ಪಂತ್​ಗೆ ಒಬ್ಬರಲ್ಲ, ಇಬ್ಬರು ವಿಲನ್! ಮುಂದಿನ ದಾರಿ ಯಾವುದಯ್ಯ..?

ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ-20. ಮೂರೂ ಫಾರ್ಮೆಟ್​ಗಳಲ್ಲೂ ಖಾಯಂ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಡೇರಿಂಗ್ ಌಂಡ್ ಡ್ಯಾಶಿಂಗ್ ಆಗಿದ್ದ ಪಂತ್​​ ಈ ಸ್ಥಿತಿಗೆ ಕಾರಣವೇನು?

author-image
Ganesh Kerekuli
Rishab pant (1)
Advertisment
  • ರಿಷಭ್ ಪಂತ್ ದಿನೇ ದಿನೇ ಡಲ್
  • T20 ಕ್ರಿಕೆಟ್​​ನಲ್ಲಿ ಪಂತ್ ಡೋರ್ ಕ್ಲೋಸ್?
  • ODI ಫಾರ್ಮೆಟ್​ನಲ್ಲಿ ಪಂತ್​ಗೆ ಜಾಗ ಇಲ್ಲ..?​

ಫಿಯರ್​ಲೆಸ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್​ರನ್ನ ಸದ್ಯ ಯಾರೂ ಕ್ಯಾರೇ ಅನ್ನುತ್ತಿಲ್ಲ. ಸೌತ್ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಅಟ್ಟರ್ ಫ್ಲಾಪ್ ಆಗಿದ್ದ ಪಂತ್, ಈಗ ಸೆಲೆಕ್ಟರ್ಸ್​​ ಮತ್ತು ಟೀಮ್ ಮ್ಯಾನೇಜ್ಮೆಂಟ್​​ಗೆ ಬೇಡವಾಗಿದ್ದಾರೆ. ಪಂತ್​ಗೆ ಅವಕಾಶಗಳ ಮೇಲೆ ಅವಕಾಶಗಳು ಸಿಕ್ಕಿದ್ರೂ ಪ್ರಯೋಜನವಾಗ್ತಿಲ್ಲ. ಹಾಗಾಗಿ ಪಂತ್​ ಈಗ ಪರದಾಡುವಂತಹ ಸ್ಥಿತಿಗೆ ತಲುಪಿದ್ದಾರೆ.

ದಿನೇ ದಿನೇ ಡಲ್

ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಬಲ ಪಾದದ ಗಾಯಕ್ಕೆ ತುತ್ತಾಗಿದ್ದ ಪಂತ್, ನಂತರ ಸರಣಿಯಿಂದಲೇ ದೂರ ಉಳಿದಿದ್ರು. ಸೌತ್ ಆಫ್ರಿಕಾ 'ಎ' ಸರಣಿಗೂ ಮುನ್ನ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದ ಪಂತ್, ಟೆಸ್ಟ್ ಸರಣಿಯಲ್ಲಿ ತೀವ್ರ ವೈಫಲ್ಯ ಅನುಭವಿಸಿದ್ರು. ವಿಜಯ್ ಹಜಾರೆ ಟೂರ್ನಿಯ ಮೊದಲ ಪಂದ್ಯದಲ್ಲೂ, ಫೇಲ್ ಆದ್ರು. 2ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ರೂ, ಹಿಂದಿನ ವೈಫಲ್ಯವನ್ನ ಮುಚ್ಚಿ ಹಾಕೋಕಾಗಲ್ಲ. ಸದ್ಯ ಪಂತ್​​ ಆಟ ನೋಡ್ತಿದ್ರೆ ದಿನೇ ದಿನೇ ಡಲ್ ಆಗ್ತಿದ್ದಾರೆ ಅಂತ ಅನಿಸ್ತಿದೆ.

