ಮನೆ, ಫ್ಲಾಟ್ ಖರೀದಿ ಮುನ್ನ ಹುಷಾರ್.. ಓಜೋನ್ ಅರ್ಬಾನಾದಲ್ಲಿ ಭಾರೀ ಗೋಲ್ಮಾಲ್ ಆರೋಪ..!

ಸಿಲಿಕಾನ್​ ಸಿಟಿ ಜನರೇ ಹುಷಾರ್​. ಮನೆ, ಫ್ಲಾಟ್​ ಅಂತ ಖರೀದಿ ಮಾಡೋ ಮುನ್ನ ನೂರು ಬಾರಿ ಯೋಚನೆ ಮಾಡಿ. ಯಾಕಂದ್ರೆ ಒಂದೇ ಫ್ಲಾಟ್​​ ತೋರಿಸಿ ಇಬ್ಬರಿಗೆ ಮೋಸ ಮಾಡ್ತಾರೆ ಹುಷಾರ್. ಖೆಡ್ಡಾಗೆ ಬಳಸಿ ಪಂಗನಾಮ ಹಾಕ್ತಾರೆ. ಈ ಬೃಹತ್​ ಗೋಲ್ಮಾಲ್​ ನ್ಯೂಸ್​ಫಸ್ಟ್​ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

author-image
Ganesh Kerekuli
ozone urbana (6)
Advertisment
  • ವಿನೋದ್​ ಕುಮಾರ್​​ ಎಂಬುವರಿಂದ ವಂಚನೆ ಆರೋಪ
  • ಫಾಲಾಕ್ಷ್ ಶ್ರೀಶೈಲ್ ವಾಲಿಶೆಟ್ಟಿ ಅವರ ಪರವಾಗಿ ದೂರು
  • 1 ಫ್ಲ್ಯಾಟ್​ನ​​ ಇಬ್ಬರಿಗೆ ಸೇಲ್​​ ಮಾಡಿದ್ದಾರೆ ಎಂದು FIR

ಸಿಲಿಕಾನ್​ ಸಿಟಿ ಜನರೇ ಹುಷಾರ್​. ಮನೆ, ಫ್ಲಾಟ್​ ಅಂತ ಖರೀದಿ ಮಾಡೋ ಮುನ್ನ ನೂರು ಬಾರಿ ಯೋಚನೆ ಮಾಡಿ. ಯಾಕಂದ್ರೆ ಒಂದೇ ಫ್ಲಾಟ್​​ ತೋರಿಸಿ ಇಬ್ಬರಿಗೆ ಮೋಸ ಮಾಡ್ತಾರೆ ಹುಷಾರ್. ಖೆಡ್ಡಾಗೆ ಬಳಸಿ ಪಂಗನಾಮ ಹಾಕ್ತಾರೆ. ಈ ಬೃಹತ್​ ಗೋಲ್ಮಾಲ್​ ನ್ಯೂಸ್​ಫಸ್ಟ್​ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. 

ಇದನ್ನೂ ಓದಿ: ಕಾಲು ಜಾರಿ ಬಾವಿಗೆ ಬಿದ್ದು ದುರಂತ ಅಂತ್ಯಕಂಡ ಯುವಕ.. ದಾರುಣ ಘಟನೆ

ozone urbana

ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್. ಇದೊಂದು ಪ್ರತಿಷ್ಟಿತ ಡೆವಲಪರ್ಸ್​ ಕಂಪನಿ. ಆದ್ರೀಗ ಶಾಕಿಂಗ್​ ಅಂದ್ರೆ ಈ ಕಂಪನಿ ವಿರುದ್ಧ ಮಹಾ ವಂಚನೆ ಆರೋಪ ಕೇಳಿ ಬಂದಿದೆ. ಫಾಲಾಕ್ಷ್ ಶ್ರೀಶೈಲ್ ವಾಲಿಶೆಟ್ಟಿ ಅನ್ನೋರಿಗೆ ಮಾರಾಟ ಮಾಡಿದ್ದ ಫ್ಲಾಟ್​ನ್ನ ಇನ್ನೋಬ್ಬರಿಗೆ ಮಾರಾಟ ಮಾಡಿದ್ದಾರಂತೆ

‘ಓಜೋನ್’ ವಂಚನೆ?

T-1102 ನಂಬರ್​ನ ಫ್ಲಾಟ್​ ಅನ್ನ ಫಾಲಕ್ಷ್ ಶ್ರೀಶೈಲ್ ವಾಲಿಶೆಟ್ಟಿ ಖರೀದಿ ಮಾಡಿರ್ತಾರೆ. 2017ರ ಡಿಸೆಂಬರ್ 15 ರಂದು ಕಾನೂನುಬದ್ಧವಾಗಿ ಓಜೋನ್ ಅರ್ಬಾನಾ ಡೆವಲಪರ್ಸ್​ನಿಂದ ಖರೀದಿಸಿರ್ತಾರೆ. ಈ ಫ್ಲಾಟ್​ ಖರೀದಿ ಮಾಡಿದ ಬಳಿಕ ಫಾಲಕ್ಷ್ ಶ್ರೀಶೈಲ್ ವಾಲಿಶೆಟ್ಟಿ ವಿದೇಶದಲ್ಲಿ   ವಾಸವಾಗಿದ್ದಾರೆ. 

