ರಿಂಕು ಸಿಂಗ್ ಸ್ಫೋಟಕ ಶತಕ.. ಟಿ-20 ವಿಶ್ವಕಪ್​​ ಹೊಸ್ತಿಲಲ್ಲಿ ತಂಡಕ್ಕೆ ಗುಡ್​ನ್ಯೂಸ್..!

ವಿಜಯ್ ಹಜಾರೆ ಟೂರ್ನಿಯಲ್ಲಿ ಟೀಂ ಇಂಡಿಯಾ ಸ್ಟಾರ್​ಗಳು ಅದ್ಭುತ ಫಾರ್ಮ್​ನಲ್ಲಿ ಕಾಣಿಸಿಕೊಂಡಿದ್ದು, ಟಿ-20 ವಿಶ್ವಕಪ್​​ಗೂ ಮುನ್ನವೇ ಗುಡ್​ನ್ಯೂಸ್ ಸಿಕ್ಕಂತಾಗಿದೆ. ಅಷ್ಟೇ ಅಲ್ಲ, ರಿಷಬ್ ಪಂತ್ ಕೂಡ ಫಾರ್ಮ್​ಗೆ ಮರಳಿದ್ದಾರೆ.

author-image
Ganesh Kerekuli
Rinku Singh
Advertisment

ವಿಜಯ್ ಹಜಾರೆ ಟೂರ್ನಿಯಲ್ಲಿ ಟೀಂ ಇಂಡಿಯಾ ಸ್ಟಾರ್​ಗಳು ಅದ್ಭುತ ಫಾರ್ಮ್​ನಲ್ಲಿ ಕಾಣಿಸಿಕೊಂಡಿದ್ದು, ಟಿ-20 ವಿಶ್ವಕಪ್​​ಗೂ ಮುನ್ನವೇ ಗುಡ್​ನ್ಯೂಸ್ ಸಿಕ್ಕಂತಾಗಿದೆ. 

ರಿಂಕು ಸಿಂಗ್​ ಸ್ಫೋಟಕ ಶತಕ 

ಟೀಮ್​ ಇಂಡಿಯಾ ಹಾಗೂ ಉತ್ತರ ಪ್ರದೇಶ ತಂಡದ ಬ್ಯಾಟ್ಸ್​ಮನ್​ ರಿಂಕು ಸಿಂಗ್​ ವಿಜಯ್​ ಹಜಾರೆ ಟೂರ್ನಿಯಲ್ಲಿ ಸ್ಪೋಟಕ ಶತಕ ಸಿಡಿಸಿದ್ದಾರೆ. ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ ರಿಂಕು ಸಿಂಗ್​ ಶತಕ ಪೂರೈಸಿದ್ದಾರೆ. 60 ಎಸೆತಗಳನ್ನ ಎದುರಿಸಿದ ರಿಂಕು ಸಿಂಗ್​, 11 ಬೌಂಡರಿ, 4 ಸಿಕ್ಸರ್​ ಸಿಡಿಸಿ ಮಿಂಚಿದ್ರು. 176ರ ಸ್ಟ್ರೈಕ್​ರೇಟ್​ನಲ್ಲಿ 106 ರನ್​ಗಳಿಸಿದ್ರು. ಇದ್ರೊಂದಿಗೆ ಚಂಡೀಗಢಕ್ಕೆ ಉತ್ತರ ಪ್ರದೇಶ ತಂಡ, 367 ರನ್​ಗಳ ಬಿಗ್​ ಟಾರ್ಗೆಟ್​ ನೀಡಿತು. 

ಇದನ್ನೂ ಓದಿ: ಪರಿವಾಳಗಳಿಗೆ ‘ಕಾಳು’ ಹಾಕಿದ್ದಕ್ಕೆ ಶಿಕ್ಷೆ ಪ್ರಕಟಿಸಿದ ಕೋರ್ಟ್​! ದೇಶದಲ್ಲೇ ಇದು ಮೊದಲ ಪ್ರಕರಣ

RISHABH_PANT (5)