ಇದನ್ನೂ ಓದಿ: ಹುಣಸೂರಿನಲ್ಲಿ ಚಿನ್ನಾಭರಣ ಮಳಿಗೆಗೆ ನುಗ್ಗಿ 5 ಕೋಟಿ ಮೌಲ್ಯದ ಆಭರಣ ದರೋಡೆ..!

Rishab panth

T20 ಕ್ರಿಕೆಟ್​​ನಲ್ಲಿ ಪಂತ್ ಡೋರ್ ಕ್ಲೋಸ್?

ಬ್ಯಾಡ್ ಫಾರ್ಮ್ ಮತ್ತು ಇನ್​ಕನ್ಸಿಸ್ಟೆನ್ಸಿಯಿಂದ ರಿಷಭ್ ಪಂತ್, T20 ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯದ ಪಂತ್​ಗೆ T20 ತಂಡದಲ್ಲಿ ಡೋರ್ ಕ್ಲೋಸ್ ಎನ್ನಲಾಗ್ತಿದೆ. ಆಪ್ತ ಗೆಳೆಯ ಇಶಾನ್ ಕಿಶನ್, ಪಂತ್​ರನ್ನ ಓವರ್​​ಟೇಕ್ ಮಾಡಿದ್ದಾರೆ. ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಧೂಳೆಬ್ಬಿಸಿರುವ ಕಿಶನ್, ಪಂತ್​ರನ್ನ ಕಂಪ್ಲೀಟ್ ಸೈಡ್​​ಲೈನ್ ಮಾಡಿದ್ದಾರೆ.

ಪಂತ್​ ಸ್ಥಾನಕ್ಕಾಗಿ ಪರದಾಟ?

ಏಕದಿನ ಕ್ರಿಕೆಟ್​ನಲ್ಲೂ ರಿಷಭ್​ ಪಂತ್​​ಗೆ ಸ್ಥಾನ ಗ್ಯಾರೆಂಟಿ ಇಲ್ಲ. ಈಗಾಗಲೇ ಕನ್ನಡಿಗ ಕೆ.ಎಲ್.ರಾಹುಲ್, ವಿಕೆಟ್ ಹಿಂದೆ ಮತ್ತು ಬ್ಯಾಟಿಂಗ್​ನಲ್ಲಿ ತಂಡದ ಫಸ್ಟ್ ಚಾಯ್ಸ್​ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ. ಕಳೆದೊಂದು ವರ್ಷದಿಂದ ಪಂತ್, ODI ಫಾರ್ಮೆಟ್​ನಲ್ಲೂ ಸ್ಥಾನಕ್ಕಾಗಿ ಪರದಾಡಿದ್ದಾರೆ. ಪಂತ್ ಮತ್ತೆ ಲಿಮಿಟೆಡ್ ಓವರ್ಸ್​ ಕ್ರಿಕೆಟ್​​ಗೆ ಕಮ್​ಬ್ಯಾಕ್ ಮಾಡೋದು ಹೇಳಿಕೊಳ್ಳುವಷ್ಟು ಸುಲಭವಲ್ಲ.

ಇದನ್ನೂ ಓದಿ:ರವಿ ಶಾಸ್ತ್ರಿ ಮೇಲೆ ಕಣ್ಣಿಟ್ಟ ಇಂಗ್ಲೆಂಡ್ ಕ್ರಿಕೆಟ್! ಮಹತ್ವದ ಜವಾಬ್ದಾರಿ ಹೆಗಲೇರುವ ಸಾಧ್ಯತೆ..!

ಸೆಮಿಫೈನಲ್​ ಪಂದ್ಯ; ಟೀಮ್​ ಇಂಡಿಯಾದಿಂದ ಕೆ.ಎಲ್​ ರಾಹುಲ್​ಗೆ ಗೇಟ್​ಪಾಸ್​; ಕಾರಣವೇನು?

