ಕಿವೀಸ್​ ODI ಸರಣಿಗೆ ತಂಡ ಪ್ರಕಟ ವಿಳಂಬ.. ಆಯ್ಕೆ ಸಮಿತಿಗೆ ಆಗಿರೋ ಅಡ್ಡಿ ಏನು?

ಭಾರತ-ನ್ಯೂಜಿಲೆಂಡ್ ನಡುವಿನ ಒನ್​ ಡೇ ಸರಣಿಗೆ ಟೀಮ್​ ಇಂಡಿಯಾ ಸೆಲೆಕ್ಷನ್​, ಸೆಲೆಕ್ಟರ್ಸ್​ಗೆ ದೊಡ್ಡ ತಲೆನೋವಾಗಿದೆ. 15 ಆಟಗಾರರ ಆಯ್ಕೆಗೂ ಮುನ್ನ ಹಲವು ಪ್ರಶ್ನೆಗಳು ಸೆಲೆಕ್ಷನ್​ ಕಮಿಟಿಯನ್ನ ಕಾಡ್ತಿದೆ. ಹೀಗಾಗಿ ಟಿ20 ಸರಣಿಗೆ ತಂಡ ಪ್ರಕಟವಾದ್ರು. ಒನ್​ ಡೇ ಸೀರಿಸ್​ ಸೆಲೆಕ್ಷನ್​ ಇನ್ನೂ ಹೋಲ್ಡ್​ನಲ್ಲಿದೆ.

author-image
Ganesh Kerekuli
Gambhir Ajit
Advertisment
  • ಗಿಲ್​ ಫಿಟ್​ನೆಸ್​​ ಬಗ್ಗೆ ಸೆಲೆಕ್ಟರ್ಸ್​ಗೆ ಗೊಂದಲ​
  • ಶ್ರೇಯಸ್​ ಅಯ್ಯರ್ ಕಮ್​ಬ್ಯಾಕ್​ ಮಾಡ್ತಾರಾ..?
  • ಯಶಸ್ವಿ ಜೈಸ್ವಾಲ್, ಋತುರಾಜ್​ಗೆ ಚಾನ್ಸ್​ ಸಿಗುತ್ತಾ..?

ಭಾರತ-ನ್ಯೂಜಿಲೆಂಡ್ ನಡುವಿನ ಒನ್​ ಡೇ ಸರಣಿಗೆ ಟೀಮ್​ ಇಂಡಿಯಾ ಸೆಲೆಕ್ಷನ್​, ಸೆಲೆಕ್ಟರ್ಸ್​ಗೆ ದೊಡ್ಡ ತಲೆನೋವಾಗಿದೆ. 15 ಆಟಗಾರರ ಆಯ್ಕೆಗೂ ಮುನ್ನ ಹಲವು ಪ್ರಶ್ನೆಗಳು ಸೆಲೆಕ್ಷನ್​ ಕಮಿಟಿಯನ್ನ ಕಾಡ್ತಿದೆ. ಹೀಗಾಗಿ ಟಿ20 ಸರಣಿಗೆ ತಂಡ ಪ್ರಕಟವಾದ್ರು. ಒನ್​ ಡೇ ಸೀರಿಸ್​ ಸೆಲೆಕ್ಷನ್​ ಇನ್ನೂ ಹೋಲ್ಡ್​ನಲ್ಲಿದೆ.

