ರವಿ ಶಾಸ್ತ್ರಿ ಮೇಲೆ ಕಣ್ಣಿಟ್ಟ ಇಂಗ್ಲೆಂಡ್ ಕ್ರಿಕೆಟ್! ಮಹತ್ವದ ಜವಾಬ್ದಾರಿ ಹೆಗಲೇರುವ ಸಾಧ್ಯತೆ..!

ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಮತ್ತೆ ಕೋಚ್ ಆಗ್ತಾರಾ? ಶಾಸ್ತ್ರಿ ಮತ್ತೆ ಟೀಮ್ ಇಂಡಿಯಾಕ್ಕೆ ಗುರುವಾಗಿ ಗ್ರ್ಯಾಂಡ್ ಎಂಟ್ರಿ ಕೊಡ್ತಾರಾ? ಈ ಪ್ರಶ್ನೆ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗ್ತಿದೆ. ರವಿ ಶಾಸ್ತ್ರಿ ಟೀಮ್ ಇಂಡಿಯಾಕ್ಕಲ್ಲ. ಇಂಗ್ಲೆಂಡ್ ತಂಡದ ಕೋಚ್ ಆಗ್ತಾರೆ ಎನ್ನಲಾಗಿದೆ.

author-image
Ganesh Kerekuli
Ravi shashtri
Advertisment
  • ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್​ಗೆ ಕೊಕ್?
  • ರವಿ ಶಾಸ್ತ್ರಿಗೆ ಇಂಗ್ಲೆಂಡ್ ಟೆಸ್ಟ್ ತಂಡ ಕೋಚ್ ಪಟ್ಟ?
  • ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಶಾಸ್ತ್ರಿ ಪರ ಬ್ಯಾಟಿಂಗ್..!

ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಮತ್ತೆ ಕೋಚ್ ಆಗ್ತಾರಾ? ಶಾಸ್ತ್ರಿ ಮತ್ತೆ ಟೀಮ್ ಇಂಡಿಯಾಕ್ಕೆ ಗುರುವಾಗಿ ಗ್ರ್ಯಾಂಡ್ ಎಂಟ್ರಿ ಕೊಡ್ತಾರಾ? ಈ ಪ್ರಶ್ನೆ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗ್ತಿದೆ. ರವಿ ಶಾಸ್ತ್ರಿ ಟೀಮ್ ಇಂಡಿಯಾಕ್ಕಲ್ಲ. ಇಂಗ್ಲೆಂಡ್ ತಂಡದ ಕೋಚ್ ಆಗ್ತಾರೆ ಅನ್ನೋದು ಇದೀಗ ಎಲ್ಲೆಡೆ ಬಿರುಗಾಳಿಯಂತೆ ಹರಡುತ್ತಿದೆ.

ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿಗೆ, ಫುಲ್ ಡಿಮ್ಯಾಂಡ್. ಡೈರೆಕ್ಟರ್, ಕೋಚ್ ಆಗಿ ಸಕ್ಸಸ್ ಕಂಡಿರುವ ಶಾಸ್ತ್ರಿ ಮೇಲೆ, ಇದೀಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಕಣ್ಣು ಬಿದ್ದಿದೆ. ಪ್ರಸಕ್ತ ಌಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್, 3-0 ಅಂತರದಿಂದ ಸರಣಿ ಸೋತಿದೆ. ಇದ್ರಿಂದ ಕಂಗೆಟ್ಟಿರುವ ಇಸಿಬಿ, ಹಾಲಿ ಕೋಚ್ ಬ್ರೆಂಡನ್ ಮೆಕಲಮ್​​​ರನ್ನ ಬದಲಾಯಿಸುವ ಚಿಂತನೆ ನಡೆಸುತ್ತಿದೆ ಎನ್ನಲಾಗ್ತಿದೆ.

ಬ್ರೆಂಡನ್ ಮೆಕಲಮ್​ಗೆ ಕೊಕ್?

ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ಕೋಚ್ ಹುದ್ದೆ ಅಲಂಕರಿಸಿದಾಗ ಭಾರೀ ನಿರೀಕ್ಷೆ ಇತ್ತು. ಮೆಕಲಮ್ ಸಹ ಆರಂಭದಲ್ಲಿ ಸಕ್ಸಸ್​​ಫುಲ್ ಕೋಚ್ ಎನಿಸಿಕೊಂಡ್ರು. ಮೆಕಲಮ್​ರ BUZZ BALL ಕೂಡ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರೀ ಸದ್ದು ಮಾಡಿತ್ತು. ಆದ್ರೀಗ ಌಶಸ್ ಟೆಸ್ಟ್ ಸರಣಿಯಲ್ಲಿ ಕೋಚ್ ಮೆಕಲಮ್​ರ ​BUZZ BALL ಠುಸ್ ಆಗಿದೆ. ಆಸಿಸ್​​ನಲ್ಲಿ ಇಂಗ್ಲೆಂಡ್ ಌಶಸ್ ಟೆಸ್ಟ್ ಸರಣಿ ಸೋತು ಮುಖಭಂಗಕ್ಕೀಡಾಗಿದೆ.

ಇದನ್ನೂ ಓದಿ: ಕಿವೀಸ್​ ODI ಸರಣಿಗೆ ತಂಡ ಪ್ರಕಟ ವಿಳಂಬ.. ಆಯ್ಕೆ ಸಮಿತಿಗೆ ಆಗಿರೋ ಅಡ್ಡಿ ಏನು?

ಒಂದೆಡೆ ಇಂಗ್ಲೆಂಡ್ ತಂಡದ ಟೆಸ್ಟ್ ಸರಣಿ ಸೋಲು ಮತ್ತೊಂದೆಡೆ ಆಟಗಾರರ ಅಶಿಸ್ತು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯನ್ನ ಕೆರಳಿಸಿದೆ. ಸದ್ಯ ಟೆಸ್ಟ್ ತಂಡಕ್ಕೆ ಹೊಸ ಕೋಚ್ ನೇಮಕಕ್ಕೆ ಚಿಂತನೆ ನಡೆಸುತ್ತಿರುವ ಇಸಿಬಿ, ಟೀಮ್ ಇಂಡಿಯಾ ಮಾಜಿ ಕೋಚ್ ಌಂಡ್ ಡೈರೆಕ್ಟರ್, ರವಿ ಶಾಸ್ತ್ರಿ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ಶಾಸ್ತ್ರಿ 'ಯೆಸ್' ಅಂದ್ರೆ ಇಸಿಬಿ ಪಟ್ಟ ಕಟ್ಟೋಕೂ ರೆಡಿಯಾಗಲಿದೆ.

ಶಾಸ್ತ್ರಿ ಪರ ಬ್ಯಾಟಿಂಗ್..!

ಟೀಮ್ ಇಂಡಿಯಾ ಮಾಜಿ ಕೋಷಚ್ ರವಿ ಶಾಸ್ತ್ರಿ, ಇಂಗ್ಲೆಂಡ್ ಕೋಚ್ ಆಗಲು ಬೆಸ್ಟ್ ಪರ್ಸನ್. ಯಾಕಂದ್ರೆ ಶಾಸ್ತ್ರಿ ಸೂಪರ್​​ಸ್ಟಾರ್ಸ್​ ಇದ್ದ ಟೀಮ್ ಇಂಡಿಯಾವನ್ನ ಅದ್ಭುತವಾಗಿ ಹ್ಯಾಂಡಲ್ ಮಾಡಿದ್ದಾರೆ. ಆನ್​ಫೀಲ್ಡ್​​ನಲ್ಲೂ ಅದ್ಭುತ ರಿಸಲ್ಟ್ ಕಂಡಿದ್ದಾರೆ. ಕೋಚ್ ಆಗಿ ಡಿಸ್ಟಿಂಕ್ಷನ್​​ನಲ್ಲಿ ಪಾಸಾಗಿರುವ ಶಾಸ್ತ್ರಿ, ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಲು ಸೂಕ್ತ ವ್ಯಕ್ತಿ ಅನ್ನೋದು ಇಂಗ್ಲೆಂಡ್ ತಂಡದ ಮಾಜಿ ನಾಯಕರು ಮತ್ತು ದಿಗ್ಗಜ ಕ್ರಿಕೆಟಿಗರ ಅಭಿಪ್ರಾಯವಾಗಿದೆ.