 
T20, ಏಕದಿನ ಕ್ರಿಕೆಟ್​ನಂತೆ ರೆಡ್ ಬಾಲ್ ಕ್ರಿಕೆಟ್​ನಲ್ಲೂ ರಿಷಭ್ ಪಂತ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ಸ್ಥಾನ ಸುಲಭವಲ್ಲ. ಟೆಸ್ಟ್ ಕ್ರಿಕೆಟ್​ನಲ್ಲಿ ಪಂತ್​ಗೆ ಒಬ್ಬರಲ್ಲ, ಇಬ್ಬರು ವಿಲನ್​ಗಳಿದ್ದಾರೆ. ಅದು ಕೆ.ಎಲ್.ರಾಹುಲ್ ಮತ್ತು ಧೃವ್ ಜುರೆಲ್. ಪಂತ್ ಈ ಇಬ್ಬರನ್ನೂ ಸೈಡ್ ಹೊಡೆಯೋದು ಕಷ್ಟ. ಆದ್ರೆ ಡೊಮೆಸ್ಟಿಕ್ ಕ್ರಿಕೆಟ್ ಅಥವಾ ಇಂಟರ್​​​ನ್ಯಾಷನಲ್ ಕ್ರಿಕೆಟ್​​ನಲ್ಲಿ ಪಂತ್, ಸಿಕ್ಕ ಅವಕಾಶಗಳನ್ನ ಬಳಸಿಕೊಳ್ಳಬೇಕು. ಕನ್ಸಿಸ್ಟೆಂಟ್ ಆಗಿ ರನ್​ ಸ್ಕೋರ್ ಮಾಡಬೇಕು. ಹಾಗ ಪಂತ್​ ರಾಹುಲ್ ಮತ್ತು ಜುರೆಲ್​ ಜೊತೆ ಸ್ಥಾನಕ್ಕಾಗಿ ಕಾಂಪೀಟ್ ಮಾಡಬಹುದು. 

ಸದ್ಯ ಪಂತ್​​ಗೆ ಟೆಸ್ಟ್, ಏಕದಿನ ಮತ್ತು ಟ-20 ಹಾದಿ, ಕಲ್ಲು ಮುಳ್ಳಿನ ಹಾದಿಯಾಗಿದೆ. ಆದಷ್ಟು ಬೇಗ ಪಂತ್, ಈ ಹಾದಿಯನ್ನ ದಾಟಿಕೊಂಡು ಮುಂದೆ ಸಾಗಬೇಕು. ಇಲ್ದಿದ್ರೆ ಪಂತ್ ರಾಷ್ಟ್ರೀಯ ತಂಡದಲ್ಲಿ ಸ್ಥಾನಕ್ಕಾಗಿ ಪರದಾಡಬೇಕಾಗುತ್ತದೆ. ಒಂದು ವೇಳೆ ಪಂತ್ ಇದೇ ಫಾರ್ಮ್ ಮುಂದುವರೆಸಿದ್ರೆ, ಟೀಮ್ ಇಂಡಿಯಾ ಡೋರ್ ಕ್ಲೋಸ್ ಆಗೋದ್ರಲ್ಲಿ ಯಾವುದು ಅನುಮಾನವಿಲ್ಲ.

ರಿಷಭ್ ಪಂತ್ ಒಬ್ಬ ಫೈಟರ್. ಸಾವನ್ನೇ ಗೆದ್ದು ಬಂದಿರುವ ಪಂತ್​ಗೆ, ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡೋದು ಕಷ್ಟವೇನಲ್ಲ. ಪಂತ್ ಪರಾಕ್ರಮ ನೋಡಲು ಅಭಿಮಾನಿಗಳು, ಕಾತುರದಿಂದಿದ್ದಾರೆ. ಪಂತ್​ಗೆ ಆಲ್ ದ ಬೆಸ್ಟ್ ಹೇಳೋಣ.

ಇದನ್ನೂ ಓದಿ: ನನ್ನ ದೇಹ ಚರ್ಚೆಯ ವಿಷಯವಲ್ಲ -ಖಡಕ್ಕಾಗಿ ಕೌಂಟರ್ ಕೊಟ್ಟ ಸುದೀಪ್ ಮಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rishabh Pant
Advertisment