ಪಂತ್ ಫಾರ್ಮ್​​ಗೆ ಕಂಬ್ಯಾಕ್​

ಸತತ ವೈಫಲ್ಯ ಕಂಡಿದ್ದ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ರಿಷಭ್ ಪಂತ್​, ವಿಜಯ್​​ ಹಜಾರೆ ಟೂರ್ನಿಯ 2ನೇ ಪಂದ್ಯದಲ್ಲಿ ರಿಧಮ್​ ಕಂಡುಕೊಂಡಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್​ ಆಫ್​​ ಎಕ್ಸಲೆನ್ಸ್​ನಲ್ಲಿ ನಿನ್ನೆ ನಡೆದ ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಪಂದ್ಯದಲ್ಲಿ 2 ಸಿಕ್ಸ್​, 8 ಬೌಂಡರಿ ಬಾರಿಸಿದ ಪಂತ್​ 79 ಎಸೆತಗಳಲ್ಲಿ 70 ರನ್​ಗಳಿಸಿದ್ರು. 

ಇದನ್ನೂ ಓದಿ: ಪಡಿಕ್ಕಲ್ ಸತತ 2ನೇ ಶತಕ.. ಕರ್ನಾಟಕಕ್ಕೆ 8 ವಿಕೆಟ್​ಗಳ ಭರ್ಜರಿ ಗೆಲುವು

ಕೊಹ್ಲಿಗೆ ಪಂದ್ಯಶ್ರೇಷ್ಠ ಗೌರವ

ವಿಜಯ್​ ಹಜಾರೆ ಟೂರ್ನಿಯಲ್ಲಿ ದೆಹಲಿ ಪರ ಕಣಕ್ಕಿಳಿದಿರೋ ವಿರಾಟ್​ ಕೊಹ್ಲಿ, ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ಪಂದ್ಯದಲ್ಲಿ ಕೇವಲ 29 ಎಸೆತಕ್ಕೆ ಅರ್ಧಶತಕ ಪೂರೈಸಿದ, ಕೊಹ್ಲಿ 61 ಎಸೆತಗಳಲ್ಲಿ 77 ರನ್​ಗಳಿಸಿದ್ರು. 13 ಬೌಂಡರಿ, 1 ಸಿಕ್ಸರ್​ ಸಿಡಿಸಿ ಮಿಂಚಿದ ಕೊಹ್ಲಿ, ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಸತತ 6ನೇ ಬಾರಿ ಅರ್ಧಶತಕದ ಗಡಿ ದಾಟಿದ ಸಾಧನೆ ಮಾಡಿದ್ರು. ಇದ್ರೊಂದಿಗೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಕೊಹ್ಲಿಗೆ 10 ಸಾವಿರ ರೂಪಾಯಿ ಬಹುಮಾನವಾಗಿ ಸಿಕ್ಕಿದೆ. 

Virat kohli (4)

ಅಂಗ್​ಕ್ರಿಶ್​ ರಘುವಂಶಿಗೆ ಗಂಭೀರ ಇಂಜುರಿ

ವಿಜಯ್​ ಹಜಾರೆ ಟೂರ್ನಿಯಲ್ಲಿ ಮುಂಬೈ ತಂಡದ ಬ್ಯಾಟ್ಸ್​ಮನ್ ಅಂಗ್​​ಕ್ರಿಶ್​ ರಘುವಂಶಿ ಗಂಭೀರ ಇಂಜುರಿಗೆ ತುತ್ತಾಗಿದ್ದಾರೆ. ಜೈಪುರದಲ್ಲಿ ನಡೆದ ಉತ್ತರಾಖಾಂಡ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್​ ವೇಳೆ ಅಂಗ್​ಕ್ರಿಶ್​ ಇಂಜುರಿಗೆ ತುತ್ತಾದ್ರು. ಇಂಜುರಿಗೆ ಬಳಿಕ ನಡೆಯಲು ಸಾಧ್ಯವಾಗದೇ ನೋವಲ್ಲಿ ನರಳಾಡಿದ ಯುವ ಆಟಗಾರರನ್ನ ಸ್ಟ್ರೆಚರ್​ ಮೂಲಕ ಮೈದಾನದಿಂದ ಕರೆದುಕೊಂಡು ಬರಲಾಗಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ಇದನ್ನೂ ಓದಿ: ನವವಿವಾಹಿತೆ ಗಾನವಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪತ್ನಿ ಬೆನ್ನಲ್ಲೇ ಸೂರಜ್ ಆತ್ಮಹತ್ಯೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Virat Kohli Rishabh Pant Rinku Singh Vijay Hazare Trophy
Advertisment