ಇದನ್ನೂ ಓದಿ: ರಿಂಕು ಸಿಂಗ್ ಸ್ಫೋಟಕ ಶತಕ.. ಟಿ-20 ವಿಶ್ವಕಪ್​​ ಹೊಸ್ತಿಲಲ್ಲಿ ತಂಡಕ್ಕೆ ಗುಡ್​ನ್ಯೂಸ್..!

ozone urbana (2)

ಅದೇ ಫ್ಲಾಟ್​ ನಂಬರ್​​ T-1102  ಅಪಾರ್ಟ್​ಮೆಂಟ್​ ಅನ್ನ ಬೇರೊಬ್ಬ ವ್ಯಕ್ತಿಗೆ ಮಾರಾಟ ಮಾಡಲಾಗಿದೆ. ಸಬ್ಯಸಾಚಿ ದಾಸ್ ಎಂಬ ವ್ಯಕ್ತಿಗೆ ಎರಡನೇ ಸೇಲ್​​ ಡೀಡ್​ ಮಾಡಿ ಮಾರಾಟ ಮಾಡಲಾಗಿದೆ. ಅಷ್ಟೇ ಅಲ್ಲ, ಒಂದೇ ಆಸ್ತಿಯ ಮೇಲೆ ಎರಡು ಪ್ರತ್ಯೇಕ ಬ್ಯಾಂಕ್​ಗಳಿಂದ ಸಾಲ ಕೊಡಿಸಲಾಗಿದೆ. ಇಂಡಿಯಾಬುಲ್ಸ್ ಮತ್ತು SBI ಹಾಗೂ YES ಬ್ಯಾಂಕ್​ನಿಂದ ಪ್ರತ್ಯೇಕ ಸಾಲ ಕೊಡಿಸಲಾಗಿದೆ. ಫಾಲಕ್ಷ್ ಶ್ರೀಶೈಲ್ ವಾಲಿಶೆಟ್ಟಿ ಅವರ ಪರವಾಗಿ ಇದೀಗ ಅವ್ರ ಸ್ನೇಹಿತ ವಿನೋದ್​ ಕುಮಾರ್​​ ದೂರು ನೀಡಿದ್ದಾರೆ. 

ದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ವಿನೋದ್​ ಕುಮಾರ್​ ದೂರಿನನ್ವಯ FIR ದಾಖಲಾಗಿದೆ. ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಮೇಲೆ ವಂಚನೆ, ಕ್ರಿಮಿನಲ್ ಪಿತೂರಿ, ನಕಲಿ ಮತ್ತು ಹಣಕಾಸು ಸಂಸ್ಥೆಗಳಿಗೆ ನಷ್ಟವನ್ನುಂಟು ಮಾಡಿರುವ ಕೇಸ್​ ದಾಖಲಾಗಿದೆ. 

ಇದನ್ನೂ ಓದಿ: ಪರಿವಾಳಗಳಿಗೆ ‘ಕಾಳು’ ಹಾಕಿದ್ದಕ್ಕೆ ಶಿಕ್ಷೆ ಪ್ರಕಟಿಸಿದ ಕೋರ್ಟ್​! ದೇಶದಲ್ಲೇ ಇದು ಮೊದಲ ಪ್ರಕರಣ

ozone urbana (1)

ಗೋಲ್ಮಾಲ್​ನ ಆರೋಪಿಗಳು!

1. ಎಸ್. ವಾಸುದೇವನ್, ಮಾಜಿ ನಿರ್ದೇಶಕರು
2. ಪ್ರಿಯಾ ವಾಸುದೇವನ್, ವಾಸುದೇವನ್ ಪತ್ನಿ
3. ಸಾಯಿ ಪ್ರಸಾದ್, ನಿರ್ದೇಶಕರು
4. ದುರ್ಬಕಲಾ ವಂಶಿ ಸಾಯಿ, ನಿರ್ದೇಶಕರು
5. ಶ್ರೀನಿವಾಸನ್ ಗೋಪಾಲನ್, ಮಾಜಿ ಸಿಇಒ 
6. ಎಸ್. ಭಾಸ್ಕರನ್, ನಿರ್ದೇಶಕರು

ಅದೇನೇ ಹೇಳಿ ನಮ್ಮದು ಅಂತ ಒಂದು ಸೂರು ಇರಲಿ ಅಂತ ಸಾಲ ಸೂಲ ಮಾಡಿ ಮನೆ ಖರೀದಿಸೋಕೆ ಮುಂದಾಗೋರಿಗೆ ಹೀಗೆ ಪ್ರತಿಷ್ಠಿತ ಡೆವಲಪರ್ಸ್ ಮೋಸ ಮಾಡಿದ್ರೆ. ಯಾರ ನಂಬಬೇಕು ಯಾರನ್ನ ನಂಬಬಾರದು ಒಂದು ಗೊತ್ತಾಗಲ್ಲ. ಹೀಗಾಗಿ ಮನೆ, ಫ್ಲಾಟ್ ಖರೀದಿಸುವಾಗ ಜಾಗರೂಕಗಿರಬೇಕು. ಯಾಕಂದ್ರೆ ಮನೆ ಮಾರಿ ನೋಡು, ಟೋಪಿ ಹಾಕಿ ನೋಡು ಅನ್ನೋರು ನಮ್ಮ ಸುತ್ತಲೇ ಇರ್ತಾರೆ.. ಸೋ ಅಲರ್ಟ್. 

ವಿಶೇಷ ವರದಿ: ರಘ ಪೌಲ್​, ನ್ಯೂಸ್​ಫಸ್ಟ್​ ಬೆಂಗಳೂರು 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

ozone urbana
Advertisment