2026ರ ಟೀಮ್​ ಇಂಡಿಯಾದ ಮೊದಲ ಟಾಸ್ಕ್​ಗೇ ಕೆಲವೇ ದಿನಗಳು ಬಾಕಿ ಉಳಿದಿವೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯೊಂದಿಗೆ ಹೊಸ ವರ್ಷದಲ್ಲಿ ಟೀಮ್​ ಇಂಡಿಯಾದ ಜರ್ನಿ ಆರಂಭವಾಗಲಿದೆ. ಏಕದಿನ ಸರಣಿ ಬಳಿಕ ನಡೆಯೋ ನ್ಯೂಜಿಲೆಂಡ್​ ವಿರುದ್ಧದ ಟಿ20 ಸರಣಿಗೆ ಟೀಮ್​ ಅನೌನ್ಸ್​ಮೆಂಟ್​ ಮಾಡಿರೋ ಭಾರತದ ಸೆಲೆಕ್ಷನ್​ ಕಮಿಟಿ, ಅದಕ್ಕೂ ಮುನ್ನವೇ ನಡೆಯೋ ಒನ್​ ಡೇ ಸರಣಿಗೆ ಟೀಮ್​ ಪಿಕ್​ ಮಾಡಿಲ್ಲ. ಸೆಲೆಕ್ಷನ್​ ಸುತ್ತ ಹಲವು ಗೊಂದಲಗಳಿವೆ. ಕ್ಲಾರಿಟಿಗಾಗಿ ಸೆಲೆಕ್ಷನ್​ ಕಮಿಟಿ ಕಾದು ಕುಳಿತಿದೆ.

ಗಿಲ್​ ಫಿಟ್​ನೆಸ್​​ ಬಗ್ಗೆ ಗೊಂದಲ

ಒನ್​ ಡೇ ಅನೌನ್ಸ್​ಮೆಂಟ್​ ಹೋಲ್ಡ್​ ಆಗಿರೋದಕ್ಕೆ ಮುಖ್ಯ ಕಾರಣವೇ ಕ್ಯಾಪ್ಟನ್​ ಶುಭ್​ಮನ್ ಗಿಲ್​. ಸೌತ್​ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಇಂಜುರಿಗೆ ತುತ್ತಾದ ಗಿಲ್​ ಫಿಟ್​ನೆಸ್​ ರಿಪೋರ್ಟ್​ಗಾಗಿ ಸೆಲೆಕ್ಷನ್​ ಕಮಿಟಿ ಕಾದಿದೆ. ಸದ್ಯ ಕಾಲಿನ ಇಂಜುರಿಯಿಂದ ಚೇತರಿಸಿಕೊಂಡಿರೊ ಗಿಲ್​, ಅಭ್ಯಾಸದ ಕಣಕ್ಕೆ ಮರಳಿದ್ದಾರೆ. ಫುಲ್​ ಫಿಟ್​​ ಆಗಿದ್ದಾರಾ? ಇಲ್ವಾ? ಅನ್ನೋ ಗೊಂದಲ ಬಗೆಹರಿದಿಲ್ಲ.

ಇದನ್ನೂ ಓದಿ:ಹನಿ ಟ್ರಾಪ್​ಗೆ ವಿವಾಹಿತ ಬಲಿ? ಸುಂದರಿ ಸುತ್ತ ಸುತ್ತಿದ ಅಸಲಿ ಕತೆ ಏನು?

Gambhir and Gill

ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಂಭೀರ ಇಂಜುರಿಗೆ ತುತ್ತಾಗಿದ್ದ ಒನ್​ ಡೇ ಟೀಮ್​ ವೈಸ್​ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​ ಕೂಡ​ ಅಭ್ಯಾಸದ ಕಣಕ್ಕೆ ಮರಳಿದ್ದಾರೆ. ಮುಂಬೈನ ಬ್ರೆಬೋರ್ನ್​ ಸ್ಟೇಡಿಯಂನಲ್ಲಿ ಕಳೆದ 2 ದಿನದಿಂದ ಅಭ್ಯಾಸ ನಡೆಸಿದ್ದ ಶ್ರೇಯಸ್​, ಇದೀಗ ಬೆಂಗಳೂರಿನ ಬಿಸಿಸಿಐ ಸೆಂಟರ್​ ಆಫ್​ ಎಕ್ಸಲೆನ್ಸ್​ಗೆ ಬಂದಿದ್ದಾರೆ. ಶ್ರೇಯಸ್​​ ಫಿಟ್​ನೆಸ್​ ಟೆಸ್ಟ್​ಗೆ ಒಳಗಾಗಲಿದ್ದು, ರಿಪೋರ್ಟ್​ ಬಳಿಕ ಫೈನಲ್​ ಡಿಶಿಷನ್​ ತೆಗೆದುಕೊಳ್ಳಲು ಕಾದಿದ್ದಾರೆ. 