ಇದನ್ನೂ ಓದಿ:ಉದ್ಯಮಿಯಿಂದ 10 ಕೋಟಿ ರೂ. ಸುಲಿಗೆಗೆ ಯತ್ನ : ಇಬ್ಬರು ಮಹಿಳೆಯರನ್ನು ಬಂಧಿಸಿದ ಪೊಲೀಸರು

ರವಿ ಶಾಸ್ತ್ರಿ ಡೈರೆಕ್ಟರ್ ಌಂಡ್ ಕೋಚ್ ಆಗಿ ಒಳ್ಳೆ ಪ್ರೊಫೈಲೇ ಹೊಂದಿದ್ದಾರೆ. 2014 ರಿಂದ 2016, 2 ವರ್ಷಗಳ ಕಾಲ ಶಾಸ್ತ್ರಿ ಟೀಮ್ ಇಂಡಿಯಾ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ರು. ಹಾಗೆ 2017 ರಿಂದ 2021, 5 ವರ್ಷಗಳ ಕಾಲ ರವಿ ಶಾಸ್ತ್ರಿ ಟೀಮ್ ಇಂಡಿಯಾ ದ್ರೋಣಾಚಾರ್ಯನಾಗಿ ಸೇವೆ ಸಲ್ಲಿಸಿದ್ರು. ಶಾಸ್ತ್ರಿಯ ಈ ಅನುಭವವೇ, ಇಂಗ್ಲೆಂಡ್ ಕ್ರಿಕೆಟ್ ಬೊರ್ಡ್ ಅನ್ನ ಇಂಪ್ರೆಸ್ ಮಾಡಿರೋದು.
ಮಾಜಿ ಕೋಚ್ ರವಿ ಶಾಸ್ತ್ರಿ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ, ಇಬ್ಬರ ಜುಗಲ್​ಬಂಧಿ ಸಖತ್ತಾಗೇ ವರ್ಕ್​ಔಟ್ ಆಯ್ತು. ಇಬ್ಬರೂ ಅಗ್ರೆಸಿವ್, ಫಿಯರ್​ಲೆಸ್, ಮೆಂಟಲಿ ಸ್ಟ್ರಾಂಗ್ ಜೊತೆಗ ಒಂದೇ ಮೈಂಡ್​ಸೆಟ್​​ ಇದ್ದಿದ್ದರಿಂದ ಯಶಸ್ಸು ಕಂಡರು. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮತ್ತು ರವಿ ಶಾಸ್ತ್ರಿ ಕ್ಯಾರೆಕ್ಟರ್ ಸೇಮ್ ಟು ಸೇಮ್ ಆಗಿರೋದ್ರಿಂದ, ಇಬ್ಬರ ಜೋಡಿ ವರ್ಕ್​ಔಟ್ ಆಗುತ್ತೆ. 
ಸದ್ಯ ರವಿ ಶಾಸ್ತ್ರಿ ಕ್ರಿಕೆಟ್ ಕಾಮೆಂಟೇಟರ್ ಆಗಿ ಆರಾಮಾಗಿ ಕೆಲಸ ಮಾಡ್ತಿದ್ದಾರೆ. ಶಾಸ್ತ್ರಿ ಇಂಗ್ಲೆಂಡ್ ಕೋಚ್ ಆಗ್ತಾರೋ ಬಿಡ್ತಾರೋ ಅನ್ನೋದು, ಗೊತ್ತಿಲ್ಲ.! ಒಂದು ವೇಳೆ ರವಿ ಶಾಸ್ತ್ರಿ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆದ್ರೆ, ಆಂಗ್ಲರಿಗೆ ಬಲ ಹೆಚ್ಚೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ನೀವು ಕಪಾಳಕ್ಕೆ ಹೊಡೆದ್ರೆ ಹೊಡೆಸಿಕೊಳ್ಳಲ್ಲ -‘ಕ್ಲಾಸ್ ಫ್ಯಾನ್ಸ್ ಕಂಪ್ಲೇಂಟ್’ಗೆ ಕಿಚ್ಚ ಕೌಂಟರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Ravi Shastri
Advertisment