ಹನಿ ಟ್ರಾಪ್​ಗೆ ವಿವಾಹಿತ ಬಲಿ? ಸುಂದರಿ ಸುತ್ತ ಸುತ್ತಿದ ಅಸಲಿ ಕತೆ ಏನು?

ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ನೇ*ಣು ಬಿಗಿದುಕೊಂಡು ಪ್ರಾಣಬಿಟ್ಟಿರುವ ಘಟನೆ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ನಡೆದಿದೆ. ಬಾಲಾಜಿ ಸಿಂಗ್ (30) ಮೃತ ದುರ್ದೈವಿ.

author-image
Ganesh Kerekuli
chikkaballapura honeytrap (1)
Advertisment

ಚಿಕ್ಕಬಳ್ಳಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ನೇ*ಣು ಬಿಗಿದುಕೊಂಡು ಪ್ರಾಣಬಿಟ್ಟಿರುವ ಘಟನೆ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ನಡೆದಿದೆ. ಬಾಲಾಜಿ ಸಿಂಗ್ (30) ಮೃತ ದುರ್ದೈವಿ. 

ಈ ಬಾಲಾಜಿ ಸಿಂಗ್​ನ ದುಡುಕಿನ ನಿರ್ಧಾರದ ಹಿಂದೆ, ಹನಿಟ್ರ್ಯಾಪ್​ನ ಅನುಮಾನ ವ್ಯಕ್ತವಾಗಿದೆ. ಮೃತ ಬಾಲಾಜಿಗೆ ಈಗಾಗಲೇ ಮದುವೆಯಾಗಿ, ಮಗು ಇದೆ. ಹೀಗಿದ್ದೂ ಶಿಡ್ಲಘಟ್ಟ ಮೂಲದ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು. ಆಕೆಯ ಜೊತೆಯಲ್ಲೇ ಫೋನ್​ನಲ್ಲಿ ಬ್ಯುಸಿಯಾಗಿರುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮನೆ, ಫ್ಲಾಟ್ ಖರೀದಿ ಮುನ್ನ ಹುಷಾರ್.. ಓಜೋನ್ ಅರ್ಬಾನಾದಲ್ಲಿ ಭಾರೀ ಗೋಲ್ಮಾಲ್ ಆರೋಪ..!

chikkaballapura honeytrap (2)

ಅಕ್ರಮ ಸಂಬಂಧ ಶುರುವಾಗಿದ್ದು ಹೇಗೆ..?

ಮೃತನ ಕುಟುಂಬಸ್ಥರು ನೀಡಿರುವ ಮಾಹಿತಿಯಂತೆ.. ಬಾಲಾಜಿ ಸಿಂಗ್​ಗೆ​​​​​ ಮದ್ವೆಯಾಗಿ ಒಂದು​ ಮಗು ಇದೆ. ಆರೋಪಿ ಮಹಿಳೆಗೂ ಮದ್ವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರಂತೆ. ಇಬ್ಬರ ನಡುವೆ ಆರಂಭದಲ್ಲಿ ಆಗಿದ್ದು ಸ್ನೇಹ. ಈ ಸ್ನೇಹದ ಮೂಲ, ಆರೋಪಿ ಮಹಿಳೆಯ ಗಂಡ. ಈಕೆಯ ಗಂಡ ಬಾಲಾಜಿ ಸಿಂಗ್ ಮನೆಗೆ ಕಾರು ಚಾಲಕನಾಗಿ ಬಂದಿದ್ದ. 

ಈ ವೇಳೆ ಬಾಲಾಜಿ ಸಿಂಗ್​​ಗೆ ಆಕೆಯ ಪರಿಚಯ ಆಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ, ಸಲುಗೆ ಬೆಳೆದಿದೆ. ನಂತರ ಶುರುವಾಗಿದ್ದೇ ಅಕ್ರಮ ಸಂಬಂಧ. ನಂತರದ ದಿನಗಳಲ್ಲಿ ಇವರಿಬ್ಬರ ಅಕ್ರಮ ಸಂಬಂಧ ಜೋರಾಗುತ್ತಿದ್ದಂತೆಯೇ ಗಂಡ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ. ಕೊನೆಗೆ ಈ ವಿಚಾರ, ಬಾಲಾಜಿ ಸಿಂಗ್ ಮನೆಯವರಿಗೂ ಗೊತ್ತಾಗಿದೆ. 

