಳಿಗಳು ತಬ್ಬಿಬ್ಬಾದ್ರು. ಈ ವರ್ಷದ ಕೊಹ್ಲಿ ಜರ್ನಿ ಹೇಗಿತ್ತು?
2025ರ ಅಂತ್ಯಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ಈ ವರ್ಷ ಕೊಹ್ಲಿ ಕರಿಯರ್​ನ ಮಹತ್ವದ ವರ್ಷ. ಸಿಡ್ನಿ ಟೆಸ್ಟ್​ನ ಸೈಲೆಂಟ್​ ಇನ್ನಿಂಗ್ಸ್​ನೊಂದಿಗೆ ಆರಂಭವಾದ ಈ ವರ್ಷದ ಕೊಹ್ಲಿ ಜರ್ನಿ, ಮೊನ್ನೆಯ ಲಿಸ್ಟ್​​ ಎ ಶತಕವರೆಗೆ ಕಂಡಿದ್ದು ಬರೀ ಯಶಸ್ಸನ್ನೇ.
ಇದನ್ನೂ ಓದಿ: ನಾನೂ ನಿರೀಕ್ಷೆ ಮಾಡಿರಲಿಲ್ಲ -ಔಟ್ ಆಗಿರುವ ಬಗ್ಗೆ ಸೂರಜ್ ಫಸ್ಟ್​ ರಿಯಾಕ್ಷನ್ VIDEO
/filters:format(webp)/newsfirstlive-kannada/media/media_files/2025/10/12/kohli-2025-10-12-12-36-38.jpg)
ವರ್ಷದ ಆರಂಭದಲ್ಲೇ ವಿರಾಟ್​​ ಕೊಹ್ಲಿಗೆ ಕಹಿ
2025ರ ವರ್ಷದ ಆರಂಭ ವಿರಾಟ್​ ಕೊಹ್ಲಿ ಕರಿಯರ್​ನ ಕರಾಳ ಭಾಗ. ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್​ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿ ತೀವ್ರ ಟೀಕೆಗೆ ಗುರಿಯಾಗಿದ್ರು. ಔಟ್​ ಸೈಡ್​ ಆಫ್​ ಸ್ಟಂಪ್​ ಎಸೆತಗಳನ್ನ ಪದೇ ಪದೇ ಕೆಣಕಿ ವಿಕೆಟ್​ ಒಪ್ಪಿಸಿದ ಕೊಹ್ಲಿ ಕಂಪ್ಲೀಟ್​ ಫ್ಲಾಪ್​ ಶೋ ನೀಡಿದ್ರು. ಈ ಕಳೆಪೆಯಾಟ ಅಂತಿಮವಾಗಿ ಫೇವರಿಟ್​​ ಫಾರ್ಮೆಟ್​ಗೆ ವಿರಾಟ್​ ವಿದಾಯವನ್ನೇ ಹೇಳುವಂತೆ ಮಾಡಿಬಿಡ್ತು. ​
2025ರಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್​ ಟ್ರೋಫಿಯಲ್ಲಿ ವಿರಾಟ್​ ಕೊಹ್ಲಿ ಚಾಂಪಿಯನ್​ ಆಟವಾಡಿದ್ರು. ಕಾಂಗರೂ ನಾಡಲ್ಲಿ ಸತತ ಫ್ಲಾಪ್​ ಶೋ ನೀಡಿ ಕಂಗೆಟ್ಟಿದ್ದ ಕೊಹ್ಲಿ, ಅರಬ್ಬರ ನಾಡಲ್ಲಿ ವೈಫಲ್ಯ ಮೆಟ್ಟಿ ನಿಂತ್ರು. ಟೂರ್ನಿಯೂದ್ದಕ್ಕೂ ಬೊಂಬಾಟ್​ ಬ್ಯಾಟಿಂಗ್​ ನಡೆಸಿದ ವಿರಾಟ್​, 5 ಇನ್ನಿಂಗ್ಸ್​ಗಳಲ್ಲೇ 54.50ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದ್ರು. ಪಾಕಿಸ್ತಾನ್​ ಹಾಗೂ ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್​ ಪಂದ್ಯದಲ್ಲಿ ಮ್ಯಾನ್​ ಆಫ್​ ಮ್ಯಾಚ್​ ಅವಾರ್ಡ್​ ಕೂಡ ಗೆದ್ದಿದ್ರು.
