/newsfirstlive-kannada/media/media_files/2025/12/27/kalaburagi-icident-2025-12-27-13-16-30.jpg)
ಕಲಬುರಗಿ: ದೆವ್ವ ಹಿಡಿದಿದೆ ಅಂತ ಬೇವಿನ ಕಟ್ಟಿಗೆಯಿಂದ ಹೊಡೆದು ಸಾ*ಸಿರುವ ಮಾಡಿರುವ ಘಟನೆ ಮಹಾರಾಷ್ಟ್ರದ ಮುರುಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುಕ್ತಬಾಯಿ (38) ಕೊಲೆಯಾದ ಮಹಿಳೆ.
ಮುಕ್ತಾಬಾಯಿ, ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ನಿವಾಸಿ. ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಅನ್ನೋರ ಮದುವೆಯಾಗಿದ್ದರು. ಕಳೆದ ನಾಲ್ಕು ದಿನಗಳ ಮುಕ್ತಬಾಯಿ ತಲೆ ಸುಸ್ತು ಬಂದು ಮನೆಯ ಬಳಿ ಬಿದ್ದಿದ್ದರು.
ಇದನ್ನು ನೋಡಿದ ಗಿಡ್ಡೆಪ್ಪನ ಸಹೋದರರು, ಅತ್ತಿಗೆಗೆ ದೆವ್ವ ಹಿಡಿದಿದೆ ಎಂದು ಬೇವಿನ ಕಟ್ಟಿಗೆಯಿಂದ ರಾತ್ರಿ ಮತ್ತು ಬೆಳಗ್ಗೆವರೆಗೆ ಹಲ್ಲೆ ಮಾಡಿದ್ದಾರೆ. ಬಳಿಕ ದೇವಲ ಗಾಣಗಾಪುರದ ದತ್ತನ ಸನ್ನಧಿಗೆ ತಂದು ದೆವ್ವ ಬಿಡಿಸಲು ಮುಂದಾಗಿದ್ದರು.
ದೆವ್ವ ಬಿಡಿಸಲು ಹಲ್ಲೆ ಮಾಡಿದ ಬಳಿಕ ಮುಕ್ತಾಬಾಯಿ ಸುಸ್ತಾಗಿ ಬಿದ್ದಿದ್ದರು. ಕೊನೆಗೆ ಕರೆ ಸಂಬಂಧಿಕರಿಗೆ ವಿಷಯ ತಿಳಿಸಲಾಯಿತು. ಅಲ್ಲಿಂದ ಮುಕ್ತಾಬಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮುಕ್ತಬಾಯಿ ಪ್ರಾಣಬಿಟ್ಟಿದ್ದಾರೆ.
ಇದನ್ನೂ ಓದಿ:ಹನಿ ಟ್ರಾಪ್​ಗೆ ವಿವಾಹಿತ ಬಲಿ? ಸುಂದರಿ ಸುತ್ತ ಸುತ್ತಿದ ಅಸಲಿ ಕತೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us