/newsfirstlive-kannada/media/media_files/2025/12/27/bigg-boss-11-2025-12-27-14-51-26.jpg)
ಬಿಗ್​ ಬಾಸ್​ ಇವತ್ತು ಸ್ಪರ್ಧಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ವೀಕೆಂಡ್ ಸಂಚಿಕೆ ಪ್ರಸಾರವಾಗಲಿದ್ದು, ಜೊತೆಗೆ ಡಬಲ್ ಎಲಿಮಿನೇಷನ್ ಕೂಡ ನಡೆಯಲಿದೆ.
ಫ್ಯಾಮಿಲಿ ರೌಂಡ್​ನಿಂದ ಕೊಂದ ರಿಲ್ಯಾಕ್ಸ್​ಗೆ ಜಾರಿದ್ದ ಸ್ಪರ್ಧಿಗಳ ಬುಡಕ್ಕೆ ಇವತ್ತು ಬೆಂಕಿ ಬಿದ್ದಂತೆ ಆಗಿದೆ. ಇವತ್ತು ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಬಿಗ್​ ಬಾಸ್​ ಘೋಷಣೆ ಮಾಡಿದ್ದು, ಹೀಗಾಗಿ ಯಾರು ಮನೆಯಿಂದ ಹೊರ ಹೋಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಇವತ್ತು ಒಬ್ಬರು ಎಲಿಮಿನೇಟ್ ಆಗಲಿದ್ದು, ನಾಳೆ ಮತ್ತೊಬ್ಬ ಸ್ಪರ್ಧಿ ಆಟ ಮುಗಿಸಿ ಮನೆಗೆ ಹೋಗಲಿದ್ದಾರೆ.
ಇದನ್ನೂ ಓದಿ:ಕಿವೀಸ್​ ODI ಸರಣಿಗೆ ತಂಡ ಪ್ರಕಟ ವಿಳಂಬ.. ಆಯ್ಕೆ ಸಮಿತಿಗೆ ಆಗಿರೋ ಅಡ್ಡಿ ಏನು?
ಜೋಶ್ ಹೆಚ್ಚಿಸಲು ಸ್ಟಾರ್​ಗಳ ದಂಡು!
ಮಾರ್ಕ್ ಸಿನಿಮಾ ರಿಲೀಸ್ ಬ್ಯುಸಿಯಲ್ಲಿರುವ ಸುದೀಪ್, ಈ ವಾರದ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಇರೋದಿಲ್ಲ. ಜೋಗಿ ಪ್ರೇಮ್, ರೀಷ್ಮಾ ನಾಣಯ್ಯ ಹಾಗೂ ಭಾಗ್ಯಲಕ್ಷ್ಮೀ ಸೀರಿಯಲ್​​ನ ಭಾಗ್ಯ ಹಾಗೂ ತಾಂಡವ್ ಬಿಗ್​ ಮನೆಗೆ ಎಂಟ್ರಿ ನೀಡಿದ್ದಾರೆ. ಇವರ ಸಮ್ಮುಖದಲ್ಲೇ, ಎಲಿಮಿನೇಷನ್ ನಡೆಯಲಿದೆ.
ಈಗಾಗಲೇ ಜೋಗಿ ಪ್ರೇಮ್, ಬಿಗ್ ಬಾಸ್​ ಯಾರನ್ನ ಕರ್ಕೊಂಡು ಹೋಗ್ಬೇಕು ಅಂತಾ ಹೇಳಿ. ನಾನು ಕರೆದುಕೊಂಡು ಹೋಗ್ತೀನಿ ಎಂದಿದ್ದಾರೆ. ಎಲಿಮಿನೇಷನ್​ನ ಕೊನೆಯ ದೃಶ್ಯವನ್ನು ಬಿಗ್​ಬಾಸ್ ತೋರಿಸಿದ್ದು ಯಾರು ಔಟ್ ಆಗಿದ್ದಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ. ​
ಇದನ್ನೂ ಓದಿ:ಉದ್ಯಮಿಯಿಂದ 10 ಕೋಟಿ ರೂ. ಸುಲಿಗೆಗೆ ಯತ್ನ : ಇಬ್ಬರು ಮಹಿಳೆಯರನ್ನು ಬಂಧಿಸಿದ ಪೊಲೀಸರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us