/filters:format(webp)/newsfirstlive-kannada/media/media_files/2025/12/25/virat-kohli-4-2025-12-25-15-14-48.jpg)
ಚೊಚ್ಚಲ IPL ಟ್ರೋಫಿ ಗೆಲುವು..!
ವಿರಾಟ್​ ಕೊಹ್ಲಿ ಅಲ್ಟಿಮೇಟ್​ ಡ್ರೀಮ್​ ನನಸಾಗಿದ್ದೇ 2025ರಲ್ಲಿ. ಕೊಹ್ಲಿ ಮಾತ್ರವಲ್ಲ, 18 ಸೀಸನ್​ಗಳಿಂದ ಕಪ್​ ನಮ್ದೇ ಅಂತಿದ್ದ ವಿರಾಟ್​ ಕೊಹ್ಲಿಯ ಕೋಟ್ಯಂತರ ಫ್ಯಾನ್ಸ್​ ಕನಸು ಈ ವರ್ಷ ನನಸಾಯ್ತು. ಚೊಚ್ಚಲ ಐಪಿಎಲ್​ ಟ್ರೋಫಿ ಈ ವರ್ಷ ಆರ್​​ಸಿಬಿ ಮುಡಿಗೇರಿತು. ವಿರಾಟ್​ ಕೊಹ್ಲಿ ಕೂಡ ಈ ಸೀಸನ್​ನಲ್ಲಿ ಆಡಿದ ಫ್ಯಾನ್ಸ್​ಗೆ ಭರ್ಜರಿ ಎಂಟರ್​ಟೈನ್​ಮೆಂಟ್​ ನೀಡಿದ್ರು. 15 ಪಂದ್ಯಗಳಿಂದ 54.75ರ ಸರಾಸರಿಯಲ್ಲಿ 657 ರನ್​ಗಳಿಸಿ ಮಿಂಚಿದ್ರು.
ಏಕದಿನ ಕ್ರಿಕೆಟ್​ನಲ್ಲಿ ಈ ವರ್ಷ ಪೂರ್ತಿಯ ವಿರಾಟ್​ ಕೊಹ್ಲಿ ವೀರಾವೇಷದ ಬ್ಯಾಟಿಂಗ್​ ನಡೆಸಿದ್ರು. ಕೊಹ್ಲಿಯ ರಣಾರ್ಭಟಕ್ಕೆ ಎದುರಾಳಿ ತಂಡಗಳೆಲ್ಲಾ ಕಂಗಾಲಾದ್ವು. ಚಾಂಪಿಯನ್ಸ್​​​ ಟ್ರೋಫಿ ಬಳಿಕ ಮೊದಲ ಬಾರಿ ಬ್ಲ್ಯೂ ಜೆರ್ಸಿ ತೊಟ್ಟು ಕಣಕ್ಕಿಳಿದ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ 2 ಪಂದ್ಯಗಳಲ್ಲಿ ಡಕೌಟ್​ ಆದ್ರು. ಕೊನೆಯ ಪಂದ್ಯದಲ್ಲಿ ಹಾಫ್​ ಸೆಂಚುರಿ ಸಿಡಿಸಿ ರನ್​ಕೊಳ್ಳೆ ಹೊಡೆದ್ರು. ಆ ಬಳಿಕ ಆಡಿದ ಸೌತ್​ ಆಫ್ರಿಕಾ ಸರಣಿಯಲ್ಲಿ ಸರಣಿ ಶ್ರೇಷ್ಠ ಪರ್ಫಾಮೆನ್ಸ್​ ನೀಡಿದ್ರು. 2025ರಲ್ಲಿ 13 ಒನ್​ ಡೇ ಮ್ಯಾಚ್​​ನಿಂದ 65.10ರ ಸರಾಸರಿಯಲ್ಲಿ 651 ರನ್​ಗಳಿಸಿ ಭಾರತದ ಪರ ಈ ವರ್ಷ ಅತಿ ಹೆಚ್ಚು ರನ್​ಗಳಿಸಿ ಬ್ಯಾಟರ್​ ಎನಿಸಿದ್ರು.
ಇದನ್ನೂ ಓದಿ: ಪಂತ್​ಗೆ ಒಬ್ಬರಲ್ಲ, ಇಬ್ಬರು ವಿಲನ್! ಮುಂದಿನ ದಾರಿ ಯಾವುದಯ್ಯ..?
