ಬೆಂಗಳೂರು: ಪ್ರೀತಿಯಿಂದ ತಾಯಿ ಹೊಡೆಯೋ ಏಟು ಬೇರೆ. ಪಕ್ಕದ ಮನೆಯವ್ರು ಹೊಡೆಯೋ ಏಟೇ ಬೇರೆ. ನೀವು ಕಪಾಳಕ್ಕೆ ಹೊಡೆದ್ರೆ ಹೊಡೆಸಿಕೊಳ್ಳಲ್ಲ ಎಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ‘ಕ್ಲಾಸ್ ಫ್ಯಾನ್ಸ್’ ಕಂಪ್ಲೇಂಟ್​ಗೆ ಕೌಂಟರ್ ನೀಡಿರುವ ಸುದೀಪ್, ಹೇಳಿದವ್ರಿಗೆ ಗೊತ್ತು ಆರಂಭ ಆಗಿದ್ದೆಲ್ಲಿ ಎಂದು. ಯಾರೋ ಮಾಡಿದ ತಪ್ಪಿಗೆ ನಮ್ಮನ್ನ ಹೊಣೆಗಾರಿಕೆ ಮಾಡೋದು ಸರಿಯಲ್ಲ ಎಂದಿದ್ದಾರೆ.
ಇದನ್ನೂ ಓದಿ:ಕಿವೀಸ್​ ODI ಸರಣಿಗೆ ತಂಡ ಪ್ರಕಟ ವಿಳಂಬ.. ಆಯ್ಕೆ ಸಮಿತಿಗೆ ಆಗಿರೋ ಅಡ್ಡಿ ಏನು?
ನಾನು ಸಿನಿಮಾಗೆ ಬಂದಿದ್ದು ಗಲಾಟೆ ಮಾಡಿಕೊಳ್ಳೋದಕ್ಕೆ ಅಲ್ಲ. ಮೇಕಪ್ ಹಾಕಿಕೊಂಡು ಜನರ ನಗಿಸೋಕೆ, ರಂಜಿಸೋದಕ್ಕೆ. ನಮಗೆ ಯಾರಿಗೂ ಯುದ್ಧ, ಪದ್ದ ಅಲ್ಲ ಬರೋದಿಲ್ಲ. ಏನೋ ತಪ್ಪುಗಳು ಗೊತ್ತಾದಾಗ ಮುಂದೆ ಬಂದು ಮಾಡಬೇಡಿ ಎಂದು ಹೇಳಿದ್ದಿದೆ. ಅದರಲ್ಲಿ ತಪ್ಪೇನಿದೆ? ಗೌರವವನ್ನು ದುಡ್ಡು ಕೊಟ್ಟು ತೆಗೆದುಕೊಳ್ಳಲು ಆಗೋದಿಲ್ಲ. ನಾನು ರೀತಿ ನಡೆದುಕೊಂಡಿರೋದಕ್ಕೆ ಕರ್ನಾಟಕದಲ್ಲಿ ಗೌರವ ಸಿಗ್ತಿರೋದು. ನಂದನ್ನು ನಾನು ಮಾತನ್ನಾಡಬಲ್ಲೆ. ಮಿಕ್ಕದನ್ನ, ಯಾರು ಹಾಕಿದ್ದಾರೆ ಅದನ್ನು ಅವರ ಬಳಿಯೇ ಕೇಳಬೇಕು.
ಸರಿಪಡಿಸಿಕೊಳ್ಳೋದು, ಬಿಡೋದು ಅವರ ಇಷ್ಟ. ನಾನು ಹೇಳೋದು ಏನೆಂದರೆ, ನನ್ನ ಜೊತೆಗೆ ಇರೋ ಹುಡುಗರು ತಪ್ಪು ಮಾಡಿದ್ರೆ ಬುದ್ಧಿ ಹೇಳಬಹುದು. ಅವ್ರು ಯಾರಿಗೆ ಹೇಳಿದ್ದಾರೆ ಗೊತ್ತಿಲ್ಲ. ಅವ್ರು ಯಾರಿಗೆ ಹೇಳಿದ್ದಾರೆ ಎಂದು ಹೆಸರು ಹೇಳಿದ್ರೆ ಚಂದ ಎಂದಿದ್ದಾರೆ.
ಇದನ್ನೂ ಓದಿ: ಸ್ಪರ್ಧಿಗಳಿಗೆ ಬಿಗ್ ಶಾಕ್ ಕೊಟ್ಟ ಬಿಗ್​ ಬಾಸ್​, ಇವತ್ತು ಡಬಲ್ ಎಲಿಮಿನೇಷ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us