/newsfirstlive-kannada/media/media_files/2025/12/27/padikkal-karun-nair-2025-12-27-09-38-12.jpg)
ವಿಜಯ್​ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡದ ಗೆಲುವಿನ ಓಟ ಮುಂದುವರೆದಿದೆ. ಅಹ್ಮದಾಬಾದ್​ನಲ್ಲಿ ನಡೆದ ಕೇರಳ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕೇರಳ 7 ವಿಕೆಟ್​ ನಷ್ಟಕ್ಕೆ 284 ರನ್​ಗಳಿಸಿತು. ಈ ಗುರಿಯನ್ನ 48.2 ಓವರ್​ಗಳಲ್ಲಿ 2 ವಿಕೆಟ್​ ವಿಕೆಟ್​ ಕಳೆದುಕೊಂಡು ಕರ್ನಾಟಕ ತಂಡ ಬೆನ್ನಟ್ಟಿತು. ಕರ್ನಾಟಕ ದೇವದತ್ತ್​ ಪಡಿಕ್ಕಲ್​, ಕರುಣ್​ ನಾಯರ್​ ಶತಕ ಸಿಡಿಸಿ ಮಿಂಚಿದರು.
ದೇವದತ್​ ಪಡಿಕ್ಕಲ್​ ಅಬ್ಬರ ಮುಂದುವರೆದಿದೆ. ಕೇರಳ ವಿರುದ್ಧದ 2ನೇ ಪಂದ್ಯದಲ್ಲೂ ದೇವದತ್​ ಪಡಿಕ್ಕಲ್ ಶತಕ ಸಿಡಿಸಿ ಮಿಂಚಿದ್ದಾರೆ. 12 ಬೌಂಡರಿ, ಸಿಕ್ಸರ್​ ಸಿಡಿಸಿದ ಪಡಿಕ್ಕಲ್​ 137 ಎಸೆತಗಳಲ್ಲಿ 124 ರನ್​ಗಳಿಸಿದ್ರು. ವಿಜಯ್​​ ಹಜಾರೆ ಟೂರ್ನಿಯ ಮೊದಲ ಪಂದ್ಯದಲ್ಲೂ ಶತಕ ಸಿಡಿಸಿದ್ದ ಪಡಿಕ್ಕಲ್, ದಾಖಲೆಯ ಗೆಲುವಿಗೆ ಕಾರಣರಾಗಿದ್ರು. ಕರುಣ್ ನಾಯರ್, 130 ಬಾಲ್​ನಲ್ಲಿ 130 ರನ್​ಗಳಿಸಿ ನಾಟೌಟ್ ಆಗಿ ಉಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us