/filters:format(webp)/newsfirstlive-kannada/media/media_files/2025/11/08/virat_kohli_rcb_team_sale-2025-11-08-14-31-30.jpg)
ಏಕದಿನ ಱಂಕಿಂಗ್​ನಲ್ಲಿ 2ನೇ ಸ್ಥಾನಕ್ಕೆ ಜಂಪ್​
ವರ್ಷಾಂತ್ಯದಲ್ಲಿ ಬಿಡುಗಡೆಯಾದ ನೂತನ ಱಂಕಿಂಗ್​ ಪಟ್ಟಿಯಲ್ಲಿ ಕಿಂಗ್​ ಕೊಹ್ಲಿಯ ದರ್ಬಾರ್​ ನಡೆಸಿದ್ದಾರೆ. ಸೌತ್​ ಆಫ್ರಿಕಾ ಎದುರು ಸೂಪರ್ಬ್​ ಪರ್ಫಾಮೆನ್ಸ್​ ನೀಡಿದ ವಿರಾಟ್​ ಕೊಹ್ಲಿ ಏಕದಿನ ಱಂಕಿಂಗ್​ನಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. 37 ವರ್ಷ ವಯಸ್ಸಿನಲ್ಲೂ ಯುವ ಆಟಗಾರರನ್ನ ಹಿಂದಿಕ್ಕಿದ ಕೊಹ್ಲಿ, ನಂಬರ್​ 2 ಸ್ಥಾನವೇರಿದ್ದಾರೆ. 2021ರ ಎಪ್ರಿಲ್​ ಬಳಿಕ ಅಂದ್ರೆ 4 ವರ್ಷಗಳಿಂದ ಱಂಕಿಂಗ್​ನಲ್ಲಿ ಕುಸಿತ ಕಂಡಿದ್ದ ಕೊಹ್ಲಿ ಏರಿಕೆ ಕಂಡಿದ್ದಾರೆ.
ಲಿಸ್ಟ್​ ಎ ಕ್ರಿಕೆಟ್​ನಲ್ಲಿ ದಾಖಲೆಯ ಶತಕ
ವರ್ಷಾಂತ್ಯದಲ್ಲಿ ಸುದೀರ್ಘ 13 ವರ್ಷಗಳ ಬಳಿಕ ವಿಜಯ್ ಹಜಾರೆ ಟೂರ್ನಿಯಲ್ಲಿ ಕಣಕ್ಕಿಳಿದ ಕೊಹ್ಲಿ, ದಾಖಲೆಯ ಶತಕ ಸಿಡಿಸಿದ್ರು. ವೇಗವಾಗಿ ಲಿಸ್ಟ್​​ ಎ ಕ್ರಿಕೆಟ್​ನಲ್ಲಿ 16 ಸಾವಿರ ರನ್​ ಪೂರೈಸಿದ ಭಾರತದ ಬ್ಯಾಟ್ಸ್​​ಮನ್​ ಎಂಬ ದಾಖಲೆ ಬರೆದ್ರು. ಜೊತೆಗೆ 88 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದ್ರು. ಗುಜರಾತ್​ ವಿರುದ್ಧದ 2ನೇ ಪಂದ್ಯದಲ್ಲೂ ಭರ್ಜರಿ ಅರ್ಧಶತಕ ಸಿಡಿಸಿದ್ರು.
2025ರ ಆರಂಭದಲ್ಲಿ ಕಹಿಯುಂಡರೂ ಆ ಬಳಿಕ ಓವರ್​ ಕಮ್​ ಮಾಡಿದ ವಿರಾಟ್​ ಕೊಹ್ಲಿ ರನ್​ಮಷೀನ್​ ಎಂಬ ಬಿರುದಿಗೆ ತಕ್ಕಂತೆ ರನ್​ ಕೊಳ್ಳೆ ಹೊಡೆದಿದ್ದಾರೆ. ದಾಖಲೆಗಳ ಮೇಲೆ ದಾಖಲೆ ಬರೆದು 2027ರ ಏಕದಿನ ವಿಶ್ವಕಪ್​​ ಆಡೋ ಮಹಾ ಕನಸನ್ನ ಬೆನ್ನತ್ತಿದ್ದಾರೆ. 2026ರಲ್ಲೂ ಕೊಹ್ಲಿ ಇದೇ ಡ್ರೀಮ್​ ಫಾರ್ಮ್​ ಮುಂದುವರೆಸಲಿ.
ಇದನ್ನೂ ಓದಿ: 35 ಇನ್ನಿಂಗ್ಸ್.. 11 ಶತಕ.. 12 ಅರ್ಧಶತಕ.. ಆದರೂ ಕನ್ನಡಿಗನಿಗೆ BCCI ಅನ್ಯಾಯ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us