ಸೌತ್​ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶುಭ್​ಮನ್​ ಗಿಲ್​ ಅಲಭ್ಯತೆಯಲ್ಲಿ ಯಶಸ್ವಿ ಜೈಸ್ವಾಲ್ ಕಣಕ್ಕಿಳಿದಿದ್ರು. ಮೊದಲ 2 ಅವಕಾಶಗಳಲ್ಲಿ ಡಿಸೆಂಟ್​ ಪರ್ಫಾಮೆನ್ಸ್​ ನೀಡಿದ ಜೈಸ್ವಾಲ್​ 3ನೇ ಪಂದ್ಯದಲ್ಲಿ ಭರ್ಜರಿ ಪರ್ಫಾಮೆನ್ಸ್​ ನೀಡಿದ್ರು. ವೈಜಾಗ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಜೈಸ್ವಾಲ್​​ 121 ಎಸೆತಗಳಲ್ಲಿ ಅಜೇಯ 116 ರನ್​ ಸಿಡಿಸಿದ್ರು. ಗಿಲ್​ ಕಮ್​ಬ್ಯಾಕ್ ಮಾಡಿದ್ರೆ, ಶತಕ ವೀರ ಜೈಸ್ವಾಲ್​ ಕಥೆ ಏನು ಎಂಬ ಪ್ರಶ್ನೆ ಈಗ ಎದುರಾಗಿದೆ. ಸೆಲೆಕ್ಷನ್​ ಕಮಿಟಿಗೂ ಇದೇ ಪ್ರಶ್ನೆ ಕಾಡ್ತಿದೆ. 

ಋತುರಾಜ್​ ಗಾಯಕ್ವಾಡ್​ ಕತೆಯೂ ಭಿನ್ನವಾಗಿಲ್ಲ. ಶ್ರೇಯಸ್​ ಅಲಭ್ಯತೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಋತುರಾಜ್​ ಸಾಲಿಡ್​​ ಪರ್ಫಾಮೆನ್ಸ್​ ನೀಡಿದ್ರು. ಸೆಂಚುರಿಯನ್ನೂ ಸಿಡಿಸಿದ ಋತುರಾಜ್​ ಗಾಯಕ್ವಾಡ್​, 56.50ರ ಸರಾಸರಿಯಲ್ಲಿ ಸರಣಿಯಲ್ಲಿ ರನ್​ಗಳಿಸಿದ್ದಾರೆ. ಅದ್ಭುತ ಪ್ರದರ್ಶನ ನೀಡಿದ ಋತುರಾಜ್​ನ ಉಳಿಸಿಕೊಳ್ಳಬೇಕಾ ಅಥವಾ ಫಿಟ್​ ಆದ್ರೆ ಶ್ರೇಯಸ್​ ಅಯ್ಯರ್​ಗೆ ಸ್ಥಾನ ನೀಡಬೇಕಾ ಎಂಬ ಗೊಂದಲವೂ ಸೆಲೆಕ್ಷನ್​ ಕಮಿಟಿಯನ್ನ ಕಾಡ್ತಿದೆ. 

ಇದನ್ನೂ ಓದಿ: ದೆವ್ವ ಹಿಡಿದಿದೆ ಅಂತ ಕಟ್ಟಿಗೆಯಿಂದ ಹೊಡೆದು ಅತ್ತಿಗೆ ಸಾಯಿಸಿದ ಬಾಮೈದರು..!