ಇದನ್ನೂ ಓದಿ: ಪ್ಯಾನ್ ನಂಬರ್‌ಗೆ ಆಧಾರ್ ಲಿಂಕ್ ಮಾಡಲು ಡಿಸೆಂಬರ್ 31, ಕೊನೆ ದಿನ : ಆಧಾರ್-ಪ್ಯಾನ್ ಲಿಂಕ್ ಆಗದಿದ್ದರೇ, ಹಣಕಾಸು ಸೇವೆ ವ್ಯತ್ಯಯ!

chikkaballapura honeytrap (3)

ಬಾಲಾಜಿ ಸಿಂಗ್ ಪತ್ನಿ, ಒಂದು ದಿನ ಗಲಾಟೆ ಮಾಡಿದ್ದಾರೆ. ಆಗ, ಬಾಲಾಜಿ ಸಿಂಗ್​ ನೀನು ನನಗೆ ಬೇಕು. ಆಕೆ ಬೇಡ. ಅವಳನ್ನು ಬಿಡ್ತೀನಿ. ಆದರೆ ಅವಳು ನನ್ನನ್ನು ಬ್ಲಾಕ್​ ಮೇಲ್ ಮಾಡಿ ಹೆದರಿಸುತ್ತಿದ್ದಾಳೆ ಎಂದು ಪತ್ನಿ ಜೊತೆ ನೋವು ಹಂಚಿಕೊಂಡಿದ್ದ ಎನ್ನಲಾಗಿದೆ. ಅಷ್ಟಾದ ಮೇಲೆ, ಆರೋಪಿ ಮಹಿಳೆಗೆ ಬಾಲಾಜಿ ಕುಟುಂಬ ವಾರ್ನ್ ಮಾಡಿತ್ತು. ಹೀಗಿದ್ದೂ, ಬಾಲಾಜಿ ಮನೆಗೆ ಬಂದು ಆರೋಪಿ ಮಹಿಳೆ ನಾನು ಅವನ ಬಿಡಲ್ಲ ಎಂದಿದ್ದಳಂತೆ. 

ಇದೇ ವಿಚಾರಕ್ಕೆ ಹಲವು ಬಾರಿ ಗಲಾಟೆ ಆಗಿತ್ತು. ಅಕ್ರಮ ಸಂಬಂಧದಲ್ಲಿದ್ದ ಮಹಿಳೆ, ಬಾಲಾಜಿ ಸಿಂಗ್​ಗನ ಹನಿಟ್ರಾಪ್ ಮಾಡಿ ಬ್ಲಾಕ್ ಮೇಲ್ ಮಾಡ್ತಿದ್ದಳು ಎನ್ನಲಾಗಿದೆ. ಇದೇ ವಿಷಯಕ್ಕೆ ನಿನ್ನೆ ಆ ಮಹಿಳೆ ಜೊತೆ ಜಗಳವಾಡಿದ್ದ. ನಂತರ ಮನೆಯಲ್ಲಿ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾನೆ. ಸ್ಥಳಕ್ಕೆ ಗುಡಿಬಂಡೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಇದನ್ನೂ ಓದಿ:ಕೊಹಿನೂರ್ ವಜ್ರದ ಮಾಲೀಕರಿಗೆ ಇದೇ ಶಾಪ : ಪುರುಷ ಮಾಲೀಕರಿಗೆ ಸಾವು, ಸೋಲು : ಎಚ್ಚೆತ್ತ ಬ್ರಿಟಿಷರು ಮಾಡಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Honey trap
Advertisment