Shami_IND

ನ್ಯೂಜಿಲೆಂಡ್​ ವಿರುದ್ಧದ ಸರಣಿಯಿಂದ ತಂಡದ ಸೀನಿಯರ್​ ಆಟಗಾರರಿಗೆ ವಿಶ್ರಾಂತಿ ನೀಡೋ ಸಾಧ್ಯತೆ ದಟ್ಟವಾಗಿದೆ. ಇಂಜುರಿ ಮ್ಯಾನೇಜ್​ಮೆಂಟ್​ ಹಾಗೂ ಫೆಬ್ರವರಿಯಿಂದ ಆರಂಭವಾಗೊ ಟಿ20 ವಿಶ್ವಕಪ್​ ದೃಷ್ಟಿಯಿಂದ ಹಾರ್ದಿಕ್ ಪಾಂಡ್ಯ ಹಾಗೂ ವೇಗಿ ಜಸ್​ಪ್ರಿತ್​ ಬೂಮ್ರಾಗೆ ವಿಶ್ರಾಂತಿ ನೀಡಲು ಸೆಲೆಕ್ಷನ್ ಕಮಿಟಿ ಮುಂದಾಗಿದೆ. ಟೀಮ್​ ಮ್ಯಾನೇಜ್​ಮೆಂಟ್​ ಜೊತೆಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. 

ಸಿರಾಜ್​ ಕಥೆ ಏನು?

ಸೌತ್​ ಆಫ್ರಿಕಾ ಎದುರಿನ ಏಕದಿನ ಸರಣಿಯಿಂದ ಅನುಭವಿ ವೇಗಿ ಮೊಹಮ್ಮದ್​ ಸಿರಾಜ್​ನ ಡ್ರಾಪ್ ಮಾಡಲಾಗಿತ್ತು. ಸಿರಾಜ್​ ಅಲಭ್ಯತೆಯಲ್ಲಿ ಕಣಕ್ಕಿಳಿದ ಪ್ರಸಿದ್ಧ ಕೃಷ್ಣ, ಹರ್ಷಿತ್ ರಾಣಾ  ದುಬಾರಿ ಸ್ಪೆಲ್​ಗಳನ್ನ ಹಾಕಿದ್ರು. ಹೀಗಾಗಿ ಮುಂದಿನ ಸರಣಿಯಲ್ಲಿ ಮೊಹಮ್ಮದ್​ ಸಿರಾಜ್​ ಅವಕಾಶ ಸಿಗೋ ಸಾಧ್ಯತೆಯಿದೆ. ಆದ್ರೆ, ಅನುಭವಿ ವೇಗಿಯನ್ನ ಮೊಹಮ್ಮದ್​ ಶಮಿಯನ್ನ ಆಯ್ಕೆಗೆ ಪರಿಗಣಿಸೋದು ಅನುಮಾನವೇ.!

ಹಲವು ಯುವ ಆಟಗಾರರು ಕೂಡ ನ್ಯೂಜಿಲೆಂಡ್​ ಸರಣಿಯಲ್ಲಿ ಚಾನ್ಸ್​ ಗಿಟ್ಟಿಸಿಕೊಳ್ಳೋ ಕನಸು ಕಾಣ್ತಿದ್ದಾರೆ. ಕರ್ನಾಟಕದ ದೇವದತ್ ಪಡಿಕ್ಕಲ್​, ಜಾರ್ಖಂಡ್​ನ ಇಶಾನ್​ ಕಿಶನ್​, ಮುಂಬೈನ ಸರ್ಫರಾಜ್​ ಖಾನ್ ಸೇರಿದಂತೆ ಹಲವು ಆಟಗಾರರು ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಆದ್ರೆ, ಆಯ್ಕೆ ಸಮಿತಿ ಸರ್​​ಪ್ರೈಸ್​​ ಸೆಲೆಕ್ಷನ್​ ಮಾಡೋ ಸಾಧ್ಯತೆ ತುಂಬಾ ಕಡಿಮೆಯಿದೆ. 

ಇದನ್ನೂ ಓದಿ: ಇನ್ಪೋಸಿಸ್ ನಲ್ಲಿ ಫ್ರೆಶರ್ ಗಳ ಸಂಬಳದಲ್ಲಿ ಭಾರಿ ಏರಿಕೆ: 21 ಲಕ್ಷ ರೂಪಾಯಿವರೆಗೂ ಸಂಬಳ ನೀಡಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shubman Gill ODI series ODI Match India vs NewZealand IND vs NZ
Advertisment